ಚಳಿಗಾಲ ಹೆಚ್ಚಾಗುತ್ತಿದ್ದೂ ಗದಗ ಪಟ್ಟಣದಲ್ಲಿ ಬಡವರಿಗೆ, ನಿರ್ಗತಿಕರಿಗೆ, ಮತ್ತು ವೃದ್ಧರಿಗೆ ಚಳಿಗಾಲದಲ್ಲಿ ಚಳಿ ಆಗದಿರಲೆಂದು ಜನರಿಗೆ ಕಂಬಳಿಗಳನ್ನು ಸೊಲಿಡಾರಿಟಿ ಯೂತ್ ಮೂಮೆಂಟ್ ವತಿಯಿಂದ ಉಚಿತವಾಗಿ ವಿತರಣೆ ಮಾಡಲಾಯಿತು.
ಹೊಸ ವರ್ಷದ ಅಂಗವಾಗಿ ಸೊಲಿಡಾರಿಟಿ ಯೂತ್ಸ್ ಮೂವ್ಮೆಂಟ್ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಮಾಮಸಾಬ ಮೊರ್ಬಾದ ಹಾಗೂ ಜುನೇದ್ ಉಮಚಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ ಯೂಸುಫ್ ಮುಲ್ಲಾ, ಕಾರ್ಯದರ್ಶಿಗಳಾದ ರಿಯಾಜ್ ಶೇಕ್ ಹಾಗೂ ಸಂಘದ ಕಾರ್ಯಕರ್ತರಾದ ಅಬ್ದುಲ್ ಆಫೀಸ್, ಮುನ್ನ ಕಲ್ಮನಿ, ಜಹೀರ್ ಅಹ್ಮದ್, ಜಾವೇದ ಉಮಚಗಿ, ಅಕ್ಬರ್ ಅತ್ತಾರ್, ಮೆಹಬೂಬ್ ಅಲಿ, ಕಾಸಿಂ ದರ್ಗಾದ, ವಾಸಿಂ, ಅಲ್ತಾಫ್ ನದಾಫ್, ಮಹಮ್ಮುದ ಫಹಿಮ್, ಸಮೀರ್ ಅಕ್ಕಿ, ತನ್ವೀರ್ ಶೇಕ್, ಆಸಿಫ್ ಶಿರಹಟ್ಟಿ ಉಪಸ್ಥಿತರಿದ್ದರು.





