ತಿಂಗಳ ರಂಜಾನ್ ಕೊನೆಯ ದಿನ ಈದುಲ್ ಫಿತ್ರ ಹಬ್ಬದಲ್ಲಿ ಸಾಮೂಹಿಕ ನಮಾಜ್ ನ ಮಾಡುವ ಮೂಲಕ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೊಗೇರಿ ಗ್ರಾಮದಲ್ಲಿ ಪ್ರಾರ್ಥನೆ ಸಲ್ಲಿಸಿ ಆಚರಿಸಿದರು.
ನಂತರ ಗ್ರಾಮದ ಮದೀನಾ ಮಸೀದಿಯ ಧರ್ಮಗುರು ಹಾಫಿಜ ಬರಕತ್ ಅಲಿ ಮಾತನಾಡಿ, “ಮನುಷ್ಯ ಉಪವಾಸದಿಂದ ಆರಾಧನೆ, ಮನಸ್ಸು ಮನಸ್ಸನ್ನು ನಿಯಂತ್ರಿಸಲು ಕಲಿಯುತ್ತಾನೆ. ಮತ್ತು ಬುದ್ಧಿಯನ್ನು ಶುದ್ಧೀಕರಿಸಲು ಸಹಕಾರಿಯಾಗುತ್ತದೆ. ಒಂದು ತಿಂಗಳಲ್ಲಿ ಪಡೆದ ತರಬೇತಿ ಮುಂದಿನ ಹನ್ನೊಂದು ತಿಂಗಳೂ ಕಾಪಾಡಿಕೊಂಡಾಗ ಮಾತ್ರ ಈ ಹಬ್ಬಕ್ಕೆ ನಾವು ಕೊಡುವ ಬೆಲೆ” ಎಂದು ಹೇಳಿದರು.

“ಈ ಹಬ್ಬ ಆತ್ಮಗಳ ಆಶೀರ್ವಾದ, ಶಕ್ತಿ ಕೊಡುತ್ತದೆ. ನಾವು ಸದಾ ಖುಷಿಯಿಂದ ಇರಬೇಕಾದರೆ ದೇವರ ಆಶೀರ್ವಾದ ಬೇಕು. ಇದಕ್ಕಾಗಿ ಮನಸ್ಸು ಮತ್ತು ಬುದ್ಧಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪವಿತ್ರವಾದ ಹಬ್ಬದಲ್ಲಿ ಎಲ್ಲರೂ ಕಡ್ಡಾಯವಾಗಿ ದಾನ ನೀಡಿ ನಿರ್ವೀಕಾರಿಗಳಾಗಬೇಕು” ಎಂದರು.
ಉರ್ದುಶಾಲೆಯ ಮುಖ್ಯೋಪಾಧ್ಯಾಯರು ರಾಜೇಸಾಬ ಬಾಗವಾನ ಮಾತನಾಡಿದರು.
ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಗ್ರಾಮದ ಮುಸ್ಲಿಂ ಸಮಾಜದ ಹಿರಿಯರಾದ ದಾವಲಸಾಬ ಬಾಗವಾನ, ಹುಸೇನಸಾಬ ಬಡಿಗೇರ, ಯಮನೂರಸಾಬ ನಧಾಪ್, ಆಯ್ ಎಚ್ ಬಾಗವಾನ, ರಾಜೇಸಾಬ ಬಡಿಗೇರ, ಇಮಾಮಸಾಬ ಬಾಗವಾನ, ಶಾಬುದ್ದೀನ ನಧಾಪ್, ರಾಜು ವಾಲಿಕಾರ, ಕೆ ಕೆ ಬಾಗವಾನ, ಅಮೀನಸಾಬ ಬಾಗವಾನ, ಶಿಕ್ಷಕರಾದ ಆರ್ ಕೆ ಬಾಗವಾನ, ಹುಸೇನ್ ಬಾಗವಾನ ಇದ್ದರು.





