ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕುಟ್ರಳ್ಳಿ ಸಮೀಪದ ಟೋಲ್ ಗೇಟ್ ತೆರವುಗೊಳಿಸುವಂತೆ ಒತ್ತಾಯಿಸಿ ಗುರುವಾರ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ರೈತ ಸಂಘ ವರ್ತಕರ ಸಂಘ ಖಾಸಗಿ ಬಸ್ ಖಾಸಗಿ ಲಾರಿ ಮಾಲೀಕರ ಸಂಘ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರೆ ನೀಡಿದ್ದ ಶಿಕಾರಿಪುರ ಬಂದ್ ಗೆ ಪಟ್ಟಣದಲ್ಲಿ ಖಾಸಗಿ ಬಸ್ ಮಾಲೀಕರು ಲಾರಿ ಮಾಲೀಕರು ಟ್ಯಾಕ್ಸಿ ಆಟೋ ಚಾಲಕರು ಹೋಟೆಲ್ ಮಾಲೀಕರು ಬಟ್ಟೆ ಅಂಗಡಿ ಮಾಲೀಕರು ವಿವಿಧ ಅಂಗಡಿ ಮುಗ್ಗಟ್ಟುಗಳ ಮಾಲೀಕರಿಂದ ಉತ್ತಮ ಪ್ರತಿಕ್ರಿಯೆ ದೊರೆಕಿದೆ.
ಪಟ್ಟಣದಲ್ಲಿ ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಬಸ್ ಗಳು ಎಂದಿನಂತೆ ಶಿವಮೊಗ್ಗದಿಂದ ಶಿರಾಳಕೊಪ್ಪ ಸೊರಬ ಅನವಟ್ಟಿ ಹಾನಗಲ್ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಬೇಕಿದ್ದ ಖಾಸಗಿ ಬಸ್ ಗಳು ಶಿವಮೊಗ್ಗದಿಂದ ಶಿಕಾರಿಪುರದವರೆಗೆ ಸಂಚಾರ ನಡೆಸಿದ್ದು, ಶಿಕಾರಿಪುರದಿಂದ ಮುಂದೆ ಇಲ್ಲಿಯೂ ಪ್ರಯಾಣ ನಡೆಸಿ ಶಿಕಾರಿಪುರದಿಂದ ಮುಂದೆ ಎಲ್ಲಿಯೂ ಪ್ರಯಾಣ ಮುಂದುವರಿಸಲಿಲ್ಲ. ಮುಂದೆ ಹೋಗಬೇಕಿದ್ದ ಪ್ರಯಾಣಿಕರು ಮುಂದಿನ ಪ್ರಯಾಣಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಎಂದಿನಂತೆ ಸಂಚಾರ ನಡೆಸಿದವು. ಕೆಎಸ್‌ಆರ್ಟಿಸಿ ಬಸ್ಗಳಿಗೆ ಯಾವುದೇ ರೀತಿಯ ಅಡೆತಡೆ ಇಲ್ಲದೆ ಪ್ರಯಾಣಿಕರನ್ನು ಹೊತ್ತೊಯ್ದವು. ವಿದ್ಯಾರ್ಥಿಗಳು ಶಾಲಾ ಕಾಲೇಜಿನ ವಾಹನಗಳು ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಹೊತ್ತು ಒಯ್ಯುತ್ತಿದ್ದ ದೃಶ್ಯ ಕಂಡು ಬಂದಿತ್ತು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ರೈತ ಸಂಘ ವರ್ತಕರ ಸಂಘ ಖಾಸಗಿ ಬಸ್ ಖಾಸಗಿ ಲಾರಿ ಮಾಲೀಕರ ಸಂಘ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ತಮಟೆ ವಾದ್ಯದೊಂದಿಗೆ ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ತಾಲ್ಲೂಕು ಕಚೇರಿ, ತಾಲ್ಲೂಕು ಕಚೇರಿಯಿಂದ ಖಾಸಗಿ ಬಸ್ ನಿಲ್ದಾಣ ಖಾಸಗಿ ಬಸ್ ನಿಲ್ದಾಣ ಸಮೀಪ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಖಾಸಗಿ ಬಸ್ ನಿಲ್ದಾಣದಿಂದ ಅಂಬೇಡ್ಕರ್ ವೃತ್ತ, ಅಂಬೇಡ್ಕರ್ ವೃತ್ತದಿಂದ ಐಬಿ ವೃತ್ತಾ, ಐಬಿ ವೃತ್ತಾದಿಂದ ಪುನಃ ತಾಲ್ಲೂಕು ಕಚೇರಿಯವರೆಗೆ ಹೀಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.





