ಗುಬ್ಬಿ | ಆರ್ಥಿಕ ಸ್ವಾವಲಂಬನೆಗೆ ಹೈನುಗಾರಿಕೆ ಸಹಕಾರಿ : ಶಾಸಕ ಎಂ.ಟಿ.ಕೃಷ್ಣಪ್ಪ

Date:

 ರೈತನ ಕೃಷಿ ಬದುಕಿನ ಮತ್ತೊಂದು ಆರ್ಥಿಕ ಸ್ವಾವಲಂಬಿತನಕ್ಕೆ ಹೈನುಗಾರಿಕೆ ಪ್ರಸ್ತುತ ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ರೈತನ ಸಣ್ಣ ಉದ್ಯಮವಾಗಿ ಹೈನುಗಾರಿಕೆ ಹೆಗ್ಗಳಿಕೆ ಪಡೆದಿದೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದಲ್ಲಿ ತುಮಕೂರು ಸಹಕಾರಿ ಹಾಲು ಒಕ್ಕೂಟ ಮತ್ತು ಪಶು ವೈದ್ಯಕೀಯ ಇಲಾಖೆ ಸಹಯೋಗದಲ್ಲಿ ನಡೆದ ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹಸುಗಳಿಗೆ ವಿಮೆ ಹಾಗೂ ಹಾಲು ಉತ್ಪಾದಕರ ಆರೋಗ್ಯ ಸಮಸ್ಯೆಗೆ ಆರ್ಥಿಕ ನೆರವು ನೀಡುವ ಸ್ಕೀಂ ಒಕ್ಕೂಟ ನೀಡುತ್ತದೆ. ಇದರ ಬಳಕೆ ಮಾಡಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.

ಹೇಮಾವತಿ ನೀರು ಜಿಲ್ಲೆಗೆ ತರಲು ನಡೆದ ದಶಕಗಳ ಹೋರಾಟಕ್ಕೆ ಹಲವು ಹೋರಾಟಗಾರರ ಶ್ರಮ ಇದೆ. ದೇವೇಗೌಡರು ಜಿಲ್ಲೆಗೆ ಹೇಮಾವತಿ ಹರಿಸಲು ಎಲ್ಲಾ ರೀತಿಯ ಸಹಕಾರ ನೀಡಿದ್ದರು. ವೈ.ಕೆ.ರಾಮಯ್ಯ, ಹುಚ್ಚಮಾಸ್ತಿಗೌಡ, ಬೈರಪ್ಪಾಜಿ ಹೀಗೆ ಹಲವರ ಹೋರಾಟದ ಫಲ ನೀರು ಹರಿದುಬಂತು. ಆದರೆ ಈಗ ಹೇಮಾವತಿ ನೀರು ಯಾವ ಮಾನದಂಡ ಇಲ್ಲದೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಯಾವ ನಿಗಮದ ಅನುಮತಿ ಇಲ್ಲದೆ ಅವೈಜ್ಞಾನಿಕ ಲಿಂಕ್ ಕೆನಾಲ್ ಮಾಡುತ್ತಿರುವುದು ಸರಿಯಲ್ಲ. ಯಾರು ಬರಲಿ ಬಿಡಲಿ, ನಾನು ಹೇಮಾವತಿ ನೀರು ಬೇರೆಡೆ ನೀಡುವ ಕೆನಾಲ್ ಮಾಡಲು ಬಿಡುವುದಿಲ್ಲ. ಎಲ್ಲಾ ರೈತರು ಯೋಚನೆ ಮಾಡಬೇಕಾದ ಸಮಯ. ಹೊಲಸು ರಾಜಕೀಯ ನೀರಿನ ವಿಚಾರದಲ್ಲಿ ಬೆರತರೆ ಮುಂದಿನ ಪೀಳಿಗೆಯ ಶಾಪ ನಮಗೆ ತಟ್ಟುತ್ತದೆ ಎಂದು ಹೇಳಿ ಹೇಮಾವತಿ ಹೋರಾಟದ ಗಟ್ಟಿತನ ಬಿಂಬಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೈತರು ಆರ್ಥಿಕ ಅಭಿವೃದ್ಧಿ ಹೊಂದಬೇಕಿದೆ. ಡೈರಿ ಆರಂಭಿಸಲು ಸಲ್ಲದ ರಾಜಕೀಯ ಬೆರೆಸುವುದು ಸ್ಥಳೀಯ ಮುಖಂಡರು ಬಿಡಬೇಕು. ರೈತರ ಬದುಕು ಕಟ್ಟಿಕೊಡುವ ಡೈರಿ ಆರಂಭಿಸಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದ ಅವರು ನಾಟಿ ತಳಿಗಳು ಕಣ್ಮರೆಯಾಗಿವೆ. ಮಿಶ್ರ ತಳಿಗಳು ಸಹ ರೈತರಿಗೆ ಆಧಾರವಾಗಿದೆ. ಐದು ಹಸುಗಳು ಸಾಕಿದರೆ ರೈತನ ಕುಟುಂಬಕ್ಕೆ ಆಧಾರವಾಗಲಿದೆ ಎಂದರು.

ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ ಖಾಸಗಿ ಡೈರಿಗಳನ್ನು ಬೆಳೆಸಲು ಹುನ್ನಾರ ನಡೆಸುವ ಕೆಲಸ ಕೆಲ ಗ್ರಾಮದಲ್ಲಿ ನಡೆದಿದೆ. ರಾಜಕೀಯವಾಗಿ ಜನ್ಮ ಕೊಟ್ಟ ಸಿ.ಎಸ್.ಪುರ ಹೋಬಳಿಯಲ್ಲಿ ಹೆಚ್ಚು ಡೈರಿ ತೆರೆಯುವ ಕೆಲಸ ಮಾಡುತ್ತಿದ್ದೇನೆ. ಇಲ್ಲೂ ಸಲ್ಲದ ರಾಜಕೀಯ ಬೆರೆಯುತ್ತಿದೆ. ವಾಸ್ತವ ಅರಿತು ರೈತರಿಗೆ ಸಹಕಾರಿಯಾಗುವ ಡೈರಿ ತೆರೆಯಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದ ಅವರು ಸಿ.ಎಸ್.ಪುರ ಹೋಬಳಿಯಲ್ಲಿ ಉತ್ಪಾದನೆಯಾಗುವ ಹಾಲು ಉಳಿದ 5 ಹೋಬಳಿಗೆ ಸಮ ಎನ್ನಬಹುದಾಗಿದೆ. ಸಾಕಷ್ಟು ಹಾಲು ಈ ಹೋಬಳಿ ನೀಡುತ್ತಿದೆ. ಈ ಹಿನ್ನಲೆ ಆಯಾ ಗ್ರಾಮದಲ್ಲೇ ಡೈರಿ ತೆರೆಯುವ ಕೆಲಸ ನಡೆದಿದೆ. ಮತ್ತೊಂದು ಗ್ರಾಮಕ್ಕೆ ತೆರಳುವ ಪ್ರಮೇಯ ತಪ್ಪಿಸುವ ನಿಟ್ಟಿನಲ್ಲಿ ಒಕ್ಕೂಟ ಸಾಗಿದೆ ಎಂದರು.

ಇದೇ ಸಂದರ್ಭದಲ್ಲಿ 415 ಮಿಶ್ರ ತಳಿಗಳ ಕರುಗಳ ಪ್ರದರ್ಶನ ನಡೆಯಿತು. ಅವುಗಳ ವೀಕ್ಷಣೆಗೆ ಸಾವಿರಾರು ರೈತರು ಸಹ ಆಗಮಿಸಿದ್ದರು.

ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿ ಕರುಗಳ ಆರೋಗ್ಯ ನಿರ್ವಹಣೆ ಕುರಿತಂತೆ ಹಲವು ಮಾರ್ಗಸೂಚಿಗಳನ್ನು ನೀಡಿ ಕರುಗಳಿಗೆ ದಿನಕ್ಕೆ ಅರ್ಧ ಕೆಜಿ ಪೌಷ್ಠಿಕ ಆಹಾರ ನೀಡುವುದು, ಜಂತುಹುಳ ನಿವಾರಣೆಗೆ ಸಮಯಕ್ಕೆ ಮಾತ್ರೆ ನೀಡುವುದು, ಗಿಣ್ಣು ಹಾಲು ನಿಯಮಿತವಾಗಿ ಕುಡಿಸುವುದು, ಬಾಯಿ–ಮೂಗಿನ ಲೋಳೆ ಸ್ವಚ್ಛತೆ ಕಾಪಾಡುವ ಬಗ್ಗೆ ಮಾಹಿತಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನರಸಿಂಹಮೂರ್ತಿ, ನಂಜೇಗೌಡ, ಉಪ ನಿರ್ದೇಶಕ ಶಿವಪ್ರಸಾದ್, ಪಶುಪಾಲನಾ ಅಧಿಕಾರಿಯಾದ ನಾಗರಾಜು, ರಂಗನಾಥ್, ಕುಮಾರಸ್ವಾಮಿ, ಲಲಿತಮ್ಮ, ಮಹಾಲಕ್ಷ್ಮಿ, ಎಂ.ಎಚ್.ಪಟ್ಟಣ ಗ್ರಾಪಂ ಅಧ್ಯಕ್ಷ ಯೋಗೀಶ್, ಮುಖಂಡರಾದ ಕೃಷ್ಣಮೂರ್ತಿ, ಕೆಂಪರಾಜು, ಚಿಕ್ಕಣ್ಣ, ದೇವರಾಜು, ಗಂಗಾಧರಯ್ಯ ಸೇರಿದಂತೆ ಹೈನುಗಾರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...