“ರಾಜ್ಯ ಸರ್ಕಾರದಿಂದ ಅನುಷ್ಟಾನಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬದುಕು ಹಸನಾಗುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಬಡ ಜನರ ಜೀವನ ಮಟ್ಟ ಸುಧಾರಣೆಗೆ ಇವು ಸಹಕಾರಿಯಾಗಿವೆ” ಎಂದು ಗದಗ ತಾಲೂಕಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾದಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.
ಗದಗ ಜಿಲ್ಲೆಯ ಗದಗ ತಾಲ್ಲೂಕು ಯಲಿಶಿರೂರ ಗ್ರಾಮದಲ್ಲಿ ಹರ್ತಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಾರ್ವಜನಿಕ ಅಹವಾಲು ಸ್ವೀಕಾರ, ಸಮಸ್ಯೆಗಳ ಪರಿಹಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಗದಗ ತಾಲೂಕಿನಲ್ಲಿ ಶೇ 97.7 ರಷ್ಟು ಗುರಿ ಸಾಧನೆ ಮಾಡಿದ್ದು ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಫಭೆಯನ್ನು ಗ್ರಾಪಂ ಮಟ್ಟದಲ್ಲಿ ಏರ್ಪಡಿಸಲಾಗಿದ್ದು ಸಭೆಯ ಮೂಲಕ ಶೇಕಡ ನೂರರಷ್ಟು ಗುರಿ ಸಾಧನೆ ಮಾಡಲಾಗುವುದು” ಎಂದರು.
“ಪಂಚ ಗ್ಯಾರಂಟಿ ಯೋಜನೆಗಳು ನೇರವಾಗಿ ಫಲಾಭವಿಗಳಿಗೆ ದೊರೆಯುವ ನಿಟ್ಟಿನಲ್ಲಿ ಪ್ರತಿ ಹಂತದಲ್ಕಿ ಸಭೆ, ಪ್ರಗತಿ ಪರಿಶೀಲನೆ ನಡೆಸುತ್ತಿದ್ದು ಸರ್ಕಾರದ ಈ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯೋಜನೆಯ ಯಶಸ್ಸು ಸಾಧಿಸುವ ಮೂಲಕ ರಾಜ್ಯದ ಎಲ್ಲ ಬಡ ಕುಟುಂಬಗಳು ಬಡತನ ರೇಖೆಯಿಂದ ಹೊರಬಂದು ಸ್ವಾವಲಂಬಿ ಜೀವನ ನಡೆಸಲು ಆ ಮೂಲಕ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಬೇಕು. ಆ ದಿಶೆಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಗದಗ ಮತಕ್ಷೇತ್ರದಲ್ಲಿ ಜನರ ಮನೆಬಾಗಿಲಿಗೆ ಯೋಜನೆ ಫಲಾನುಭವಿಗಳ ಪರಿಹಾರಕ್ಕಾಗಿ ಸಭೆ ಆಯೋಜಿಸಲಾಗಿದೆ” ಎಂದರು.
ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯರಾದ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, “ಸರ್ಕಾರ ಬಡವರ ನೆರವಿಗಾಗಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಇಂದು ದೇಶದಲ್ಲಿಯೇ ಮಾದರಿಯಾಗಿದೆ. ಯೋಜನೆಗಳ ಸೌಲಭ್ಯಗಳು ಬಡವರ ಬದುಕು ರೂಪಿಸುವಲ್ಲಿ ಯಶಸ್ವಿಯಾಗುತ್ತಿವೆ. ಆ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳಿಂದ ಮಾನವ ಹಕ್ಕುಗಳನ್ನು ಎತ್ತರಿಸುವಲ್ಲಿ ಸಹಕಾರಿಯಾಗಿವೆ” ಎಂದರು.
“ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ವಿಳಂಬವಿಲ್ಲದೇ ತಲುಪಬೇಕು. ಇರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರಿಗೆ ಯೋಜನೆಗಳು ದೊರೆಯಲು ಹಾಗೂ ಆಗುವ ಅಡಚಣೆಗಳ ನಿವಾರಣೆಗಾಗಿಯೇ ಗದಗ ತಾಲೂಕಿನ ಗ್ರಾಪಂ ಮಟ್ಟದಲ್ಲಿ ಅಹವಾಲು ಸ್ವಿಕಾರ, ಸಮಸ್ಯೆಗಳಿಗೆ ಪರಿಹಾರ ಕೊಡುವ ಮೂಲ ಉದ್ಧೇಶದಿಂದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಭೆ ನಡೆಸುವ ಮೂಲಕ ಬಡವರ ಕೆಲಸ ಸರಾಗವಾಗಿ ಮುಟ್ಟಲು ತಾಲೂಕಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ವಿಶೇಷ ಕಾರ್ಯವನ್ನು ಮಾಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಗುರಿ ಸಾಧನೆ ಶೇ 97.7 ರಷ್ಟಾಗಿದೆ. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಯಾವುದೇ ತರಹದ ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಸಂಬಂಧ ಪಟ್ಟ ಗ್ರಾ.ಪಂ. ಅಧ್ಯಕ್ಷರು, ಪಿಡಿಓ ಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಅವೈಜ್ಞಾನಿಕ ಒಳಚರಂಡಿ ನಿರ್ಮಾಣದಿಂದ ರಸ್ತೆ ಮೇಲೆ ಹರಿದ ಕೊಳಚೆ ನೀರು: ಸಾರ್ವಜನಿಕರು ಹೈರಾಣು
ಈ ಸಂದರ್ಭದಲ್ಲಿ ಮಲ್ಲಪ್ಪ ದಂಡಿನ, ಗಣೇಶಸಿಂಗ್ ಮಿಠಡೆ, ಸಾವಿತ್ರಿ ಹೂಗಾರ, ಮಲ್ಲು ಬಾರಕೇರ, ಅಜ್ಜಪ್ಪ ಹುಗ್ಗೆಣ್ಣವರ,ದೇಸಾಯಿ, ಮೀನಾಕ್ಷಿ ಬೆನಕಣ್ಣವರ, ಯಲಿಶಿರೂರ ಗ್ರಾಮದ ನಿಂಗನಗೌಡ ಪಾಟೀಲ, ಗಂಗಯ್ಯ ಹಿರೇಮಠ, ಪರಶುರಾಮ ಹುಗಾರ, ಸುರೇಶ ಹೊಸಮನಿ, ಮಂಜುನಾಥ ಯಲಿ, ಮಂಜುನಾಥ ಭಜಂತ್ರಿ, ಶರಣಪ್ಪ ಡೊಣಿ, ತಾಜುದ್ದೀನ ಹೊಂಬಳ, ಕೊಟ್ರೇಶ ಕುಂದ್ರಳ್ಳಿ ಹರ್ತಿ ಗ್ರಾಮದಲ್ಲಿ ಪಿಡಿಓ ಶಿವಲೀಲಾ ಅಂಗಡಿ, ಬಿ.ಟಿ. ಸೋಮರಡ್ಡಿ, ಮಹೇಶ ಪಟ್ಟಣಶೆಟ್ಟಿ, ಪಿ.ಎಸ್. ಪಾಟೀಲ, ಎಫ್.ಎಸ್ ಪಾಟೀಲ, ಮಂಜುಳಾ ಬುದ್ದಪ್ಪನವರ, ಮುತ್ತು ನೀಲಗುಂದ, ಅಮರ ಕುರ್ತಕೋಟಿ, ಬಸವರಾಜ ಗಣಾಚಾರಿ, ಎಸ್.ವ್ಹಿ. ಕೋರಿ, ಶೇಖಪ್ಪ ಹುಡೇದ ಸೇರಿದಂತೆ ಮತ್ತಿತರರಿದ್ದರು.





