ಗದಗ | ಒಳ ಮೀಸಲಾತಿ: ಪರಿಷ್ಕೃತ ರೋಸ್ಟ‌ರ್ ಬಿಂದು ಗುರುತಿಸಿ ನೇಮಕಾತಿ ಆರಂಭಿಸುವಂತೆ ಪ್ರತಿಭಟನೆ

Date:

“ಒಳಮೀಸಲಾತಿಗೆ ಸಂಬಂಧಿಸಿದಂತೆ ಫೆ.27ರಂದು ಹೊರಡಿಸಿರುವ ಡಿಪಿಎಆರ್ ಆದೇಶ ಹಿಂಪಡೆದು ಪರಿಷ್ಕೃತ ರೋಸ್ಟರ್ ಬಿಂದು ಗುರುತಿಸಿ 56 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು” ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಮಾದಿಗ ಸಂಘಟನೆ ಆಗ್ರಹಿಸಿತು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಶುಕ್ರವಾರ ಕರ್ನಾಟಕ ರಾಜ್ಯ ಮಾದಿಗರ ಸಂಘಟನೆಗಳ ಒಕ್ಕೂಟಗಳಿಂದ ಒಳಮಿಸಲಾತಿ ಜಾರಿಗೊಳಿಸಲು ಒತ್ತಾಯಿಸಿ ನಗರದ ಬಸ್ ತಂಗುದಾಣದ ಮುಂದೆ ಪ್ರತಿಭಟನೆ ನಡೆಸಿದರು.

ಕರ್ನಾಟಕ ದಲಿತ ಯುವ ಮುನ್ನಡೆ ರಾಜ್ಯಾಧ್ಯಕ್ಷ ಡಿ.ಬಿ.ಫಕ್ಕೀರಪ್ಪ ಮಾತನಾಡಿ, “56 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರಕಾರ ವಿಳಂಬ ಮಾಡುತ್ತಿರುವುದನ್ನು ನೋಡಿದರೆ ಮಾದಿಗ ಸಮುದಾಯವನ್ನು ಕೇವಲ ಒಟಿಗೆ ಬಳಸಿಕೊಳ್ಳುತ್ತಿದೆ. ಅಜ್ಯ ಸರಕಾರ ಕೆಲವರ ಹಿತ ಕಾಪಾಡುತ್ತಿದೆ. ಮಾನ್ಯ ಸಿದ್ಧರಾಮಯ್ಯನವರು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ‘ಕಾಂಗ್ರೇಸ್ ಅಧಿಕಾರಿಕ್ಕೆ ಬಂದರೆ ಒಳಮೀಸಲಾತಿಯನ್ನು ಜಾರಿ ಮಾಡುತ್ತೇವೆ. ಕೊಟ್ಟ ಮಾತಿಗೆ ನಾವು ತಪ್ಪುವುದಿಲ್ಲ’ ಎಂದು ಭರವಸೆ ನೀಡಿದ್ದರು. ಅದರೆ, ಈಗ ಮುಖ್ಯಮಂತ್ರಿಗಳು ಮಾತು ತಪ್ಪಿದ ಸಿಎಮ್ ಆಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಮಾಜದ ಹಿರಿಯ ಮುಖಂಡರಾದ ಕೋಟೆಪ್ಪ ವರದಿ ಅವರು ಮಾತನಾಡಿ, “ಎಸ್‌ಸಿ/ಎಸ್‌ಟಿ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಸುಮಾರು 40 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದೆ. ರಾಜ್ಯದ ಎಲ್ಲ ಪಕ್ಷದ ಸರಕಾರಗಳು ಬೇರೆಬೇರೆ ಕಾರಣಗಳನ್ನು ಹೇಳುತ್ತ ಬಂದಿದೆ” ಕಿಡಿಕಾರಿದರು.

ಸಿಎಂ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ನಾಗಮೋಹನ ದಾಸ್ ಅವರ ಏಕ ಸದಸ್ಯ ಆಯೋಗದ ವರದಿಯಂತೆ ಒಳಮೀಸಲಾತಿಯನ್ನು ಗ್ರುಪ್ ಎ.ಬಿ.ಸಿ ವರ್ಗೀಕರಣದಂತೆ ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ. ರಾಜ್ಯ ಸರಕಾರದ ಈ ವಿಳಂಬ ನಡೆ ಮಾದಿಗ ಸಮಾಜದ ತಾಳ್ಮೆ ಪರೀಕ್ಷಿಸುತ್ತಿದೆ. ಹೀಗೆ ವಿಳಂಬ ಮಾಡಿದರೆ ಮುಂದಿನ ದಿನಮಾನದಲ್ಲಿ ರಕ್ತಪಾತದಂತ ಹೋರಾಟಕ್ಕೂ ನಾವು ಸಜ್ಜಾಗುತ್ತೇವೆ. ಅಂತ ಸಮಯವನ್ನು ಕಲ್ಪಿಸಿಕೊಡುವಂತ ಕೆಲಸ ರಾಜ್ಯ ಸರಕಾರ ಮಾಡಬಾರದು” ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ರಾಜ್ಯ ಸರಕಾರಕ್ಕೆ ಎಚ್ವರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಸವಣ್ಣೆಪ್ಪ ನಂದಣ್ಣವರ, ಸುರೇಶ್ ನಂದಣ್ಣವರ್,  ದೇವಪ್ಪ ನಂದಣ್ಣವರ್, ಫಕೀರೇಶ  ನಂದಣ್ಣವರ್, ಫಕೀರೇಶ ಬಜಕ್‌ನವರ, ನಾಗರಾಜ ದೊಡ್ಡಮನಿ, ಮೋಹನ್ ಕರ್ಜಗಿ, ರಾಮು ಅಡಿಗಿಮನಿ, ರಾಮು ಗಡದವರ್, ಹನುಮಂತಪ್ಪ ಛಬ್ಬಿ, ಮಲ್ಲಿಕಾರ್ಜುನ್ ಪೂಜಾರಿ, ಮಾರ್ಥಂಡಪ್ಪ ಗಾಳಪ್ಪನವರ್, ಜಗದೀಶ್ ಹುಲಿಗೆಮ್ಮನವರ್, ಬಸವರಾಜ ನಂದಣ್ಣವರ್, ಮಲ್ಲೇಶ್ ಬಸವನಾಯ್ಕರ್, ಸಂತೋಷ ಹಾದಿಮನಿ, ಬಸವರಾಜ್ ಹಿರೇಮನಿ, ಹನುಮಂತಪ್ಪ ಹರಿಜನ್, ಗುಡ್ಡಪ್ಪ ಮತ್ತೂರು, ಮಧು ಹಾದಿಮನಿ, ಗಣೇಶ್ ಹಾದಿಮನಿ, ಗೋಣೆಪ್ಪ ಹರಿಜನ್, ಫಕ್ಕಿರೇಶ್ ಪೂಜಾರ್, ಬಸವರಾಜ ಗೋದಿ, ಗಂಗಾಧರ ಹರಿಜನ್, ಅನಿಲ್ ನಂದಣ್ಣವರ್, ಅಣ್ಣಪ್ಪ ಗುತ್ತಮ್ಮನವರ್, ಎಸ್‌ಬಿ ಲಕ್ಷ್ಮೇಶ್ವರ, ರವಿ ಬಜಕ್‌ನವರ್, ಗಾಳೆಪ್ಪ ಎಚ್ ಹರಿಜನ್, ಜಗದೀಶ ಹುಲಿಗೆಮ್ಮನವರ, ಕೋಟೆಪ್ಪ ವರ್ದಿ, ಮಲ್ಲೇಶ ಮಣ್ಣಮ್ಮನವರ ಮಾಂತೇಶ ಗುಡಸಲಮನಿ, ಹನಮಂತಪ್ಪ ಮಕರಬ್ಬಿ, ಗಣೇಶ ಹಾದಿಮನಿ , ನಿಂಗಪ್ಪ ಮಕರಬ್ಬಿ ಇನ್ನೂ ಅನೇಕರು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...