ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳ ಅನುಷ್ಠಾನದ ದಿನಾಂಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಗ್ಯಾರಂಟಿಗಳಲ್ಲಿ ಒಂದಾಗಿದ್ದ ಗೃಹಜ್ಯೋತಿ ಯೋಜನೆ ಜುಲೈ 1ರಿಂದ ಜಾರಿಗೆ ಬರಲಿದೆ. ಈ ಬೆನ್ನಲ್ಲೇ, ಬಾಡಿಗೆದಾರರು ವಿದ್ಯುತ್ ಬಿಲ್ ಕಟ್ಟಬೇಕೇ ಎಂಬ ಗೊಂದಲ ಉದ್ಭವಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್, ‘ಯಾರು ಕೂಡ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ಎಲ್ಲ ಆರ್‌ಆರ್ ನಂಬರ್‌ಗಳಿಗೂ 200 ಯುನಿಟ್ ವಿದ್ಯುತ್ ಉಚಿತ’ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯೋಜನೆಯಲ್ಲಿ ಬಾಡಿಗೆದಾರರನ್ನು ಪ್ರತ್ಯೇಕಿಸುವ ಪ್ರಶ್ನೆಯೇ ಇಲ್ಲ. ಮಾಲೀಕರಾಗಲೀ, ಬಾಡಿಗೆದಾರರಾಗಲೀ ಅವರ ಮನೆಯ ಆರ್‌ಆರ್ ನಂಬರ್‌ನ ಮೀಟರ್ ರೀಡ್ ಮಾಡಲಾಗುತ್ತದೆ. 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸಿದ್ದರೆ, ಅವರಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ” ಎಂದು ಸ್ಪಷ್ಟನೆ ನೀಡಿದ್ದಾರೆ.




