ಗುಬ್ಬಿ | ಸರ್ಕಾರಿ ಮೂಲ ನಕಾಶೆಯಂತೆ ಖರಾಬು ರಸ್ತೆ ಮಾಡಲಿ : ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರ ಆಗ್ರಹ

Date:

ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಖರಾಬು ರಸ್ತೆ ಬಿಡಿಸಿ ಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಿರುವ ವಕೀಲ ನವೀನ್ ಕುಮಾರ್ ಅವರ ಅರ್ಜಿಯಂತೆ ಮೂಲ ನಕಾಶೆಯಲ್ಲಿರುವ ಖರಾಬು ಜಾಗವನ್ನು ಗುರುತು ಮಾಡಿ ಸಾರ್ವಜನಿಕ ರಸ್ತೆ ನಿರ್ಮಿಸಬೇಕು ಎಂದು ಮಾಜಿ ಗ್ರಾಪಂ ಅಧ್ಯಕ್ಷ ಎಚ್.ಎನ್.ಧರ್ಮೇಗೌಡ ಒತ್ತಾಯಿಸಿದರು.

ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸರ್ವೇ ನಂಬರ್ 47 ರಲ್ಲಿ ವಕೀಲ ಮನೆ ನಿರ್ಮಾಣ ಮಾಡಿದ್ದು ಅಲ್ಲಿಗೆ ಓಡಾಡಲು ಈವರೆವಿಗೂ ಇದ್ದ ರಸ್ತೆ ನನ್ನ ಸ್ವಂತ ಜಮೀನು ಆಗಿದೆ. ಅನು ತನು ಮೇಲೆ ಬಿಟ್ಟ ಜಾಗ ಈಗ ಸಿಸಿರಸ್ತೆ ಮಾಡಲು ಜಲ್ಲಿ ತಂದು ಸುರಿದಿದ್ದೇನೆ. ನರೇಗಾ ಯೋಜನೆ ರಸ್ತೆ ಕೂಡ ಮಾಡಲಾಗಿದೆ. ಇಡೀ ಗ್ರಾಮವನ್ನೇ ಎದುರು ಮಾಡಿಕೊಂಡು ಕಾನೂನು ಕಟ್ಟಳೆ ಬಗ್ಗೆ ಮಾತನಾಡಿದ ವಕೀಲ ನವೀನ್ ಕುಮಾರ್ ದೇವಸ್ಥಾನಕ್ಕೆ ಸಂಬಂಧಿಸಿದ ಕೊಡಗಿ ಜಮೀನು ಬರೆಸಿಕೊಂಡಿರುವುದು ಇಡೀ ಗ್ರಾಮಕ್ಕೆ ಬೇಸರ ತಂದಿದೆ. ಈ ನಿಟ್ಟಿನಲ್ಲಿ ಅನುತನು ರಸ್ತೆಯನ್ನು ಮುಚ್ಚಿದ್ದೇವೆ ಎಂದು ಸಮರ್ಥಿಸಿಕೊಂಡರು.

ಕೂಡಗಿ ಜಮೀನು ದೇವಾಲಯಕ್ಕೆ ಸಂಬಂಧಿಸಿದ್ದು ಬಿಟ್ಟುಕೊಡಲು ಮನವಿ ಮಾಡಿದರೆ ವಕೀಲ ನವೀನ್ ಹೊನ್ನಶೆಟ್ಟಿಹಳ್ಳಿ ಸುಪ್ರೀಂ ಕೋರ್ಟ್ ಆಗಿದೆಯೇ ಅಥವಾ ವಿಧಾನಸೌಧವೇ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಗ್ರಾಮಕ್ಕೆ ಅಪಮಾನ ಮಾಡಿದ ವಕೀಲರು ಕಾನೂನು ಕಟ್ಟಳೆ ಮೂಲಕವೇ ಖಾರಬು ರಸ್ತೆ ನಿರ್ಮಿಸಿಕೊಳ್ಳಲಿ. ಮೂಲ ನಕಾಶೆಯಂತೇ ಖರಾಬು ಜಾಗ ತಾಲ್ಲೂಕು ಆಡಳಿತ ಗುರುತಿಸಿಕೊಡಲಿ ಎಂದು ಒತ್ತಾಯಿಸಿದ ಅವರು ಊರಿನ ಪಟೇಲ್ ವಂಶಸ್ಥರಾದ ಲಾಯರ್ ನವೀನ್ ತಾಲ್ಲೂಕು ಕಚೇರಿ ಮುಂದೆ ಧರಣಿ ಮಾಡುವುದಾಗಿ ಮಾಧ್ಯಮ ಮೂಲಕ ತಿಳಿಸಿದ್ದಾರೆ. ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ಮೂಲ ನಕಾಶೆಯಂತೆ ಖರಾಬು ಗುರುತಿಸಲಿ. ಇಡೀ ಊರು ಒಂದಾಗಿ ದೇವಸ್ಥಾನದ ಜಮೀನು ಬಿಟ್ಟು ಕೊಡಲು ಮನವಿ ಮಾಡಿದ್ದೇವೆ. ಮರಳಿ ನರಸಿಂಹಯ್ಯ ಅವರಿಗೆ ಬಿಟ್ಟಲ್ಲಿ ಅದನ್ನು ಗ್ರಾಮವೇ ದೇವಾಲಯಕ್ಕೆ ಬರೆದುಕೊಡಲಿದೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ಥಳೀಯ ಮುಖಂಡ ಹರೀಶ್ ಮಾತನಾಡಿ ಕೊಡಗೀ ಜಮೀನು ಬರೆಸಿಕೊಂಡಿರುವ ವಕೀಲ ನವೀನ್ ಇಲ್ಲಸಲ್ಲದ ಆರೋಪ ಮಾಡಿ ಎಂಟು ಜನರ ಮೇಲೆ ಪೊಲೀಸ್ ದೂರು ನೀಡಿದ್ದಾರೆ. ಊರಿನ ಸ್ವಾಸ್ಥ್ಯ ಹಾಳು ಮಾಡುವುದು ಹಾಗೂ ಗ್ರಾಮದಲ್ಲಿ ಸಂಘರ್ಷಕ್ಕೆ ದಾರಿ ಮಾಡುವುದು ಹಾಗೂ ನಮ್ಮಲ್ಲೇ ಎತ್ತಿಕಟ್ಟಿ ಗುಂಪು ಮಾಡುವ ಕೆಲಸ ಮಾಡುತ್ತಿದ್ದಾರೆ. ಅರ್ಚಕ ನರಸಿಂಹಯ್ಯ ವಯೋವೃದ್ದರಾಗಿದ್ದು ಅವರನ್ನು ನಾಪತ್ತೆ ಮಾಡಿ ಜಮೀನು ಬರೆಸಿಕೊಂಡಿದ್ದಾರೆ. ಈ ಹಿಂದೆ ನರಸಿಂಹಯ್ಯ ಅವರಿಂದ ಅವರ ಸಂಬಂಧಿ ಶೇಷಗಿರಿ ಎಂಬುವವರು ಜಮೀನು ದಾನ ಮೂಲಕ ಬರೆಸಿಕೊಂಡಿದ್ದರು. ಆದರೆ ದೂರದ ಸಂಬಂಧಿಗೆ ದಾನ ನೀಡಲು ಕಾನೂನು ತೊಡಕು ಬಂತು. ಆಗ ಉಪ ವಿಭಾಗಾಧಿಕಾರಿ ಕೋರ್ಟ್ ಮೂಲಕ ಮರಳಿ ನರಸಿಂಹಯ್ಯ ಅವರಿಗೆ ಜಮೀನು ಬಂತು. ಆದರೆ ವಿಚಾರ ತಿಳಿದ ವಕೀಲ ನವೀನ್ ಹಾಗೂ ಶೇಷಗಿರಿ ಇಬ್ಬರು ಸೇರಿ ನರಸಿಂಹಯ್ಯ ಅವರನ್ನು ಕಿಡ್ನಾಪ್ ಮಾಡಿ ವಕೀಲರ ಹೆಸರಿಗೆ ಕ್ರಯ ಮಾಡಿಸಲಾಗಿದೆ. ಈ ಕಿಡ್ನಾಪ್ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಲಿಸರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇಂದಿಗೂ ನರಸಿಂಹಯ್ಯ ಎಲ್ಲಿದ್ದಾರೆ ಯಾರಿಗೂ ತಿಳಿದಿಲ್ಲ. ಕೊಡಗಿ ಜಮೀನು ಖರೀದಿ ನಂತರ ಮತ್ತೊಂದು ಭಾಗದಲ್ಲಿ ಜಮೀನು ಖರೀದಿಸಿ ಮನೆ ನಿರ್ಮಾಣ ಮಾಡಿದ್ದು ಅಲ್ಲಿ ರಸ್ತೆಗೆ ತಕರಾರು ತೆಗೆದಿದ್ದಾರೆ. ಸುಳ್ಳು ದೂರು ದಾಖಲಿಸಿ ಊರಿನಲ್ಲಿ ಘರ್ಷಣೆಗೆ ಕಾರಣವಾಗುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಕಾಂತರಾಜು, ರಮೇಶ್, ಯೋಗೀಶ್, ಪಾಂಡುರಂಗಯ್ಯ, ಮಂಜುನಾಥ್, ನಾಗರಾಜು, ಸೋಮಶೇಖರ್, ಬೇವಿನಗುಡ್ಡಯ್ಯ, ದೇವೇಗೌಡ, ರಾಘವೇಂದ್ರ, ಸಾಗರ್, ಅರ್ಚಕ ನರಸಿಂಹಮೂರ್ತಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...