ಗದಗ | ಮಹಿಳೆಯರ ಸುರಕ್ಷತೆಗೆ ತಗಡುಗಳೇ ಆಸರೆ: ಮೂಲಸೌಕರ್ಯ ಒದಗಿಸುವಲ್ಲಿ ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ

Date:

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕಾಲೋನಿಗಳು ಅಂದ್ರೇನೆ ಅಧಿಕಾರಿಗಳಿಗೆ ಬೇಜವಾಬ್ದಾರಿ… ಶೌಚಾಲಯ ಇಲ್ಲದ ಕಾಲೋನಿಯಲ್ಲಿ ಮಹಿಳೆಯರು ತಮ್ಮ ಸುರಕ್ಷತೆಗಾಗಿ ತಗಡುಗಳನ್ನೇ ಆಸರೆಯಾಗಿ ಅವಲಂಬಿಸಿದ್ದಾರೆ. ಇಲ್ಲಿಯ ಜನರ ಸಮಸ್ಯೆಗಳು ಕಣ್ಣಿಗೆ ಕಂಡರೂ ನೋಡದ ಹಾಗೆ, ಕೇಳಿದರೂ ಕೇಳದ ಹಾಗೆ ವರ್ತಿಸುವ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜನರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲದೇ, ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.

ಗದಗ ಜಿಲ್ಲೆಯಲ್ಲಿ ಗಜೇಂದ್ರಗಡ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸುಮಾರು  150ರಿಂದ 200 ಮನೆಗಳಿವೆ. ಎರಡು ಸಾವಿರಕ್ಕೂ ಹೆಚ್ಚು ಜನರು ವಾಸವಿದ್ದು, ಸುಮಾರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಇಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಯ ಗಬ್ಬುನಾತ, ಶೌಚಾಲಯ ಇಲ್ಲದೇ ಮಹಿಳೆಯರ ಪಾಡು ಹೇಳದಂತಾಗಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ಹೇಳುತ್ತಾರೆ.

“ಈ ಪ್ರದೇಶದಲ್ಲಿ ದೊಡ್ಡದಾದ ಚರಂಡಿ ಇದ್ದು, ಸ್ವಚ್ಛಗೊಳಿಸದೇ ಎಷ್ಟೋ ವರುಷಗಳಾಗಿವೆ. ನಿತ್ಯ ಬೆಳಗಾದರೆ ಕಾಲೋನಿಯ ಜನರು ಗಬ್ಬುನಾತ ತಾಳಲಾರದೆ ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ಎದುರಾಗಿದೆ. ಚರಂಡಿಯ ಗಬ್ಬುನಾತದ ಜತೆಗೆ ಹಂದಿಯ ಕಾಟ, ಸೊಳ್ಳೆಗಳು ಕಾಟ ಅಧಿಕವಾಗಿದ್ದು, ಇದರಿಂದಾಗಿ ಅನಾರೋಗ್ಯದಲ್ಲಿ ಏರುಪೇರಾಗಿತ್ತಿದೆ. ಮಳೆಗಾಲದಲ್ಲಿ ಶಿವಾಜಿಪೇಟೆಯಿಂದ ಬರುವ ಸಾಕಷ್ಟು ನೀರು ಈ ಚರಂಡಿಗೆ ಸೇರುವುದರಿಂದ ಚರಂಡಿಯಲ್ಲಿದ್ದ ನೀರು, ಹೊಲಸು ರಸ್ತೆಯ ಮೇಲೆ ಹರಿಯತ್ತದೆ. ಇದರಿಂದ ಇಲ್ಲಿಯ ಜನರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಇಷ್ಟಾದರೂ ಯಾರೊಬ್ಬ ಅಧಿಕಾರಿಗಳೂ ಕೂಡ ಈ ಬಗ್ಗೆ ಕಾಳಜಿ ವಹಿಸಿಲ್ಲ” ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಮೂಲಸೌಕರ್ಯ ಕೊರತೆ

ಮಹಿಳೆಯರ ಸುರಕ್ಷತೆಗೆ ತಗಡುಗಳೇ ಆಸರೆ: ಶೌಚಾಲಯ ಇಲ್ಲದೇ ಕಾಲೋನಿಯ ಮಹಿಳೆಯರು ಚರಂಡಿಯ ದಡದಲ್ಲಿಯೇ ಶೌಚಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದ್ದು, ಸಾರ್ವಜನಿಕರಿಂದ ಮುಜುಗರಕ್ಕೆ ಒಳಗಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಲೋನಿಯ ಮಹಿಳೆಯರು ತಮ್ಮ ಸುರಕ್ಷತೆಗೆ ತಾವೇ ಒಟ್ಟುಗೂಡಿ ಹಣ ಸೇರಿಸಿ ಸುತ್ತಲೂ ತಗಡುಗಳನ್ನು ಹಾಕಿದ್ದಾರೆ. ಈಗ ಮಹಿಳೆಯರ ಸುರಕ್ಷತೆಗೆ ತಗಡುಗಳೇ ಆಸರೆಯಾಗಿವೆ.

ಪುರಸಭೆಯಿಂದ ಎರಡು ಶೌಚಾಲಯ ಇದ್ದು, ಶಿಥಲೀಕರಣಗೊಂಡು ಬಂದ್‌ ಆಗಿವೆ. ಪಕ್ಕದಲ್ಲಿಯೇ ಮೂರು ವರ್ಷಗಳ ಹಿಂದೆ ಹೊಸ ಶೌಚಾಲಯ ನಿರ್ಮಾಣ ಮಾಡಿದ್ದು, ಸಿಬ್ಬಂದಿ ಇಲ್ಲವೆಂಬ ನೆಪವೊಡ್ಡಿ ಆರಂಭಿಸಿಯೇ ಇಲ್ಲ, ಹಾಗಾಗಿ ಕಾಲೋನಿಯ ಮಹಿಳೆಯರು, “ಶೌಚಾಲಯಕ್ಕೆ ಮೂಲಸೌಕರ್ಯಗಳನ್ನು ಒದಗಿಸಿ ಸಮಾಧಾನದಿಂದ ಶೌಚಕ್ಕೆ ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.

ಮೂಲಸೌಕರ್ಯ ಕೊರತೆ 1

ಶುದ್ಧ ನೀರಿನ ಘಟನೆ ಆರಂಭಗೊಂಡಿಲ್ಲ: ಕಾಲೋನಿಯಲ್ಲಿ ಸುಮಾರು ಎಂಟು ವರ್ಷಗಳ ಹಿಂದೆಯೇ ಶುದ್ಧ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದರು. ಅಲ್ಲಿಂದ ಇಲ್ಲಿಯವರೆಗೂ ಆರಂಭವೇ ಆಗಿಲ್ಲ. ಇನ್ನೊಂದು ಕಾಲೋನಿಗೆ ಹೋಗಿ ಕುಡಿಯುವ ನೀರನ್ನು ತರುವಂತಾಗಿದೆ ಎಂಬುದು ಸ್ಥಳೀಯರ ಅಳಲಾಗಿದೆ.

ಹದಗೆಟ್ಟ ರಸ್ತೆ: ಅಂಬೇಡ್ಕರ್ ನಗರದ ರಸ್ತೆಗಳು ಹದಗೆಟ್ಟಿವೆ. ಮಳೆಯಾದರೆ ರಸ್ತೆಯುದ್ಧಕ್ಕೂ ಕೆಸರಾಗುತ್ತೆ. ವಾಹನ ಸವಾರರು ಬೀಳುವ ಭಯದಲ್ಲಿಯೇ ಸಂಚಾರ. ಇಲ್ಲಿಯ ಜನರು ಕೂಡಲೇ ರಸ್ತೆಗೆ ಕಾಂಕ್ರೀಟ್‌ ರಸ್ತೆ ಹಾಕಬೇಕು ಎಂದು ಮನವಿ ಮಾಡಿದರು.

ಗದಗ ಜಿಲ್ಲೆಯ ಮಹಿಳೆಯರ ಸುರಕ್ಷತೆಗೆ ತಗಡಿನ ತಡೆಗೋಡಿ

ಈ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ಡಾ. ಬಿ ಆರ್ ಅಂಬೇಡ್ಕರ್ ನಗರದ ನಿವಾಸಿ ಸಂಕಮ್ಮ ಕಂದಗಲ್ ಮಾತನಾಡಿ, “ನಮಗೆ ಮನೆ ಇಲ್ಲ. ಗಟಾರ ದಂಡೆಯ ಮೇಲೆಯೇ ಗುಡಿಸಲು ಹಾಕಿಕೊಂಡು ವಾಸ ಮಾಡ್ತಿದ್ದೀವಿ. ಗಟಾರ ಗಬ್ಬುನಾರುತ್ತಿದೆ. ಮಕ್ಕಳಿಗೆ ಅನಾರೋಗ್ಯ ತಪ್ಪುತ್ತಿದೆ. ನಮಗ ಗಟಾರ, ಶೌಚಾಲಯ ಮಾಡಿಸಿ ಕೊಡ್ರಿ ಪುಣ್ಯ ಬರತೈತಿ” ಎಂದು ಕೋರಿದರು.

ಈ ದಿನ.ಕಾಮ್ ಜತೆಗೆ ಸಿಐಟಿಯು ಸದಸ್ಯ ಕನಕರಾಯ ಹಾದಿಮನಿ ಮಾತನಾಡಿ, “ಸುಮಾರು ವರ್ಷಗಳಿಂದ ನಮ್ಮ ನಗರದಲ್ಲಿ ಮೂಲಭೂತ ಸಮಸ್ಯೆಗಳು ಅದಾವ್. ಚರಂಡಿ, ಮಹಿಳೆಯರಿಗೆ ಶೌಚಾಲಯ ಸಮಸ್ಯೆ, ರಸ್ತೆ ಸಮಸ್ಯೆಗಳಿವೆ. ಯಾವ ಅಧಿಕಾರಿಯೂ ನಮ್ಮ ಸಮಸ್ಯೆ ಕೇಳುತ್ತಿಲ್ಲ. ಬರ್ತಾರ ಹೋಗ್ತಾರ, ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿದ್ದೀರಾ? ಚಾಮರಾಜನಗರ | ಸರ್ವರ ಸಹಕಾರದೊಂದಿಗೆ ಸ್ವಾತಂತ್ರ್ಯ ದಿನಾಚರಣೆ : ಟಿ ಜವರೇಗೌಡ

ಈ ಕುರಿತು ಈದಿನ.ಕಾಮ್ ಫೋನ್ ಮೂಲಕ ಗಜೇಂದ್ರಗಡ ಪುರಸಭೆ ಮುಖ್ಯ ಅಧಿಕಾರಿ ಬಸವರಾಜ ಬಳಗಾನೂರು ಅವರನ್ನು ಸಂಪರ್ಕಿಸಿದಾಗ, “ಚರಂಡಿ ದುರಸ್ಥಿಗೊಳಿಸಲು ಅನುದಾನ ಬಂದಿದ್ದು, ಕೂಡಲೇ ಸರಿಪಡಿಸುತ್ತೇವೆ. ಶುದ್ಧ ನೀರಿನ ಘಟಕ ಹಾಗೂ ಮಹಿಳೆಯರಿಗೆ ಶೌಚಾಲಯಗಳು ಈಗಾಗಲೇ ನಿರ್ಮಾಣವಾಗಿದ್ದು, ಅವುಗಳನ್ನು ಕೂಡಲೇ ಆರಂಭಿಸುತ್ತೇವೆ” ಎಂದು ಹೇಳಿದರು.

ಡಾ. ಬಿ ಆರ್ ಅಂಬೇಡ್ಕರ್ ನಗರದ ಕಾಲೋನಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನರ ಸಮಸ್ಯೆಗಳನ್ನು ಅಧಿಕಾರಿಗಳು, ಜನಪ್ರತಿನಿದಿನಗಳು ಬಗೆಹರಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಭವಿಷ್ಯವನ್ನು ಸುಗಮಗೊಳಿಸಲು ಕೆರಿಯರ್ ಮೇಳ ಪೂರಕವಾಗಲಿ: ಸಿ.ಎನ್.ಶ್ರೀಧರ

"ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳು ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಉದ್ಯೋಗಕ್ಕಾಗಿ ಓದುವದು...

ಗದಗ | ಕುಡಿಯುವ ನೀರಿಗಾಗಿ ಕೊಡ, ಬಿಂದಿಗೆ ಹಿಡಿದು ಮಹಿಳೆಯರು ಪ್ರತಿಭಟನೆ

ನರಗುಂದ ನಗರದಲ್ಲಿ ಕುಡಿಯುವ ನೀರಿಗಾಗಿ ಹೋರಾಟ ನರಗುಂದ ನಗರದ ಮಾರುತಿ ನಗರ...

ಗದಗ | ಭಾರಿ ಆಲಿಕಲ್ಲು ಮಳೆ; ಗ್ರಾಮಸ್ಥರಲ್ಲಿ ಅಚ್ಚರಿ

ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಿನ್ನೆ ಸಂಜೆ...

ಗದಗ |ಎಸ್ ಎಸ್.ಎಲ್.ಸಿ. ಪರೀಕ್ಷೆ-1: ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪ್ರೋತ್ಸಾಹಧನ

ಗದಗ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸುವುದೇನೆಂದರೆ 2026ನೇ ಸಾಲಿನ ಎಸ್.ಎಸ್.ಎಲ್.ಸಿ...