2025 ಡಿಸೆಂಬರ್ ತಿಂಗಳ 20 ರಂದು ನಡೆಯುವ 6 ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ದಾಖಲು ಪಡಿಸುವ ಸ್ಮರಣ ಸಂಚಿಕೆ ಸಿದ್ಧಪಡಿಸುವ ಹಿನ್ನಲೆ ತಾಲ್ಲೂಕಿನ ಲೇಖಕರಿಂದ ತಾಲ್ಲೂಕು ಇತಿಹಾಸಕ್ಕೆ ಸಂಬಂಧಿಸಿದಂತೆ ಉತ್ತಮ ಲೇಖನ ಹಾಗೂ ಸ್ವರಚಿತ ಕವನಗಳಿಗೆ ಆಹ್ವಾನ ನೀಡಲಾಗಿದೆ ಎಂದು ಸಮ್ಮೇಳನ ಸ್ಮರಣ ಸಂಚಿಕೆಯ ಸಂಪಾದಕ ಡಾ.ರಾಜೇಶ್ ಗುಬ್ಬಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲೇ ಸ್ಮರಣ ಸಂಚಿಕೆ ಬಿಡುಗಡೆ ಮಾಡುವ ಹಿನ್ನಲೆ ಸಂಚಿಕೆ ಮುದ್ರಣ ಮಾಡಲು ಕಡಿಮೆ ಸಮಯ ಇರುವ ಕಾರಣ ನವಂಬರ್ 25 ರೊಳಗೆ 150 ರಿಂದ 200 ಪದಗಳ ಲೇಖನ ಹಾಗೂ ಸ್ವರಚಿತ ಕವನಗಳನ್ನು ಉತ್ತಮವಾಗಿ ರಚಿಸಿ ಜೊತೆಗೆ ಲೇಖನಕ್ಕೆ ತಕ್ಕನಾದ ಫೋಟೋಗಳು ಸಹ ಸಂಗ್ರಹಿಸಿ ಇ-ಮೇಲ್ ಮಾಡಲು ಮನವಿ ಮಾಡಿದ್ದಾರೆ.
ಗುಬ್ಬಿ ತಾಲ್ಲೂಕಿಗೆ ಸಂಬಂಧಿಸಿದ ಇತಿಹಾಸ, ಸಾಹಿತ್ಯ, ಕ್ರೀಡೆ, ಜನಪದ, ಸಾಧಕರ ಜೀವನ, ಪರಿಸರ, ಐತಿಹಾಸಿಕ ಸ್ಥಳ ಹೀಗೆ ಅನೇಕ ವಿಚಾರ ಹೊತ್ತ ಲೇಖನಗಳು ಸ್ಮರಣ ಸಂಚಿಕೆ ಸಮಿತಿಯ ಇ-ಮೇಲ್ ಐಡಿ umeshsinger1@gmail.com ಗೆ ತಲುಪಿಸಬೇಕಿದೆ. ಈ ಪೈಕಿ ಅತ್ಯುತ್ತಮ ಲೇಖನಗಳು ಸಂಚಿಕೆಯಲ್ಲಿ ಪ್ರಕಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





