ಡಾ. ಬಿ. ಆರ್ ಅಂಬೇಡ್ಕರ್ 69ನೇ ಪರಿನಿರ್ವಾಣ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಪಂಜಿನ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ ಡಿಎಸ್ಎಸ್ ತಾಲ್ಲೂಕು ಸಂಚಾಲಕರು ಸುರೇಶ ನಂದೆಣ್ಣವರ ಮಾತನಾಡಿ, ಡಾ. ಬಿ. ಆರ್ ಅಂಬೇಡ್ಕರ ಅವರು ಹುಟ್ಟಿನಿಂದಲೇ ಜಾತಿಯ ಕಾರಣಕ್ಕಾಗಿ ಸಾಕಷ್ಟು ನೋವು, ಅವಮಾನ, ನಿಂದನೆಯನ್ನು ಅನುಭವಿಸಿ, ತಾನು ಅನುಭವಿಸಿದ ಅವಮಾನ, ನೋವು ನನ್ನ ಜನಗಳು ಅನುಭವಿಸಬಾರದೆಂದು ಹೋರಾಟ ಮಾಡುತ್ತಲೇ ಬಂದಿರುವರು. ಕೋಟ್ಯಾಂತರ ಅವಕಾಶ ವಂಚಿತ ಜನರಿಗೆ ಸ್ವಾಂತಂತ್ರ್ಯ, ಸಮಾನತೆ, ಘನತೆಯ ಬದುಕನ್ನು ಕಲ್ಪಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕಿನ ಹಾದಿ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ” ಎಂದರು.
“ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ, ದಾರ್ಶನಿಕ, ಸಂವಿಧಾನ ಶಿಲ್ಪಿಗೆ ಕೋಟಿ ಕೋಟಿ” ನಮನ ಸಲ್ಲಿಸಿದರು.”
ಇದೆ ಸಂದರ್ಭದಲ್ಲಿ ಬಸವಣ್ಣೆಪ್ಪ ನಂದೆಣ್ಣವರ, ದೇವಪ್ಪ ನಂದೆಣ್ಣವರ, ಫಕ್ಕಿರೇಶ ನಂದೆಣ್ಣವರ, ರಾಮು ಅಡಗಿಮನಿ, ಜಗದೀಶ ಹುಲಿಗೆಮ್ಮನವರ, ಮಲ್ಲೇಶ ಬಸವನಾಯ್ಕರ್, ಮಾಂತೇಶ ಗುಡಸಲಮನಿ, ನಾಗರಾಜ ನಂದೆಣ್ಣವರ, ರಮೇಶ ಗಡದವರ, ರಾಜು ಕಮತದ, ರಾಜು ಗಡದವರ, ರಾಜು ಭೀಮಣ್ಣವರ, ರಾಘವೇಂದ್ರ ನಂದೆಣ್ಣವರ, ಸಂತೋಷ ನಂದೆಣ್ಣವರ ಇನ್ನೂ ಅನೇಕ ಯುವಕರು, ಹಿರಿಯರು ಸೇರಿದಂತೆ ನೂರಾರು ಜನರು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಮಲ್ಲೇಶ ಮಣ್ಣಮ್ಮನವರ, ಸಿಟಿಜನ್ ಜರ್ನಲಿಸ್ಟ್ ಲಕ್ಷ್ಮೇಶ್ವರ





