ಲಕ್ಕುಂಡಿಯಲ್ಲಿ ಪ್ರಾಮಾಣಿಕತೆ ಮೆರೆದ ಬಡ ಕುಟುಂಬ: ನಿಧಿ ಒಪ್ಪಿಸಿದವರಿಗೆ‌ ನೆರವಾಗುವುದೇ ಸರ್ಕಾರ?

Date:

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಬಡ ಕುಟುಂಬವೊಂದು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಸಿಕ್ಕ ನಿಧಿ(ಬಂಗಾರದ ಆಭರಣ)ಯನ್ನು ಸ್ವಂತ ಬಳಕೆಗೆ ತೆಗೆದುಕೊಳ್ಳದೇ, ಯಾವುದೇ ಲಾಲಸೆಗೆ ಒಳಗಾಗದೆ ನೇರವಾಗಿ ಸರ್ಕಾರಕ್ಕೆ ಒಪ್ಪಿಸಿ ಅಪಾರ ಪ್ರಾಮಾಣಿಕತೆಯನ್ನು ಮೆರೆದಿದೆ.

ಸಾಮಾನ್ಯವಾಗಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಇಂತಹ ಸಂದರ್ಭಗಳಲ್ಲಿ ಹಣವೇ ದೊಡ್ಡ ಆಕರ್ಷಣೆಯಾಗುತ್ತದೆ. ಆದರೆ ಈ ಕುಟುಂಬ ನಮಗೆ ಸೇರದ್ದು ನಮಗೆ ಬೇಡ ಎಂಬ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಅಪೂರ್ವ ಸಂದೇಶ ನೀಡಿದೆ. ಅವರ ಈ ನಡೆ ಇಂದಿನ ಭ್ರಷ್ಟಾಚಾರ ಮತ್ತು ಸ್ವಾರ್ಥ ತುಂಬಿದ ಕಾಲಘಟ್ಟದಲ್ಲಿ ಅಪರೂಪದ ಬೆಳಕಿನ ಕಿರಣವಾಗಿದೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಿಸಲು ಅಡಿಪಾಯ ತೆಗೆಯುವಾಗ ಮಾಲೀಕರಿಗೆ ಸಿಕ್ಕ ನಿಧಿಯ ಕುರಿತು ಅಧಿಕಾರಿಗಳು ಹೇಳುವ ದ್ವಂದ್ವ ಹೇಳಿಕೆಗಳಿಂದ ಮನೆ ಮಾಲೀಕರಿಗೆ ಗೊಂದಲ ಉಂಟಾಗಿದ್ದು, ಸಂಕಟಕ್ಕೆ ಎಡೆ ಮಾಡಿದೆ. ಅಲ್ಲದೆ ಇದು ಬೇರೆ ಆಯಾಮಗಳಿಗೆ ತಿರುಗಿಕೊಳ್ಳುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜನವರಿ 10ರಂದು ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ(ಕಸ್ತೂರೆವ್ವಾ) ಬಸವರಾಜ ರಿತ್ತಿ ಎಂಬುವರು ಮನೆ ಕಟ್ಟಲು ಅಡಿಪಾಯ ಅಗೆಯುವಾಗ ಚಿನ್ನದ ಬಂಗಾರಗಳ ರೂಪದಲ್ಲಿರುವ ನಿಧಿ ಸಿಕ್ಕಿದ್ದು, ಗಂಗವ್ವ ರಿತ್ತಿ, ಮಗ ಪ್ರಜ್ವಲ್ ರಿತ್ತಿ ನಮ್ಮದಲ್ಲದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ತಿಳಿಸಿ, ʼನಮಗೆ ಜಾಗ ಕೊಡಿ. ಮನೆ ಕಟ್ಟಿಸಿ, ಉದ್ಯೋಗ ನೀಡಿʼ ಎಂದು ಮನವಿ ಮಾಡಿದ್ದಾರೆ.‌

ಪಾಟೀಲ್ 1

ಸಿಕ್ಕ ನಿಧಿಯಲ್ಲಿ ವಿವಿಧ ಚಿನ್ನಾಭರಣಗಳ 466 ಗ್ರಾಂ ಚಿನ್ನದ ನಿಧಿಯನ್ನು ಜಿಲ್ಲಾಧಿಕಾರಿ ದುರ್ಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ, ಪತ್ತೆಯಾದ ನಿಧಿಯನ್ನು ಸುರಕ್ಷಿತವಾಗಿ ಪೊಲೀಸರು ಇಟ್ಟುಕೊಂಡು ಪೊಲೀಸ್ ವರಿಷ್ಟಾಧಿಕಾರಿ ಮೂಲಕ ಸಚಿವ ಎಚ್ ಕೆ ಪಾಟೀಲ್ ಅವರಿಗೆ ಚಿನ್ನದ ನಿಧಿ ಸಿಕ್ಕಿರುವ ಮಾಹಿತಿಯನ್ನು ತಿಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವವರ ಗಮನಕ್ಕೂ ತರಲಾಗಿತ್ತು.

ಮರುದಿನ 11ನೇ ತಾರೀಕಿನಂದು ಲಕ್ಕುಂಡಿ ಗ್ರಾಮಕ್ಕೆ ಭೇಟಿ ನೀಡಿದ ಪುರಾತತ್ವ ಇಲಾಖೆಯ ಧಾರವಾಡ ಅಧಿಕ್ಷಕ ರಮೇಶ ಮೂಲಿಮನಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, “ಚಿನ್ನದ ನಾಣ್ಯಗಳು ಸಿಕ್ಕರೆ ಇತಿಹಾಸ ಅರಿಯಲು ಆಧಾರವಾಗುತ್ತಿತ್ತು. ಆದರೆ ನಿನ್ನೆ ಸಿಕ್ಕ ತಾಮ್ರದ ತಂಬಿಗೆಯಲ್ಲಿ ಚಿನ್ನಾಭರಣಗಳು ಮುರುದಿವೆ. ಹಿಂದೆ ಅಜ್ಜ ಮುತ್ತಜ್ಜರು ಸುರಕ್ಷತೆ ದೃಷ್ಟಿಯಿಂದ ಒಲೆ ಬಳಿ ಆಭರಣಗಳನ್ನು ಇಡುತ್ತಿದ್ದರು. ಅಂಥದ್ದೇ ಆಭರಣಗಳೇ ಹೊರತು ನಿಧಿ ಅಲ್ಲ” ಎಂದು ಹೇಳಿದ್ದರು.

ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಂತೆ ನಿಧಿ ಸಿಕ್ಕ ಸ್ಥಳದ ಮಾಲೀಕರು ಗಂಗವ್ವ ರಿತ್ತಿ ಹಾಗೂ ಕುಟುಂಬ, “ಅಧಿಕಾರಿಗಳು ನಿಧಿ ಅಲ್ಲ ಎನ್ನುತ್ತಿದ್ದಾರೆ. ಅಲ್ಲದಿದ್ದರೆ, ಬಂಗಾರ ನಮ್ಮದು. ನಮ್ಮ ಅಜ್ಜ, ಮುತ್ತಜ್ಜ, ಹಿರಿಕರು ಹಿಂದೆ ನಮ್ಮ ಮನೆಯಲ್ಲಿ ಇಟ್ಟಿರುವ ಬಂಗಾರ. ಅದನ್ನು ವಾಪಸ್ಸು ಕೊಡಿʼ ಎಂದರು.

ಬಂಗಾರದ ಆಭರಣ

ಮರುದಿನ 12 ತಾರೀಕಿನಂದು ಪತ್ರಿಕಾಗೋಷ್ಟಿಯಲ್ಲಿ ಪುರಾತತ್ವ ಇಲಾಖೆ ಧಾರವಾಡ ಅಧೀಕ್ಷಕ ರಮೇಶ ಮೂಲಿಮನಿ, ಹೇಳಿಕೆ ನೀಡಿದ್ದು, ಅನುಮಾನ ಮತ್ತು ಚರ್ಚೆಗೆ ಎಡೆಮಾಡಿತ್ತು. ಬಳಿಕ ಅವರು ಪತ್ರಿಕಾಗೋಷ್ಟಿಯಲ್ಲಿ “ಒತ್ತಡದಲ್ಲಿ ಹೇಳಿಕೆ ನೀಡಿದ್ದೆ. ಅದು ನಿಧಿಯಾಗಿದೆ. ಒತ್ತಡದಲ್ಲಿ ಹೇಳಿದ ಹೇಳಿಕೆಯನ್ನು ತಪ್ಪಾಗಿ ಭಾವಿಸಬೇಡಿ. ಅಲ್ಲಿ ಸಿಕ್ಕಿರುವ ನಿಧಿಯು ನೂರು ವರ್ಷಗಳ ಹಿಂದಿನಿಂದಾಗಿದ್ದು, ಪುರಾತನ ಆಭರಣಗಳಾಗಿವೆ. ನಿನ್ನೆ ನನ್ನ ಪರಿಸ್ಥಿತಿ ಹೇಗಿತ್ತೋ ಗೊತ್ತಿಲ್ಲ…. ಆದರೆ ಇವತ್ತು ಹೇಳುತ್ತಿರುವುದು ಸತ್ಯ” ಎಂದು ಹೇಳಿದ್ದಾರೆ.

ಅದೇ ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಸಿ. ಎನ್ ಶ್ರೀಧರ್ ಹೇಳಿಕೆ ನೀಡಿದ್ದು, “ನೂರು ವರ್ಷದ ಹಳೆಯ ಆಭರಣಗಳು. ಆಭರಣಗಳ ಸ್ವರೂಪ ಮತ್ತು ವಿನ್ಯಾಸ ಗಮನಿಸಿದರೆ ನೂರು ವರ್ಷಗಳ ಹಿಂದಿನದು ಎಂಬುದು ಖಾತರಿಯಾಗುತ್ತದೆ. ಆ ಬಂಗಾರ ತುಂಬಾ ಹಳೆಯ ಕಾಲದ್ದು” ಎಂದು ಹೇಳಿದ್ದಾರೆ.

13 ತಾರೀಕಿನಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅವರು ಲಕ್ಕುಂಡಿ ಗ್ರಾಮಕ್ಕೆ ಬಂದು, ನಿಧಿ ಸಿಕ್ಕ ಸ್ಥಳವನ್ನು ಪರಿಶೀಲನೆ ನಡೆಸಿ, ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಸಿಕ್ಕ ನಿಧಿ ನಮ್ಮದಲ್ಲವೆಂದು ಸರ್ಕಾರಕ್ಕೆ ನೀಡುವ ಪ್ರಜ್ವಲ್ ರಿತ್ತಿ ಹಾಗೂ ಅವರ ತಾಯಿ ಕಸ್ತೂರೆವ್ವಾ ರಿತ್ತಿ ಅವರ ಗುಣ ನಿಧಿಗಿಂತ ಹೆಚ್ಚು ಬೆಲೆ ಬಾಳುವಂತಹದ್ದು. ಅವರು ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದು, ನಮ್ಮ ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ” ಎಂದು ಸಚಿವ ಎಚ್ ಕೆ ಪಾಟೀಲ್ ಶ್ಲಾಘಿಸಿದರು.

ಪಾಟೀಲ್‌ ಸುದ್ದಿಗೋಷ್ಟಿ

“ಈ ಗ್ರಾಮಸ್ಥರು, ಹಿರಿಯರು ‘ಈ ಕುಟುಂಬಕ್ಕೆ ಜಾಗ ಕೊಟ್ಟು ಮನೆ ಕಟ್ಟಿಸಿಕೊಡಬೇಕು. ಜತೆಗೆ ಬಾಲಕನ ತಾಯಿಗೆ ಉದ್ಯೋಗ ಕೊಡಬೇಕು’ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಈ ವಿಚಾರಗಳ ಕುರಿತು ನಾಳೆ ಮಾನ್ಯ ಮುಖ್ಯಮಂತ್ರಿಗಳ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಕಾನೂನು ಪ್ರಕಾರ ಪ್ರಜ್ವಲ್ ರಿತ್ತಿ ಹಾಗೂ ಅವರ ತಾಯಿ ಕಸ್ತೂರೆವ್ವಾ ರಿತ್ತಿ ಕುಟುಂಬಕ್ಕೆ ಯಾವ ರೀತಿಯ ಗೌರವ ಮತ್ತು ನೆರವು ನೀಡಬೇಕು ಎಂಬ ನಿರ್ಧಾರವನ್ನು ಸಂಜೆಯೊಳಗೆ ಪ್ರಸ್ತಾಪ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಲಕ್ಕುಂಡಿ ಗ್ರಾಮದ ಪ್ರಜ್ವಲ್ ರಿತ್ತಿ ಹಾಗೂ ತಾಯಿ ಗಂಗವ್ವ ಬಸವರಾಜ ರಿತ್ತಿ ತಮ್ಮ ಮನೆ ಅಡಿಪಾಯ ತೆಗೆಯುವಾಗ ಸಿಕ್ಕ ನಿಧಿಯನ್ನು, ನಮ್ಮದಲ್ಲದ ಸಿಕ್ಕ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ತಲುಪಿಸಿದ್ದಾರೆ. ತಾಯಿ ಹಾಗೂ ಮಗ ಬಡತನದಲ್ಲಿ ಬದುಕುತ್ತಿದ್ದಾರೆ. ಹೂ ಕಟ್ಟಿ ಜೀವನ ಸಾಗಿಸುವ ಕುಟುಂಬವಾಗಿದೆ. ಪ್ರಾಮಾಣಿಕವಾಗಿ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕಸ್ತೂರೆವ್ವಾ ರಿತ್ತಿ ಹಾಗೂ ಮಗ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕೆನ್ನುವುದು ಗ್ರಾಮಸ್ಥರು ಮತ್ತು ಕುಟುಂಬದ ಬೇಡಿಕೆಯಾಗಿದೆ….

ಇದನ್ನೂ ಓದಿದ್ದೀರಾ? ನಿರುದ್ಯೋಗ ವರ್ಷವಾಗಲಿದೆ 2026: AI ಪಿತಾಮಹ ಜೆಫ್ರಿ ಹಿಂಟನ್‌ ಎಚ್ಚರಿಕೆ!

ನಿಧಿ ಅಷ್ಟೇ ಅಲ್ಲ ಭೂಮಿಯ ಒಳಗೆ ಏನಾದರೂ ಸಿಕ್ಕರೆ, ಅದು 10 ರೂಪಾಯಿ ಮೌಲ್ಯಕ್ಕಿಂತ ಹೆಚ್ಚಾಗಿದ್ದರೆ ಅದನ್ನು ನಿಸ್ಸಂದೇಹವಾಗಿ ಸರ್ಕಾರದ ಸ್ವತ್ತು ಎನ್ನಲಾಗುತ್ತದೆ. 10 ರೂಪಾಯಿ ಬೆಲೆಯ ಮೇಲ್ಪಟ್ಟ ನಿಧಿ ಸಿಕ್ಕರೂ ಕೂಡಾ ಅಲ್ಲಿನ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಒಂದು ವೇಳೆ ಸಿಕ್ಕ ಬಂಗಾರ 100 ವರ್ಷಕ್ಕಿಂತ ಮೇಲ್ಪಟ್ಟಿದ್ದಾದರೆ ಅದು ಸರ್ಕಾರದ ಸ್ವತ್ತಾಗುತ್ತದೆ. ಆ ನಿಧಿಯಲ್ಲಿ 5ನೇ 1 ಭಾಗವನ್ನು ಜಾಗದ ಮಾಲೀಕರಿಗೆ ನೀಡುವ ಅವಕಾಶವಿದ್ದು, ಆ ನಿರ್ಧಾರವನ್ನು ಡಿಸಿಗೆ ನೀಡಲಾಗಿದೆ. ಒಂದು ವೇಳೆ ನಿಧಿ ಸಿಕ್ಕ ಮಾಹಿತಿಯನ್ನು ಡಿಸಿಗೆ ತಿಳಿಸದೆ ಮುಚ್ಚಿಟ್ಟರೆ 1 ವರ್ಷದ ವರೆಗೆ ಜೈಲು ಶಿಕ್ಷೆಯಾಗಲಿದೆ. ಸಿಕ್ಕ ನಿಧಿ 100 ವರ್ಷದ ಒಳಗಿನ ಸ್ವತ್ತು ಆಗಿದ್ರೆ, ಕರ್ನಾಟಕ ನಿಧಿ ಕಾಯಿದೆ 1962ರ ಪ್ರಕಾರ ಜಿಲ್ಲಾಧಿಕಾರಿ ವಿಚಾರಣೆ ನಡೆಸಿ ಮುಂದಿನ ನಿರ್ಧಾರ ಮಾಡಲಾಗುತ್ತದೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...