ಗುಬ್ಬಿ | ನಾಯಿಗಳ ಹಾವಳಿ ತಡೆಗೆ ಪಪಂ ತುರ್ತು ಸಭೆ : ವ್ಯಾಕ್ಸಿನ್, ಎಬಿಸಿ ಚಿಕಿತ್ಸೆಗೆ ನಿರ್ಧಾರ

Date:

ನಾಯಿಗಳ ಕಡಿತ ಹಾಗೂ ದಾಳಿಯ ಹಾವಳಿಯಿಂದ ನಾಗರೀಕರು ಹೈರಾಣಾದ ಹಿನ್ನಲೆ ತುರ್ತು ಸಭೆ ನಡೆಸಿದ ಸ್ಥಳೀಯ ಪಟ್ಟಣ ಪಂಚಾಯಿತಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ವ್ಯಾಕ್ಸಿನ್ ನೀಡುವ ಬಗ್ಗೆ ನಿರ್ಧಾರ ಕೈಗೊಂಡು ಶೆಡ್ ನಿರ್ಮಿಸಿ ನಾಯಿಗಳ ಒಂದಡೆ ಕೂಡಿ ಆಹಾರ ನೀರು ನೀಡಿ ಎಲ್ಲಾ ಚಿಕಿತ್ಸೆ ಹಾಗೂ ಆರೈಕೆ ಮಾಡುವ ಬಗ್ಗೆ ಮಹತ್ತರ ನಿರ್ಧಾರ ಎಲ್ಲಾ ಸದಸ್ಯರು ಕೈಗೊಂಡರು.

ಮಂಗಳವಾರ ಬೆಳಿಗ್ಗೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ಆಯಿಷಾ ತಾಸೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಎಲ್ಲಾ ಸದಸ್ಯರು ನಾಯಿಗಳ ದಾಳಿ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ನ್ಯಾಯಾಲಯ ಆವರಣದಲ್ಲಿ ನಡೆದ ಡೆಡ್ಲಿ ಅಟ್ಯಾಕ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಆರೇಳು ತಿಂಗಳಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಈಚೆಗೆ ಯಾವುದೇ ಬೀದಿಗೆ ಹೋದರೂ ನಾಯಿಗಳ ಹಿಂಡು ಸ್ವಾಗತ ಕೋರುತ್ತದೆ. ವೃದ್ಧರು, ಮಕ್ಕಳು ಹೊರಗಡೆ ಓಡಾಡುವುದು ದುಸ್ತರವಾಗಿದೆ. ಈ ಜೊತೆಗೆ ಹುಚ್ಚು ನಾಯಿಗಳು ಕೆಲ ದಿನದಿಂದ ಕಾಣಿಸುತ್ತಿವೆ. ಕೋರ್ಟ್ ಆವರಣದಲ್ಲಿ ನಡೆದ ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಜೊತೆಗೆ ಗಟ್ಟಿ ಲೇಔಟ್ ಬಡಾವಣೆಯಲ್ಲಿ ಒಬ್ಬರ ಮೇಲೆರಗಿ ಕಾಲು ಕಡಿದಿದೆ. ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ದಾಳಿ ಮಾಡಿ ಕಾಲಿನ ಮೇಲೆ ಗಂಭೀರ ಗಾಯ ಮಾಡಿದೆ. ವಾಯುವಿಹಾರ ಮಾಡುವವರನ್ನು ಅಟ್ಟಾಡಿಸಿದ ಘಟನೆ ಕೂಡಾ ನಾಗರೀಕರಲ್ಲಿ ಅಸಮಾಧಾನ ತಂದಿದೆ. ಈ ಜೊತೆಗೆ ಹಸು ಕರುಗಳನ್ನು ಕಡಿದು ಗಾಯ ಮಾಡಿದೆ. ನೂರಾರು ನಾಯಿಗಳನ್ನು ಕಡಿದ ಹುಚ್ಚು ನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದಾರೆ. ಆದರೆ ಹುಚ್ಚು ನಾಯಿ ಕಡಿತದಿಂದ ನೂರಾರು ನಾಯಿಗಳು ಹುಚ್ಚು ನಾಯಿಯಾಗಿ ಎಲ್ಲರಿಗೂ ಕಡಿಯುವ ಮುನ್ನ ಎಚ್ಚರಿಕೆ ವಹಿಸಿ ಎಂದು ಸದಸ್ಯ ಮೋಹನ್ ಹಾಗೂ ಕುಮಾರ್ ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾನವೀಯತೆಯಿಂದ ಕೆಲ ಪ್ರಾಣಿ ಪ್ರಿಯರು ಆಹಾರ ನೀಡುತ್ತಾರೆ. ಎಲ್ಲೆಂದರಲ್ಲಿ ಆಹಾರ ನೀಡಿ ಹೋದ ಬಳಿಕ ಬೇರೆಯವರ ಮೇಲೆರಗಿ ಬೆದರಿಸುವ ನಾಯಿಗಳು ಕಾಣುತ್ತಿವೆ. ಈ ಹಿನ್ನಲೆ ಹೊರ ವಲಯದಲ್ಲಿ ನಾಯಿಗಳಿಗೆ ಶೆಡ್ ನಿರ್ಮಾಣ ಮಾಡಿ ಆಹಾರ ನೀರಿನ ವ್ಯವಸ್ಥೆ ಮಾಡುವುದು ಹಾಗೂ ವ್ಯಾಕ್ಸಿನ್ ಎಬಿಸಿ ಚಿಕಿತ್ಸೆ ನೀಡಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ನಾಲ್ಕು ದಿನ ಆರೈಕೆ ಮಾಡುವ ಕೆಲಸ ಪಟ್ಟಣ ಪಂಚಾಯಿತಿ ಮಾಡಲಿದೆ. ಈ ಹಿಂದೆ ನಾಲ್ಕು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಯಾರೂ ಬಾರದ ಹಿನ್ನಲೆ ಈ ಬಾರಿ ಎಬಿಸಿ ಚಿಕಿತ್ಸೆಗೆ ನೋಂದಾಯಿತ ಸಂಸ್ಥೆಯ ಮೂಲಕ ನಾಯಿಗೆ 1600 ರೂಗಳಂತೆ ಸರ್ಕಾರದ ನಿಗದಿ ಮಾಡಿದ ವೆಚ್ಚದಲ್ಲಿ ಕೆಲಸ ಈಗಿನಿಂದಲೇ ಆರಂಭಿಸುತ್ತೇವೆ ಎಂದು ಮುಖ್ಯಾಧಿಕಾರಿ ಮಂಜುಳಾದೇವಿ ತಿಳಿಸಿದರು.

ಸರ್ಕಾರದ ನಿಯಮಾನುಸಾರ ಸಂತಾನಹರಣ ಚಿಕಿತ್ಸೆ ಮಾಡುವ ಮುನ್ನ ನಾಯಿಗಳ ಸಂಖ್ಯೆ ಅದರ ಏರಿಯಾ ತಿಳಿಯಬೇಕು. ನಂತರ ಹಿಡಿದು ತಂದ ಬಳಿಕ ನೀರು ಆಹಾರ ನೀಡಿ ಚಿಕಿತ್ಸೆ ನೀಡಿ ನಂತರ ನಾಲ್ಕು ದಿನ ಆರೈಕೆ ಮಾಡಿ ಅದೇ ಏರಿಯಾಗಳಿಗೆ ನಾಯಿಗಳನ್ನು ಬಿಡಬೇಕು ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಸುರೇಶ್ ಸರ್ಕಾರ ನಿಯಮ ತಿಳಿಸಿದರು.

ನಾಯಿ ಕಡಿತಕ್ಕೆ ತುತ್ತದವರಿಗೆ ಪರಿಹಾರಕ್ಕೆ ಆಗ್ರಹ

1002027867

ದಿಢೀರ್ ನಾಯಿಗಳ ಸಂಖ್ಯೆ ಹೆಚ್ಚಾದ ಬಗ್ಗೆ ನಿಗಾ ವಹಿಸುವ ಅವಶ್ಯಕತೆ ಇದೆ. ಮಾರಣಾಂತಿಕ ದಾಳಿ ನಡೆದ ಮಹಿಳೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಈಕೆಗೆ ಮಾನವೀಯತೆ ದೃಷ್ಟಿಯಿಂದ ಕನಿಷ್ಠ 50 ಸಾವಿರ ಪಟ್ಟಣ ಪಂಚಾಯಿತಿ ನೀಡಬೇಕು ಎಂದು ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ ಒತ್ತಾಯಿಸಿದ್ದರು. ನ್ಯಾಯಾಲಯ ಆವರಣದಲ್ಲಿ ನಡೆದ ನಾಯಿ ದಾಳಿ ಘಟನೆಗೆ ವಕೀಲರು ಅಸಮಾಧಾನ ವ್ಯಕ್ತಪಡಿಸಿ ಕಾರ್ಯಕಲಾಪ ಬಹಿಷ್ಕಾರ ಮಾಡಿದ್ದಾರೆ. ಈ ಹಿನ್ನಲೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ನೀಡಬೇಕಿದೆ ಎಂದು ಸದಸ್ಯ ಜಿ.ಆರ್.ಶಿವಕುಮಾರ್ ಆಗ್ರಹಿಸಿದರು.

ಸಭೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಬಿಂದು ಮಾಧವ ರೇಬಿಸ್ ಲಸಿಕೆ ಹಾಗೂ ರೋಗದ ಲಕ್ಷಣ, ನಾಯಿ ಕಡಿದಾಗ ಅನುಸಬೇಕಾದ ಕ್ರಮ ತಿಳಿಸಿದರು.

ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಶ್ವೇತಾ, ಹಿರಿಯ ಸದಸ್ಯರಾದ ಮಹಮ್ಮದ್ ಸಾದಿಕ್, ರೇಣುಕಾ ಪ್ರಸಾದ್, ಶಶಿಕುಮಾರ್, ಶೌಕತ್ ಆಲಿ, ಮಮತಾ, ಮಹಮದ್ ಹಂಜ್, ಆನಂದ್, ಇಂಜಿನಿಯರ್ ಬಿಂದುಸಾರ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...