ಗುಬ್ಬಿ | ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಗ್ಯಾಸ್ ಬಾಬು

Date:

 ಎಲ್ಲೆಡೆ ನಾಯಿಗಳ ಹಾವಳಿ ಎಂಬ ಮಾತುಗಳು ಹೆಚ್ಚಾದ ಹಿನ್ನಲೆ ಶ್ವಾನ ಪ್ರಿಯ ಪಿ.ಬಿ.ಚಂದ್ರಶೇಖರಬಾಬು ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರತಿ ವಾರ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. 

ಪ್ರಾಣಿ ಪ್ರೇಮ ಮೈಗೂಡಿಸಿಕೊಂಡ ಬಾಬಣ್ಣ ಬೀದಿ ನಾಯಿಗಳನ್ನು ಜರಿಯುವವರೇ ಹೆಚ್ಚಾಗಿದ್ದು ಕಲ್ಲೇಟು ಸಹ ನೀಡುತ್ತಾರೆ. ಬೀದಿಯಲ್ಲೇ ತನ್ನ ಪಾಡಿಗೆ ಇರುವ ನಾಯಿಗಳಿಗೆ ಯಾರು ದಿಕ್ಕು ಎಂಬ ಪ್ರಶ್ನೆಗೆ ಉತ್ತರವಾಗಿ ಸ್ವಂತ ಹಣವನ್ನು ಶಸ್ತ್ರ ಚಿಕಿತ್ಸೆಗೆ ಬಳಸುತ್ತಿದ್ದಾರೆ. ಈಗಾಗಲೇ ನೂರಕ್ಕೂ ಅಧಿಕ ಬೀದಿ ನಾಯಿಗಳಿಗೆ ಎಬಿಸಿ ಶಸ್ತ್ರ ಚಿಕಿತ್ಸೆ ಹಾಗೂ ಕಾಲು ಮುರಿದ ನಾಯಿಗಳು, ಚರ್ಮ ರೋಗಕ್ಕೆ ತುತ್ತಾದ ನಾಯಿಗಳಿಗೂ ಔಷಧೋಪಚಾರ ಮೂಲಕ ಆರೈಕೆ ನಡೆಸಿದ್ದಾರೆ.

ಸ್ಥಳೀಯ ಪಟ್ಟಣ ಪಂಚಾಯಿತಿ ಈಗಾಗಲೇ ಎಬಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿದೆ. ಆದರೂ ಪಟ್ಟಣದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಿರುವ ಬಗ್ಗೆ ಅರಿತ ಬಾಬಣ್ಣ ಶಸ್ತ್ರ ಚಿಕಿತ್ಸೆ ಜೊತೆಗೆ ಎಂಟು ದಿನಗಳ ಕಾಲ ಅನ್ನ ಹಾಲು ಆಹಾರ ಜೊತೆಗೆ ಔಷಧಿ ನೀಡಿ ಆರೈಕೆ ಮಾಡುತ್ತಿದ್ದಾರೆ. ಈ ಕಾರ್ಯ ಮಾಡಲಿಕ್ಕೆ ತಮ್ಮ ಸ್ವಂತ ಕಟ್ಟಡ ಮೇಲ್ಬಾಗದಲ್ಲಿ ಪ್ರತಿ ವಾರ ಶಸ್ತ್ರ ಚಿಕಿತ್ಸೆಗೆ ಸ್ಥಳಾವಕಾಶ ಮಾಡಿದ್ದಾರೆ. ಹಾಸನದಿಂದ ನುರಿತ ವೈದ್ಯರ ತಂಡ ಬಂದು ಶಸ್ತ್ರ ಚಿಕಿತ್ಸೆ ಮುಗಿಸಿ ತೆರಳುತ್ತಾರೆ. ವಾರಕ್ಕೊಮ್ಮೆ ಏಳೆಂಟು ನಾಯಿಗಳಿಗೆ ಚಿಕಿತ್ಸೆ ನಡೆಯುತ್ತದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಾಣಿಪ್ರಿಯ ಹಾಗೂ ಪರಿಸರ ಪ್ರೇಮಿ ಗ್ಯಾಸ್ ಬಾಬು ಈ ಹಿಂದೆ ಸೋಪನಹಳ್ಳಿ ಗೇಟ್ ಬಳಿಯ ಹೀರೆಹಕ್ಕಿ ಬಾವಲಿಗಳ ಸಂತಾನ ಉಳಿಸಲು ಹೆದ್ದಾರಿ ಪ್ರಾಧಿಕಾರ ವಿರುದ್ಧ ದೊಡ್ಡ ಹೋರಾಟ ನಡೆಸಿದ್ದರು. ನ್ಯಾಯಾಲಯ ಮೆಟ್ಟಿಲೇರಿ ಬೃಹತ್ ಎರಡು ಮರಗಳನ್ನು ತೆರೆವು ಮಾಡದಂತೆ ತಡೆಯಾಜ್ಞೆ ಸಹ ತಂದಿದ್ದರು. ಆದರೆ ಇವರ ಕಾಳಜಿಗೆ ವಿರುದ್ಧವಾಗಿ ಮರಗಳನ್ನು ಒಣಗಿಸಿ ಬಾವಲಿಗಳು ವಲಸೆ ಹೋಗುವಂತೆ ಮಾಡಲಾಯಿತು ಎಂದು ಬಾಬಣ್ಣ ಬೇಸರ ವ್ಯಕ್ತಪಡಿಸಿದರು. 

ಪಶು ವೈದ್ಯ ಡಾ.ಮಂಜುನಾಥ್ ಮಾತನಾಡಿ ಬೀದಿ ನಾಯಿಗಳ ಮೇಲಿನ ಅಕ್ಕರೆ ತೋರುವ ಬಾಬಣ್ಣ ರೀತಿಯ ಪ್ರಾಣಿ ಪ್ರಿಯರ ಸಂಖ್ಯೆ ಸಾಕಷ್ಟು ವಿರಳ. ಮನುಷ್ಯನ ಹತ್ತಿರದ ಜೀವಿ ನಾಯಿ. ವಿವಿಧ ತಳಿಯ ನಾಯಿಗಳನ್ನು ಸಾಕುವ ಮಂದಿ ಎಲ್ಲೆಡೆ ಇದ್ದಾರೆ. ಬೀದಿ ನಾಯಿಗಳಿಗೆ ಅನ್ನ ಆಹಾರ ನೀಡುವ ಮಂದಿ ಸಹ ಇದ್ದಾರೆ. ಆದರೆ ನಾಯಿಗಳಿಗೆ ರೇಬಿಸ್ ರೋಗ ಬಾರದಂತೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ನಾಯಿಗಳ ಮೇಲಿನ ಪ್ರೀತಿ ಕಾಳಜಿ ಅಪರೂಪದ ವ್ಯಕ್ತಿ. ತಮ್ಮ ಕಟ್ಟಡದಲ್ಲಿ ನಾಯಿಗಳಿಗೆ ಆಶ್ರಮ ರೀತಿ ವ್ಯವಸ್ಥೆ ಮಾಡಿರುವುದು ಕೂಡಾ ಮೆಚ್ಚುವಂತಹದ್ದು. ಇವರ ಕಾಳಜಿಗೆ ನಮ್ಮ ತಂಡ ಪ್ರತಿವಾರ ಸ್ಪಂದಿಸುತ್ತಿದೆ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...