ಗದಗ | ಮದ್ಯ ಸಾಗಾಟಕ್ಕೆ ಬಸ್ಸಿನಲ್ಲಿ ಅನುಮತಿ ನೀಡುವಂತೆ ಆಗ್ರಹ

Date:

ಬಸ್‌ನಲ್ಲಿ ಮದ್ಯ ಸಾಗಾಟ ಮಾಡಲು ಅನುಮತಿ ನೀಡಿ ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದು, ಗದಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

“ಸರ್ಕಾರ ಕ್ಷಣಕ್ಕೊಂದು ರೂಲ್ಸ್‌ ಬದಲಾವಣೆ ಮಾಡಿದರೆ ಹೇಗೆ? ನಾವು ಮದ್ಯವನ್ನು ಹೇಗೆ ತೆಗೆದುಕೊಂಡು ಹೋಗಬೇಕು? ಬಸ್‌ನಲ್ಲಿ ಮದ್ಯ ಸಾಗಾಟ ಮಾಡಬಾರದು ಎಂದರೆ ಹೇಗೆ? ನಾವೆಲ್ಲಿಗೆ ಹೋಗಬೇಕು? ಅದೆಲ್ಲಾ ಆಗಲ್ಲ, ಮದ್ಯ ಸಾಗಾಟಕ್ಕೆ ಅನುಮತಿ ಕೊಡಲೇಬೇಕು!” ಎಂದು ಆಗ್ರಹಿಸಿದ್ದಾರೆ.

“ಆರ್ಮಿ ಕ್ಯಾಂಟೀನ್‌ನಿಂದ ಖರೀದಿಸಿ ತಂದಿರುವ ಮದ್ಯ ಒಯ್ಯಲು ಬಸ್‌ನಲ್ಲಿ ಅವಕಾಶ ನೀಡುತ್ತಿಲ್ಲ. ಇದು ಸರಿಯಾದ ಕ್ರಮ ಅಲ್ಲ. ಬಸ್‌ ಉಚಿತವೆಂದು ಮಾಡಿದ ಮೇಲೆ ನೀವು ಒಮ್ಮಿಂದ ಒಮ್ಮೆಗೆ ಹೇಗೆ ನೀತಿಯನ್ನು ಬದಲಾವಣೆ ಮಾಡುತ್ತೀರಿ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಆರ್ಮಿ ಕ್ಯಾಂಟೀನ್‌ನಿಂದ ಕೊಡುವ ಮದ್ಯವನ್ನು ಸೈನಿಕರು ದೇಶಾದ್ಯಂತ ಎಲ್ಲಿಯಾದರೂ ಸಾಗಾಟ ಮಾಡುವ ಅವಕಾಶ ಹೊಂದಿದ್ದಾರೆ. ದೇಶವ್ಯಾಪಿ ಅವಕಾಶವಿದ್ದರೂ ಬಸ್‌ನಲ್ಲಿ ಏಕಿಲ್ಲ. ಧಾರವಾಡ ಸಿಎಸ್‌ಡಿ ಕ್ಯಾಂಟೀನ್‌ನಿಂದ ಮದ್ಯ ತಂದರೆ ಏನು ತೊಂದರೆ? ರೈಲು ಮತ್ತು ವಿಮಾನದಲ್ಲಿ ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಇಲ್ಲಿ ಬಸ್‌ನಲ್ಲಿ ಏಕೆ ಅವಕಾಶ ಕೊಡುತ್ತಿಲ್ಲ? ಇಲ್ಲಿಯೂ ಅನುಮತಿ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

“ಎರಡು ವಾರಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮದ್ಯ ತರುವಾಗ ಮಹಿಳೆಯರಿಗೆ ಅವಮಾನ ಮಾಡಲಾಗಿದೆ. ಮದ್ಯದ ಬಾಟಲ್‌ಗಳನ್ನು ಪ್ರಯಾಣಿಕರಿಗೆ ತೋರಿಸಿ ನಿರ್ವಾಹಕರು ಅವಮಾನಿಸಿದ್ದಾರೆ. ಹೀಗಾಗಿ ಬಸ್‌ಗಳಲ್ಲಿ ಮದ್ಯ ಸಾಗಾಟಕ್ಕೆ ಅನುಮತಿ ನೀಡಬೇಕು” ಎಂದು ಮಾಜಿ ಸೈನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ಮೂಲದ ಇಬ್ಬರು ಮಹಿಳೆಯರು ಹುಬ್ಬಳ್ಳಿಯಿಂದ ಮದ್ಯದ ಬಾಟಲ್‌ ಹಿಡಿದುಕೊಂಡು ಬಸ್‌ ಹತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ನಿರ್ವಾಹಕ ತಕರಾರು ಎತ್ತಿದ್ದು, ಹುಬ್ಬಳ್ಳಿಯಿಂದ ಗದಗಕ್ಕೆ ಹೋಗುತ್ತಿದ್ದ ಈ ಬಸ್‌ನಲ್ಲಿದ್ದ ಮದ್ಯ ಹಿಡಿದ ಮಹಿಳೆಯರನ್ನು ಬಸ್ಸಿನಿಂದ ಕೆಳಗೆ ಇಳಿಸಿದ್ದ. ಈ ಮಹಿಳೆಯರು ಹುಬ್ಬಳ್ಳಿಯ ಆರ್ಮಿ ಕ್ಯಾಂಟೀನ್‌ನಿಂದ ಮದ್ಯದ ಬಾಟಲ್ ತರುತ್ತಿದ್ದರು. ತಮಗೆ ಮದ್ಯ ಒಯ್ಯಲು ಅವಕಾಶ ನೀಡದೆ ಇದ್ದದ್ದು ಮಾತ್ರವಲ್ಲ, ಬಸ್ಸಿನಿಂದ ಕೆಳಗೆ ಇಳಿಸಿದ್ದರಿಂದ ಸಿಟ್ಟುಗೊಂಡ ಮಹಿಳೆಯರು ಕೂಡಲೇ ಗದಗ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದರು. ಬಳಿಕ ಅವರಿಗೆ ನಿವೃತ್ತ ಯೋಧರ ಸಂಘ ಬೆಂಬಲ ನೀಡಿದೆ.

ʻʻನಾವು ಈ ಹಿಂದೆ ಹಲವು ಬಾರಿ ಮದ್ಯ ತೆಗೆದುಕೊಂಡು ಬಂದಿದ್ದೇವೆ. ಅವತ್ತು ಇಲ್ಲದ ರೂಲ್ಸ್ ಇವತ್ತು ಯಾಕೆ?ʼʼ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ʻʻಹಾಗಿದ್ದರೆ ಮದ್ಯ ತರಲು ನಮಗೆ ಸರ್ಕಾರ ಯಾವುದಾದರೂ ದಾರಿ ತೋರಿಸಲಿʼʼ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಜ್ಯದ ಕೆಲವೆಡೆ ಮಳೆ; ನೆಲಕ್ಕುರುಳಿದ ಬೃಹತ್‌ ಮರ

“ಕುಡಿದು ಬಂದವರಿಗೆ ಬಸ್ಸಿನಲ್ಲಿ ಅವಕಾಶ ಕೊಡುತ್ತೀರಿ. ಆದರೆ, ಮನೆಗೆ ಮದ್ಯದ ಬಾಟಲ್ ತರಲು ಅವಕಾಶ ಯಾಕಿಲ್ಲ. ನಾವೇನು ಬಸ್ಸಿನಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದೇವಾ” ಎಂದು ಮಹಿಳೆಯರು ಕಂಡಕ್ಟರ್ ವಿರುದ್ಧ ಕಿಡಿಕಾರಿದ್ದರು.

ನಿವೃತ್ತ ಯೋಧರಿಗೆ ಆರ್ಮಿ ಕ್ಯಾಂಟೀನ್‌ಗಳಲ್ಲಿ ಅಗ್ಗದ ದರದಲ್ಲಿ ಮದ್ಯ ಪೂರೈಕೆ ಮಾಡಲಾಗುತ್ತದೆ. ಅದನ್ನು ನಿವೃತ್ತ ಯೋಧರು, ಇಲ್ಲವೇ ಅವರು ನಿಯೋಜಿಸಿದ ಮನೆಯ ಸದಸ್ಯರು ಬಂದು ಕೊಂಡೊಯ್ಯಲು ಅವಕಾಶವಿದೆ. ಈ ಹಿಂದೆ ಬಸ್ಸು ಸೇರಿದಂತೆ ನಾನಾ ವಾಹನಗಳ ಮೂಲಕ ಅವುಗಳನ್ನು ಮನೆಯವರು ಒಯ್ಯುತ್ತಿದ್ದರು. ಆದರೆ, ಈ ಬಾರಿ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದುದು ಬಸ್‌ ಕಂಡಕ್ಟರ್‌ಗೆ ತಿಳಿದು ಈ ಕಿರಿಕ್‌ ಉಂಟಾಗಿತ್ತು. ಬಸ್ಸಿನಲ್ಲಿ ಮದ್ಯ ಸಾಗಾಟಕ್ಕೆ ಅವಕಾಶ ಇಲ್ಲ ಎಂಬ ಮಾರ್ಗಸೂಚಿ ಇದೆಯಾದರೂ ಇದು ಎಲ್ಲ ಸಂದರ್ಭದಲ್ಲಿ ಪಾಲನೆ ಆಗುವುದಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...