ಗುಬ್ಬಿ | ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ

Date:

ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಹೊಲಯ ಮಾದಿಗ ಸಮನ್ವಯ ಸಮಿತಿಯಿಂದ ನಿರ್ಮಾಣವಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಕಿತ್ತೂರು ಮಠದ ಶ್ರೀ ನಿಜಗುಣಾಪ್ರಭು ತೋಂಟದಾರ್ಯ ಸ್ವಾಮೀಜಿ ಪುತ್ಥಳಿ ಲೋಕಾರ್ಪಣೆ ಗೊಳಿಸಿದರು.

ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅದ್ದೂರಿ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಸಾಗಿ ತಾಲ್ಲೂಕು ಕಚೇರಿ ಆವರಣ ಮುಟ್ಟಿತು. ಈ ಜೊತೆಗೆ ಸಂವಿಧಾನ ಪೀಠಿಕೆಯ ಜಾಥ ಸಹ ಸಾಗಿಬಂದಿತು. 

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕಿತ್ತೂರು ನಿಷ್ಕಲ ಮಂಟಪದ ಶಾಖಮಠದ ಶ್ರೀ ನಿಜಗುಣಾಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ ದಲಿತರಲ್ಲಿ ಒಗ್ಗಟ್ಟು ಪ್ರದರ್ಶನ ಆಗಬೇಕಿದೆ. ಶಿಕ್ಷಣ ಪಡೆದು ದಲಿತರು ಬದಲಾಗಬೇಕಿದೆ. ಇಲ್ಲವಾದರೆ ಸಂವಿಧಾನ ಮಾಯಾ ಆಗುತ್ತದೆ ಎಂದು ಎಚ್ಚರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಮ್ಮಲ್ಲಿ ಮೊದಲು ಸಮನ್ವಯತೆ ಮೂಡಬೇಕು. ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಅದು ಕೇವಲ ಮೂರ್ತಿಯಾಗಿ ಉಳಿಯುತ್ತದೆ. ಆದರೆ ಅವರ ತುಡಿತವನ್ನು ಅರ್ಥಮಾಡಿಕೊಂಡು ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ರೂಪಿಸಿಕೊಂಡು ನೊಂದವರಿಗೆ ದನಿಯಾಗಿ ನಿಲ್ಲಬೇಕು ಎಂದ ಅವರು ಮೂಢನಂಬಿಕೆ ಹಿಂದೆ ಹೋಗಬೇಡಿ. ಸದಾ ಧಾರ್ಮಿಕ ಆಚರಣೆ ಹೆಸರಲ್ಲಿ ಶೋಷಣೆ ಹೆಚ್ಚು ನಮ್ಮ ಜನಕ್ಕೆ ಆಗಿದೆ. ದುಡಿಯುವ ಜನರಾಗಿ ಗುರುತಿಸಿಕೊಂಡ ದಲಿತ ವರ್ಗಕ್ಕೆ ಸಮಾನತೆ ಕೊಟ್ಟ ಕಾನೂನು ಬಳಸಿ ಹೋರಾಟ ನಡೆಸಬೇಕು ಎಂದರು.

1002419521

ಮೂಢನಂಬಿಕೆಯಿಂದ ಹೊರ ಬಂದು ದೇವರು ಮತ್ತು ಮನುಷ್ಯನ ಬಗ್ಗೆ ಮೊದಲು ತಿಳಿಯಬೇಕಿದೆ. ಮನುಷ್ಯ ವೀಕ್ ಪ್ರಾಣಿ. ಬಹುಬೇಗ ಭಯ ಪಡುವ ಮನೋಭಾವವಿದೆ. ಇದನ್ನು ಬಳಸಿಕೊಳ್ಳುವ ಜನ ಕೇವಲ 2 ಸಾವಿರಕ್ಕೆ ಐದು ವರ್ಷದ ನಮ್ಮ ಹಕ್ಕು ಮಾರಿಕೊಳ್ಳುತ್ತೇವೆ. ಇವೆಲ್ಲದರ ನಡುವೆ ದಾದ ಸಾಹೇಬ್ ಅಂಬೇಡ್ಕರ್ ಅವರ ಬರಹಗಳನ್ನು ಓದುವ ಕೆಲಸ ದಲಿತ ಯುವಕರು ಮಾಡಬೇಕು. ದಲಿತ ಮಹಿಳೆಯರು ಅಂಧ ನಂಬಿಕೆಯಿಂದ ಹೊರ ಬಂದು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಸಮಾನತೆ ಬೆಳೆಸಿಕೊಳ್ಳಬೇಕು ಎಂದ ಅವರು ಬುದ್ಧ, ಬಸವ ಅಂಬೇಡ್ಕರ್ ಚಿಂತನೆಯನ್ನು ಮೊದಲು ಅರ್ಥೈಸಿಕೊಂಡು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಸಕ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಶೋಷಿತ ವರ್ಗಕ್ಕೆ ರಕ್ಷಣೆ, ಸಮಾಜದಲ್ಲಿ ಸಮಾನತೆ ಸಾಧಿಸಲು ಕಾನೂನಾತ್ಮಕ ಶಕ್ತಿ ನೀಡಿದ ಅಂಬೇಡ್ಕರ್ ಅವರ ಸಂವಿಧಾನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಂಘಟನೆ ಶಿಕ್ಷಣ ಹೋರಾಟ ಮೂಲ ತತ್ವ ಅಳವಡಿಸಿಕೊಂಡು ಸಾಗಬೇಕಾದ ಸಂಘಟನೆಯಲ್ಲಿ ಸ್ವಪ್ರತಿಷ್ಠೆ ತೋರುವ ಮಂದಿ ಇಲ್ಲಿ ಕಂಡಿದ್ದು ಬೇಸರ ತಂದಿತು. ಬ್ರಿಟಿಷರ ಒಡೆದು ಆಳುವ ನೀತಿ ಇಲ್ಲೂ ಕಾಣಿಸಿಕೊಳ್ಳಬಾರದಿತ್ತು. ಸಮಾಜ ನಮ್ಮನ್ನು ಗಮನಿಸುತ್ತದೆ ಎಂಬ ಸೂಕ್ಷ್ಮತೆ ಅರಿತು ಸಂಘಟನೆಯನ್ನು ಜವಾಬ್ದಾರಿಯಲ್ಲಿ ನಡೆಸಿಕೊಳ್ಳಬೇಕು. ಅದನ್ನು ಬಿಟ್ಟು ನಿಮ್ಮ ಒಡಕು ಪ್ರದರ್ಶನ ಆದರೆ ರಾಜಕಾರಣಿಗಳು ಅದನ್ನು ಬಳಸಿ ನಿಮ್ಮನ್ನು ಮತ್ತೇ ತುಳಿಯುತ್ತಾರೆ ಎಂಬ ಎಚ್ಚರಿಕೆ ಅರಿವು ಇರಲಿ ಎಂದ ಅವರು ಅಂಬೇಡ್ಕರ್ ಹೆಸರು ಜಪ ಮಾಡಿದರೆ ಸಾಲದು. ಅವರ ಆದರ್ಶ ನುಡಿಯಂತೆ ನಡೆದು ಸಾಮಾಜಿಕ ಸಮಾನತೆ ಸಾಧಿಸಿ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಹಲವು ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ್ ಮಾಳಿಗಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವೇದಿಕೆಯಲ್ಲಿ ತಹಶೀಲ್ದಾರ್ ಆರತಿ.ಬಿ, ತಾಲ್ಲೂಕು ಹೊಲಯ ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಜಿ.ಎಚ್.ಜಗನ್ನಾಥ್, ಕಾರ್ಯಾಧ್ಯಕ್ಷ ಟಿ.ಈರಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಸಿ.ಕೃಷ್ಣಕಾಂತ್, ಉದ್ಯಮಿ ಕರಣ್ ಕೌಶಿಕ್, ಚಾಲುಕ್ಯ ಆಸ್ಪತ್ರೆ ಸಿಇಓ ಡಾ.ಬಿ.ಎಂ.ನಾಗಭೂಷಣ, ತಾಪಂ ಇಓ ರಂಗನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಗೋಪಾಲ್, ಸಹಕಾರ್ಯದರ್ಶಿ ಎಚ್.ಬಸವರಾಜ್ ಸೇರಿದಂತೆ ದಲಿತ ಮುಖಂಡರು, ಮುಸ್ಲಿಂ ಸಮಾಜ, ಮಡಿವಾಳ ಸಮಾಜ, ಸವಿತ ಸಮಾಜ, ಅಗ್ನಿವಂಶ ಕ್ಷತ್ರಿಯ, ಯಾದವ ಸಮಾಜ, ವಾಲ್ಮೀಕಿ ಸಮಾಜ, ರೈತ ಸಂಘ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಪಂ ಅಧ್ಯಕ್ಷರು, ಪಿಡಿಓಗಳು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...