ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಗಾಂಧಿನಗರದಿಂದ ಗದ್ದೆಕಣ್ಣೂರಿಗೆ ಹೋಗುವ ರಸ್ತೆ ಪಕ್ಕದ ಸರ್ವೆ ನಂ 453/2 ರ ರಸ್ತೆಯ ಜಾಗವನ್ನು ಒತ್ತುವರಿ ಮಾಡುತ್ತಿದ್ದು ಕೂಡಲೇ ಒತ್ತುವರಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಗಾಂಧಿನಗರ ಸ್ಥಳೀಯರು ಜಿಲ್ಲಾಧಿಕಾರಿ ಕಛೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕೋಲಾರದ ಅಮಾನಿಕೆರೆಗೆ ಸೇರಿದ 452/3 ಸರ್ವೆ ನಂಬರ್ ಜಾಗವು ವಾರ್ಡ್ 2 ಗಾಂಧಿನಗರ ನಗರಸಭೆ ವ್ಯಾಪ್ತಿಯಲ್ಲಿ ಬರುತ್ತಿದ್ದು ಗಾಂಧಿನಗರ ಗದ್ದೆಕಣ್ಣೂರು ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಹಾಲಿ ಇರುವ ಚರಂಡಿ ಪಕ್ಕದಲ್ಲಿ ಸುಮಾರು 40 ಅಡಿ ಯಿಂದ 150 ಮೀಟರ್ ಸರ್ಕಾರಿ ಜಾಗ ಲಭ್ಯವಿದ್ದು, ದಿವಂಗತ ಮುನಿಸ್ವಾಮಿಗೌಡರ ಮಕ್ಕಳು ಸದರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಲೇಔಟ್ ಅಭಿವೃದ್ಧಿ ಪಡಿಸುತ್ತಿದ್ದು ಕೂಡಲೇ ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರಿಂದ ದಾಖಲೆಗಳನ್ನು ಪಡೆದು ಸರ್ಕಾರಿ ಜಾಗವನ್ನು ಉಳಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ..?ಕೋಲಾರ ತಾಲೂಕಿನ ಶಾಸಕರು ಕೆಲಸ ಹೆಚ್ಚು ಮಾಡ್ತಾರೆ, ಪ್ರಚಾರ ತಗೋಳುವುದಿಲ್ಲಾ
ಈ ಸಂದರ್ಭದಲ್ಲಿ ಸ್ಥಳೀಯರಾದ ಭಗತ್ ನಾರಾಯಣಸ್ವಾಮಿ, ಎಂ.ವಿಜಯಕೃಷ್ಣ, ರಾಮಚಂದ್ರಪ್ಪ, ಕೆ.ವಿ.ಮಂಜುನಾಥ್, ಪವಿತ್ರಕುಮಾರ್, ನರೇಶ್, ಗಡ್ಡಂ ಮುನಿರಾಜು ಮತ್ತಿತರರು ಇದ್ದರು





