ವಿಬಿ.ಜಿರಾಮ್‌ಜಿ ಕಾಯ್ದೆಯನ್ನು ಹಿಂಪಡೆದು ಮನರೇಗಾ ಕಾಯ್ದೆ ಯೋಜನೆ ಮುಂದುವರೆಸಿ ರೈತ, ಕೂಲಿ ಕಾರ್ಮಿಕರ, ಮಹಿಳೆಯರ ಪರ ಕಾನೂನುಗಳ ಜಾರಿಗಾಗಿ ಒತ್ತಾಯಿಸಿ ರೋಣ ತಾಲೂಕ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ಸಮಿತಿ ವತಿಯಿಂದ ಫೆಬ್ರವರಿ 12ರಂದು ಮುಷ್ಕರ ಹಮ್ಮಿಕೊಂಡಿದ್ದಾರೆ.
ಈ ಕುರಿತು ತಾಲೂಕಿನ ಬೆಳವಣಿಕಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಮಂತೂರ ಮಾತನಾಡಿ, ಗ್ರಾಮೀಣ ದುಡಿಯುವ ಜನರ ಮರಣ ಶಾಸನವಾದ ವಿಜಿ. ಜಿರಾಮ್‌ಜಿ ಯೋಜನೆ ರದ್ದು ಪಡಸಿ ಮೂಲ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕೂಲಿ ರೂ.600ಕ್ಕೆ ಹೆಚ್ಚಿಸಿ ಮತ್ತು ದುಡಿತದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ರಾಜ್ಯದಲ್ಲಿ ದುಡಿತದ ಅವಧಿಯನ್ನು ದಿನಕ್ಕೆ 12 ಗಂಟೆಗೆ ಹೆಚ್ಚಿಸಿರುವ ಆದೇಶ ಕೂಡಲೇ ಹಿಂಪಡೆಯಬೇಕು. ಜೀವನ ಯೋಗ್ಯ ಸ್ತ್ರೀಂ ನೌಕರರು ಹಾಗೂ ಇತರರಿಗೆ ಕನಿಷ್ಠ ವೇತನ ರೂ 36,000 ನಿಗದಿ ಮಾಡಬೇಕು.
ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಠ ರೂ. 8000 ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು. ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ, ಆಶಾ ಮುಂತಾದ ಸ್ತ್ರೀಂ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಗೊಳಿಸಬೇಕು,ಗುತ್ತಿಗೆ ಪದ್ಧತಿ ರದ್ದು ಪಡಿಸಿ ಖಾಯಂಯೇತ್ತರರ ಖಾಯಂಗೆ ಶಾಸನ ರೂಪಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು ಮತ್ತು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಬೇಕು. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ರಾಜ್ಯದಲ್ಲಿ ರೈತ ವಿರೋಧಿ, ಕಾರ್ಮಿಕ ವಿರೋಧಿ ತಿದ್ದುಪಡಿ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ಬಾಲು ರಾಠೋಡ ಮಾತನಾಡಿ, ಕೇಂದ್ರ ಮೋದಿ ಸರ್ಕಾರ ವಿದ್ಯುತ್ ಶಕ್ತಿ ಮಸೂದೆ 2020 ಖಾಸಗೀಕರಣ ಹಿಂಪಡೆಯಬೇಕು ಹಾಗೂ ಶಿಕ್ಷಣ ಇಲಾಖೆಯ NEP ಶಿಕ್ಷಣ ನೀತಿ ವಾಪಸ್ಸ ಆಗಬೇಕು ಹಾಗೂ ರಾಜ್ಯದಲ್ಲಿ KPS (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಗಳ ಪರಿಕಲ್ಪನೆಯಿಂದ ಶಾಲೆಗಳು ವಿಲೀನ ಮಾಡುವಲ್ಲಿ ಕೈ ಬಿಡಬೇಕು. ಶಿಕ್ಷಣಕ್ಕೆ ಆಗತ್ಯದಷ್ಟು ಬಜೆಟ್ಅನ್ನು ರಾಜ್ಯ, ಕೇಂದ್ರ ಸರಕಾರಗಳು ನೀಡಬೇಕು. ರಾಜ್ಯ ಸರ್ಕಾರ ದೇವದಾಸಿ ಮಹಿಳೆಯರಿಗೆ ಭೂಮಿ ಮನೆ ನಿದೇಶನ ಹಂಚಿಕೆ ಮಾಡಬೇಕು. ಅವರ ಪಿಂಚಣಿಯನ್ನು 5000 ಕ್ಕೆ ಹೆಚ್ಚಿಸಬೇಕು. ದೇವದಾಸಿ ಮಹಿಳೆಯರ ಪುನರ್ ಗಣತಿಮಾಡಿ ಸಂಪೂರ್ಣ ಪರ್ಯಯಾ ವ್ಯವಸ್ಥೆ ಮಾಡಬೇಕು ಎಂದರು.
2026ರ ಫೆಬ್ರುವರಿ 12ರಂದು ಉತ್ಪಾದನೆ ಸೇವೆ ಸ್ಥಗಿತಗೊಳಿಸಿ ರೈತರು, ಕಾರ್ಮಿಕರು, ಕೃಷಿ ಕೂಲಿಕಾರರು, ಮಹಿಳಾ ವಿದ್ಯಾರ್ಥಿ- ಯುವಜನರು, ದಲಿತ ಸಂಘಟನೆಗಳು ಜೊತೆಯಾಗಿ ಅಖಿಲ ಭಾರತ ಮುಷ್ಕರವನ್ನು ಯಶಸ್ವಿಗೊಳಿಸಲು ಕರೆ ನೀಡಿದರು. ಅದರ ಭಾಗವಾಗಿ ಅಂಗನವಾಡಿ , ಬಿಸಿಯೂಟ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಮುಷ್ಕರದ ಕರಪತ್ರವನ್ನು ಹಂಚಿ ಹೋರಾಟದ ಪ್ರಚಾರವನ್ನು ಮಾಡಿದರು.
ಇದನ್ನೂ ಓದಿ ಗದಗ | ಭೀಕರ ಅಪಘಾತ; ಮೂವರ ಸಾವು, 14 ಮಂದಿ ಗಾಯ
ಈ ಸಂದರ್ಭದಲ್ಲಿ ಸಿಐಟಿಯು ಗುರಪ್ಪ ಕಣ್ಣೂರ್, ಹನುಮಂ ತಾಳಿ, ಕೃಷ್ಣಪ್ಪ ಮಾಡೊಳಿ, ನಿಂಗಪ್ಪ ಅರುಣಸಿ, ಪ್ರಭು ಪೂಜಾರ, ಈಶ್ವರ್ ಜಕ್ಕಲ್ಲಿ, ಸುರೇಶ್ ಮಹಾರಾಜನವರ, ಸುರೇಶ್ ಚಲವಾದಿ ಭಾಗವಹಿಸಿದ್ದರು.





