ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇಂದು ಮನೆ ಅಡಿಪಾಯ ಅಗೆಯುವಾಗ ನಿಧಿ ಪತ್ತೆಯಾಗಿದ್ದು, ಗ್ರಾಮ ಹಾಗೂ ಸುತ್ತಮುತ್ತಲಿರುವ ಜನರಲ್ಲಿ ಕುತೂಹಲ ಮೂಡಿದೆ.
ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ನಂ 4ರಲ್ಲಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆಯ ಅಡಿಪಾಯ ಅಗೆಯುವಾಗ ನಿಧಿ ನಿಕ್ಕಿದೆ. ಒಂದು ಕೆಜಿ ತೂಕದ ಚಿನ್ನಾಭರಣಗಳು ದೊರೆತಿದೆ.
ನಿಧಿ ಪತ್ತೆಯಾದ ಸ್ಥಳಕ್ಕೆ ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಮತ್ತು ಪುರಾತತ್ವ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
“ನಿಧಿ ಪತ್ತೆಯಾಗಿದ್ದು, ದೊರೆತ ಚಿನ್ನಾಭರಣಗಳು ಯಾರ ಕಾಲದ್ದು ಎಂದು ತನಿಖೆ ನಂತರ ತಿಳಿಯಲಿದೆ” ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸ್ಯದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.





