ಗುಬ್ಬಿ | ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಗ್ರಾಮ ಸಮಿತಿ ರಚಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಣಯ

Date:

ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ಬೇರೆ ಜಿಲ್ಲೆಯತ್ತ ಕೊಂಡೊಯ್ಯುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮರು ಆರಂಭಿಸಿದ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಪ್ರತಿ ಗ್ರಾಮದಲ್ಲಿ ಸಮಿತಿ ರಚಿಸಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲು ಸಭೆಯಲ್ಲಿ ಎಲ್ಲಾ ಮುಖಂಡರು ಕೈಗೊಂಡರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸ್ಥಗಿತಗೊಳಿಸಿದ್ದ ಕೆಲಸ ಮರು ಆರಂಭ ಮಾಡಿದ ಬಗ್ಗೆ ಎಲ್ಲಾ ಮುಖಂಡರು ಪಕ್ಷಾತೀತ ನಿಲುವು ವ್ಯಕ್ತ ಪಡಿಸಿ ರೈತರಲ್ಲಿ ನೀರಿನ ಮಹತ್ವ ಹಾಗೂ ಹೇಮಾವತಿ ಕಳೆದುಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸುವ ಜಾಗೃತಿ ಮೂಡಿಸುವುದು ಹಾಗೂ ಹೋರಾಟದಲ್ಲಿ ಜೈಲ್ ಭರೋ ಕಾರ್ಯಕ್ರಮಕ್ಕೆ ಪ್ರತಿ ಮನೆಯಿಂದ ಒಬ್ಬರಂತೆ ಬರಲು ಕರೆ ನೀಡುವ ಕಾರ್ಯ ಮಾಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

1000570746

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕ್ರಿಯಾಯೋಜನೆ ಬಗ್ಗೆ ಎಲ್ಲಿಯೂ ಹೇಳದ ಸರ್ಕಾರ 3 ಟಿಎಂಸಿ ನೀರು ತೆಗೆದುಕೊಳ್ಳುವ ಯೋಜನೆ ಎಂದು ಹೇಳಿ ಕಾಮಗಾರಿ ನೋಡಿದರೆ 10 ಟಿಎಂಸಿ ಹರಿಸಿಕೊಳ್ಳುವ ಮಾದರಿ ನಡೆದಿದೆ. 12 ವ್ಯಾಸದ ಪೈಪ್ ಅಳವಡಿಕೆ ಅವೈಜ್ಞಾನಿಕ. ನಾಲೆಯಲ್ಲಿ ಹರಿಯುವ ನೀರು ಏಳೆಂಟು ಅಡಿ ಲೆಕ್ಕದಲ್ಲಿ. ಆದರೆ ಇವರು ಪೈಪ್ ಸಂಪೂರ್ಣ ನಾಲೆ ನೀರು ಸೆಳೆಯುವ ರೀತಿ ನಡೆದಿದೆ. ಒಟ್ಟಾರೆ ಈ ಯೋಜನೆಯೇ ಅಕ್ರಮ. ಮುಖ್ಯನಾಲೆಯಿಂದ ಕುಣಿಗಲ್ ಮಾರ್ಗ ಹರಿಸಿಕೊಳ್ಳಲಿ ಎಂದ ಅವರು ಸರ್ಕಾರದ ತಾಂತ್ರಿಕ ಸಮಿತಿ ಸರ್ಕಾರ ಪರವೇ ಮಾಹಿತಿ ನೀಡಲಿದೆ. ಅವರ ಪರಿಶೀಲನೆ ವೇಳೆ ಯಾವ ರೈತರನ್ನು ಮುಖಂಡರನ್ನು ಮಾತನಾಡಿಲ್ಲ. ಈ ನಿಟ್ಟಿನಲ್ಲಿ ಉಗ್ರ ಹೋರಾಟ ರಸ್ತೆಯಲ್ಲಿ ಹಾಗೂ ಕಾನೂನಾತ್ಮಕವಾಗಿ ಸಹ ನಡೆಯಲಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಿಜೆಪಿ ಸರ್ಕಾರ ಇದ್ದಾಗ ಈ ಪೈಪ್ ಲೈನ್ ಕಾಮಗಾರಿ ರದ್ದು ಮಾಡಿ ಅಲ್ಲಿನ 650 ಕೋಟಿ ಹಣವನ್ನು ಹೇಮಾವತಿ ಅಗಲೀಕರಣಕ್ಕೆ ವರ್ಗಾಯಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಮರು ಜೀವ ನೀಡಿದ್ದು ನಮ್ಮ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ಬಗ್ಗೆ ಮಾಜಿ ಸಚಿವ ಮಾಧುಸ್ವಾಮಿ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ತಾಂತ್ರಿಕ ಸಮಿತಿ ಹಾಗೂ ರೈತರ ಸಭೆ ನಡೆಸುವ ದಿನ ಇಬ್ಬರು ಬರಲಿದ್ದಾರೆ ಎಂದು ಎಸ್.ಡಿ.ದಿಲೀಪ್ ಕುಮಾರ್ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಜಿಲ್ಲೆಯ ರೈತರ ಮಾರಣ ಹೋಮ ಮಾಡುವ ಈ ಲಿಂಕ್ ಕೆನಾಲ್ ಕಾಮಗಾರಿ ಮುಂದೆ ಇಲ್ಲಿನ ರೈತರನ್ನು ಒಕ್ಕಲೆಬ್ಬಿಸಲಿದೆ. ತೆಂಗು ಅಡಿಕೆ ನಂಬಿದ ಲಕ್ಷಾಂತರ ರೈತರ ಬದುಕು ಬೀದಿಗೆ ಬರಲಿದೆ. ಮುಂದಿನ ಘೋರ ದಿನಗಳನ್ನು ಈಗಲೇ ಮನದಟ್ಟು ಮಾಡಿಕೊಂಡು ಎಲ್ಲಾ ರೈತರು ಪಕ್ಷಾತೀತ ಹೋರಾಟಕ್ಕೆ ಧುಮುಕಬೇಕು. ಈ ಹೋರಾಟ ಸಂಬಂಧಪಟ್ಟ ತುಮಕೂರು, ಶಿರಾ, ಮಧುಗಿರಿ, ತುರುವೇಕೆರೆ ಎಲ್ಲಾ ತಾಲ್ಲೂಕಿನ ರೈತರು ಬರಬೇಕಿದೆ. ಜಿಲ್ಲಾ ಸಮಿತಿಯ ಮೂಲಕ ಉಗ್ರ ಪ್ರತಿಭಟನೆಗೆ ವೇದಿಕೆ ಗುಬ್ಬಿಯಿಂದಲೇ ಸಜ್ಜಾಗಲಿ ಎಂದರು.

1000570667

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ ರೈತರ ಹಿತ ಕಾಪಾಡಲು ರೈತ ಸಂಘ ಸದಾ ಕಾಲ ಸಜ್ಜಾಗಿರುತ್ತದೆ. ಹಿಂದೆ ಪೈಪ್ ಲೈನ್ ಕೆಲಸ ರದ್ದು ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಮರು ಜೀವ ನೀಡಿ ಜಿಲ್ಲೆಯ ಬಹುತೇಕ ರೈತರ ನೀರು ಕಸಿಯಲು ಹೊರಟ ರೈತ ವಿರೋಧಿ ಕಾಮಗಾರಿಗೆ ಉಗ್ರ ಹೋರಾಟ ಒಂದೇ ಮಾರ್ಗ. ಈ ನಿಟ್ಟಿನಲ್ಲಿ ನಿರಂತರ ಹೋರಾಟ ಪ್ರತಿ ಹಳ್ಳಿಯಲ್ಲಿ ನಡೆಸಬೇಕು. ಎಡಬಿಡದೆ ಹೋರಾಟ ಸರ್ಕಾರದ ಗಮನ ಸೆಳೆಯಬೇಕು. ಸಾವಿರಾರು ರೈತರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ ಮರು ಚಾಲನೆಗೆ ಮುಂದಾದ ರೈತ ವಿರೋಧಿ ಕೆಲಸವನ್ನು ನಿಲ್ಲಿಸಲು ತಂಡೋಪತಂಡವಾಗಿ ನಾಲೆ ಮುಚ್ಚುವ ಕೆಲಸ ಮಾಡಬೇಕು. ಸ್ಥಳಕ್ಕೆ ತಾಂತ್ರಿಕ ಸಮಿತಿ ಹಾಗೂ ಜಿಲ್ಲಾಡಳಿತ ಬಂದು ರೈತರೊಟ್ಟಿಗೆ ನೇರ ಚರ್ಚೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ತಿಳಿಯಬೇಕು. ಸರ್ಕಾರಕ್ಕೆ ಮನದಟ್ಟು ಮಾಡಿ ಕಾಮಗಾರಿ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ರೈತ ಸಂಘದ ಸಿ.ಜಿ.ಲೋಕೇಶ್, ಶಿವಕುಮಾರ್, ಜಗದೀಶ್, ಯತೀಶ್, ಜೆಡಿಎಸ್ ಮುಖಂಡ ಸುರೇಶ್ ಗೌಡ, ತಾಪಂ ಮಾಜಿ ಸದಸ್ಯ ತಿಮ್ಮಪ್ಪ, ಮರಿಯಣ್ಣ, ಸಿ.ಆರ್. ಶಂಕರ್ ಕುಮಾರ್, ಪಾರ್ಥಸಾರಥಿ, ಡಿ.ರಘು, ವೀರಶೈವ ಸಮಾಜದ ಮಂಜುನಾಥ್, ಸತೀಶ್, ರೇಣುಕಾ ಪ್ರಸಾದ್ ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...