ಗದಗ | ಜಿಲ್ಲೆ ಪ್ರಗತಿ ಹೊಂದುವ ಹೊತ್ತಲ್ಲಿ ‘ಜಾತಿ ವಿಷಕಾರಕ ಯಜ್ಞ’ ಬೇಕಿತ್ತೆ?: ಶರೀಫ್ ಬಿಳಿಯಲಿ

Date:

“ಗದಗ ಜಿಲ್ಲೆ ಇವತ್ತು ವೈಚಾರಿಕ ವೈಜ್ಞಾನಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಹೊಂದುವ ಹೊತ್ತಿನಲ್ಲಿ ಇಂತದೊಂದು ಜಾತಿ ವಿಷಕಾರಕ ಯಜ್ಞ ಬೇಕಿತ್ತೆ? ಈ ಯಜ್ಞ ಮುಂದಿನ ದಿನಗಳಲ್ಲಿ ಇದರ ರೂವಾರಿಗಳನ್ನೆ ಹಳ್ಳ ಹಿಡಿಸಲಿದೆ” ಎಂದು ದಲಿತಪರ ಹೋರಾಟಗಾರ ಶರೀಫ್ ಬಿಳಿಯಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗದಗ ಪಟ್ಟಣದ ವಿ.ಡಿ.ಎಸ್. ಟಿ ಮೈದಾನದಲ್ಲಿ ಅತಿರುದ್ರ ಮಹಾಯಜ್ಞ ಹಾಗೂ ಕಿರಿಯ ಕುಂಭಮೇಳ ನಡೆಯುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಅತೀರುದ್ರ ಮಹಾಯಜ್ಞ ಬ್ರಾಹ್ಮಣ್ಯ ಮತ್ತು ಬ್ರಾಹ್ಮಣರನ್ನು ಬಲಿಷ್ಠಗೊಳಿಸಿದಂತೆ ಕಾಣುತ್ತದೆ. ಉಳಿದವರೆಲ್ಲ ಇದರ ಕಾಲಾಳುಗಳಾಗಿ ಬದುಕುವಂತೆ ಮಾಡುತ್ತಿದೆ. ಕಾರಣವೆನೆಂದರೆ ಜಿಲ್ಲೆಯ ರಾಜಕಾರಣ ಕೆಲವೊಮ್ಮೆ ತನ್ನ ಕಾರ್ಯವೈಖರಿಯ ಮೂಲಕ ತನ್ನದೇ ಅಧಪತನಕ್ಕೆ ನಾಂದಿ ಹಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಈ ಮಹಾಯಜ್ಞ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಈ ಮಹಾಯಜ್ಞದಿಂದ ಕೆಲವರು ತಮ್ಮ ಅಭಿಪ್ರಾಯದಲ್ಲಿ  ಬಹುದಿನಗಳಿಂದ ಬಂದ ಗದಗನ ರಾಜಕಾರಣ ಇನ್ನು ಮುಂದೆ ಬದಲಾಗಲಿದೆ ಎನ್ನುತ್ತಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಈ ಯಜ್ಞದಲ್ಲಿ ಬ್ರಾಹ್ಮಣ್ಯ ಮತ್ತು ಬ್ರಾಹ್ಮಣರನ್ನು ಪೋಶಿಸಿದರೆ, ಅದು ನೇರವಾಗಿ ಹಿಂದೂ ಸಮಾಜವನ್ನು ಬೆಳಿಸಿದಂತೆ. ಹಿಂದೂ ಸಮಾಜವೆಂದರೆ ಈಗಾಗಲೇ ಅದರ ಗುತ್ತಿಗೆ ಪಡೆದಿರುವ ಬಿಜೆಪಿ ಮತ್ತು ಸಂಘಪರಿವಾರ. ಹೀಗಾಗಿ ಗದಗನ ರಾಜಕಾರಣ ಯಾರ ಪರವಾಗಿ ಈ ಯಜ್ಞವನ್ನು ಆರಂಭಿಸಿದೆ. ಮತ್ತು ಅದರ ಫಲ ಯಾರಿಗೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ ” ಎಂದು ಹೇಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಇನ್ನೊಂದು ಮುಖ್ಯ ವಿಷಯ ಅಲ್ಲಿಗೆ ಹೋದ ನಮ್ಮ ಕೆಲವು ಗೆಳಯರು ಹೇಳಿದ್ದು, ‘ನಾವು ಸಹ ಉದಾರವಾಗಿ ದೇಣಿಗೆಯನ್ನು ಕೊಟ್ಟು ಬಂದಿದ್ದೇನೆ’ ಎಂದು ಹೇಳಿದವರಿಗೆ ನಮ್ಮಿಂದ ಮಂಗಳಾರತಿನೂ ಮಾಡಿಸಿಕೊಂಡ್ರು. ಅಲ್ಲಿ ಜನಿವಾರಕ್ಕೆ ಮೊದಲ ಸಾಲು, ಶಿವದಾರಕ್ಕೆ ಎರಡನೇ ಸಾಲು ಮತ್ತು ಉಡುದಾರಕ್ಕೆ ಮೂರನೇ ಸಾಲು ಮಾಡಿದ್ದಾರಂತೆ, ಅಂದ್ರೆ ಶ್ರೇಣಿಕೃತ ವ್ಯವಸ್ಥೆಯಾಗಿದೆ” ಎಂದು ಟೀಕಿಸದ್ದಾರೆ.

“ಈ ಯಜ್ಞವನ್ನು ನಡೆಸುವ ಪ್ರಮುಖ ವ್ಯಕ್ತಿ ತನ್ನ ಆಜ್ಞೆಯನ್ನು ಪೂಜೆಯಲ್ಲಿ ಹೇಳುವಂತೆ, ಬ್ರಾಹ್ಮಣ ಲೋಗೋ ಯಜ್ಞಕುಂಡಕೆ ‘ಸಾಮನೆ ಆಕೆ ಬೈಟೋ, ಫಹಿಲೇ ಬ್ರಾಹ್ಮಣೊನೆ ಪೂಜಾ ವೀಧಾನ ಕರೋ, ಫಹಲೇ ಬ್ರಾಹ್ಮಣೋನೆ ಖಾನಾ ಖಾವೋ, ಬಾದಮೆ ದುಸರೆ ಲೋಗೊ ಖಾಹೋ, ಬ್ರಾಹ್ಮಣೋಕೊ ಪಾದ ಪೂಜಾ ಕರೋ ಬಾದ್ ಮೇ ಉನಕೋ ದಕ್ಷಣ್ ಕರೋ. ಯಹ ಜಮಾ ವುಹೇ ಸಬ್ ಲೋಗೊ ಸಾಧು‌ ಸಂತಕೋ ಪ್ರಣಾಮ ಕರೋ’ ಹೀಗೆ ಅವರು ಹೇಳಿದ್ದಾರೆ” ಎಂದರು

“ಈ ಎಲ್ಲ ಸಂಗತಿಗಳು ಸಮಾಜಕ್ಕೆ ಏನು ಸಂದೇಶ ಕೊಡುತ್ತಿವೆ. ಅಲ್ಲಿರುವ ಎಲ್ಲ ರಾಜಕಾರಣಿಗಳು ಇದನ್ನು ಕೇಳಿಸಿಕೊಂಡರೂ ಹೇಗೆ ಅಲ್ಲಿ ಕುಳಿತಿದ್ದಾರೆ. ಎಲ್ಲ ಜಾತಿ ಜನಾಂಗಕ್ಕೂ ರಾಜಕಾಣ ಬೇಕು. ಆದರೆ ಇಲ್ಲಿ ಅದೇ ರಾಜಕಾರಣಿಗಳು ತಮ್ಮದೇ ಶ್ರೇಷ್ಟವೆನ್ನುವಂತೆ ವರ್ತಿಸುತ್ತಿರುವುದು ನಿಜಕ್ಕೂ” ಶೋಚನೀಯ.

“ತಮ್ಮ ಧರ್ಮ ತಮ್ಮ ಜಾತಿ ಅಥವಾ ಪಂಥ ಏನೆ ಇದ್ದರೂ ಅದನ್ನು ತಮ್ಮ ತಮ್ಮ ಮನೆಗಳಲ್ಲಿ ಧರ್ಮ ಛತ್ರಗಳಲ್ಲಿ ಮಾಡಿದರೆ ಸೂಕ್ತ. ಇಲ್ಲಿ ಯಾವುದೇ ಅಥವಾ ಯಾರದೇ ಧರ್ಮದ ಆಚರಣೆಗೆ ಸಂವಿಧಾನ ಮುಕ್ತ ಅವಕಾಶ ನೀಡಿದೆ. ಆದರೆ ಅದು ಸಾರ್ವಜನಿಕವಾಗಿ ಬಹಿರಂಗವಾಗಿ ಮಾಡುವುದು ಸಂವಿಧಾನದ ಉಲ್ಲಂಘನೆಯಲ್ಲವೇ? ಎಂದು ಶರೀಫ ಅವರು ಪ್ರಶ್ನಿಸಿದ್ದಾರೆ.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...