ನರಗುಂದ ನಗರದಲ್ಲಿ ಕುಡಿಯುವ ನೀರಿಗಾಗಿ ಹೋರಾಟ ನರಗುಂದ ನಗರದ ಮಾರುತಿ ನಗರ ವಿವೇಕಾನಂದ ನಗರ, ಚಂದ್ರ ಗೌಡ ಪ್ಲಾಟ್ ದಲ್ಲಿ 10 ದಿನಗಳಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾಗಿ ಆಕ್ರೋಶಗೊಂಡ ಸಾರ್ವಜನಿಕರು, ಮಹಿಳೆಯರು ಗದಗ ಜಿಲ್ಲೆಯ ನರಗುಂದ ಪಟ್ಟಣದ ಪುರಸಭೆಯ ಎದರು ಬ್ಯಾರಲ್, ಬಿಂದಿಗೆ, ಕುಡಿಯುವ ನೀರಿನ ಸಾಮಗ್ರಿಗಳನ್ನು ತಂದು ಪ್ರತಿಭಟನೆಯನ್ನು ನಡೆಸಿದರು.
ಈ ಪ್ರತಿಭಟನೆಯಲ್ಲಿ ಸಾರ್ವಜನಿಕರು ಮಾತಾನಾಡಿ, “ನಮ್ಮ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ ಇದ್ದರೂ ಕೂಡ ಯಾರು ಅಧಿಕಾರಿಗಳು ನಮ್ಮ ಓಣಿಯ ಕಡೆ ಗಮನಹರಿಸುತ್ತಿಲ್ಲ. ಅಧಿಕಾರಿಗಳು ಬೇಕಾಬಿಟ್ಟಿ ಹಾರಿಕೆ ಉತ್ತರಗಳನ್ನು ನೀಡುತ್ತಿದ್ದು, ನಮಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುತ್ತಿಲ್ಲ” ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರಾದ ದತ್ತಾತ್ರೇಯ ಜೋಗನವರ್ ಮಾತನಾಡಿ, “ಪಟ್ಟಣದ ಮಾರುತಿ ನಗರ, ವಿವೇಕಾನಂದ ನಗರ, ಚಂದ್ರಗೌಡ ಪ್ಲಾಟ್ ದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಸಾರ್ವಜನಿಕರು ಪ್ರತಿನಿತ್ಯ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅವರಿಗೆ ಮೂಲಭೂತ ಸೌಕರ್ಯಗಳು ಒದಗಿಸಿಕೊಡಬೇಕು” ಎಂದು ಎಚ್ಚರಿಕೆ ನೀಡಿದರು.
“ಇಲ್ಲವಾದಲ್ಲಿ ದಲಿತ ಪರ, ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಕೂಡಿಕೊಂಡು ಉಗ್ರ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಸಿದರು.
ವರದಿ : ಗುರುನಾಥ ಕೆಂಗಾರಕರ ಸಿಟಿಜನ್ ಜರ್ನಲಿಸ್ಟ್





