ಗುಬ್ಬಿ | ಡೈರಿ ಚುನಾವಣೆ ನಡೆಸಲು ಕಮಿಷನ್ ಪಡೆದು ಗುತ್ತಿಗೆದಾರರಿಗೆ ರೈತರನ್ನು ಅಡವಿಟ್ಟ ಗುಬ್ಬಿ ಶಾಸಕರು : ಎಸ್.ಡಿ.ದಿಲೀಪ್ ಕುಮಾರ್ ಆರೋಪ

Date:

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯುವುದಿಲ್ಲ ಎಂಬಂತೆ ಲಿಂಕ್ ಕೆನಾಲ್ ಗುತ್ತಿಗೆದಾರರಿಂದ ಕಮಿಷನ್ ಹಣ ಪಡೆದು ಕಾಮಗಾರಿ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುವ ಗುಬ್ಬಿ ಶಾಸಕರು ಗುತ್ತಿಗೆದಾರರಿಗೆ ತಾಲೂಕಿನ ರೈತರನ್ನ ಅಡವಿಟ್ಟು ಡೈರಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.

ಗುಬ್ಬಿ ತಾಲೂಕಿನ ಗಂಗಸಂದ್ರ ಬಳಿಯ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿರ್ಮಾಣಕ್ಕೆ 50 ಲಾರಿಗಳಲ್ಲಿ 12 ಅಡಿ ಉದ್ದದ ಪೈಪ್ ಗಳನ್ನು ಹೊತ್ತುತಂದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಕ್ಸ್ ಪ್ರೆಸ್ ಕೆನಾಲ್ ಗುತ್ತಿಗೆದಾರರಿಂದ ಲಂಚ ಪಡೆದು ಆ ಹಣದಿಂದ ತನ್ನ ಹೆಂಡತಿಯನ್ನು ಕೆ.ಎಂ.ಎಫ್ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಲು ಡೈರಿಯ ನಿರ್ದೇಶಕರಿಗೆ 50 ಸಾವಿರದಿಂದ 1 ಲಕ್ಷ ಹಣ ಕೊಟ್ಟು ಖರೀದಿಗೆ ಮುಂದಾಗಿದ್ದಾರೆ ಎಂದು ನೇರ ಆರೋಪ ಮಾಡಿದರು.

ರೈತರ ಬದುಕಿನ ಚೆಲ್ಲಾಟ ಆಡುವ ಈ ಪೈಪ್ ಲೈನ್ ಕಾಮಗಾರಿ ಮೂಲಕ ಕಮಿಷನ್ ಹಣ ಪಡೆಯುವ ಅಗತ್ಯವಿರಲಿಲ್ಲ. ಹಣ ಬೇಕಿದ್ದರೆ ಅದನ್ನು ನಾನೇ ಕೊಡುತ್ತೇನೆ. ಈ ಕಮಿಷನ್ ಹಣ ವಾಪಸ್ಸು ಕೊಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮ ಜೊತೆ ಹೋರಾಟಕ್ಕೆ ಬರಲಿ ಅದನ್ನು ಬಿಟ್ಟು ನನ್ನ ಕೆ.ಎಸ್.ಆರ್.ಟಿ.ಸಿ ಛೇರ್ಮನ್ ಗಿರಿ ಕೈತಪ್ಪಿ ಹೋಗುತ್ತೆ. ಅಲ್ಲಿನ ಹಳೆಯ ಟೈರ್ ಗಳನ್ನು ಮಾರಿಕೊಂಡು ಕಮಿಷನ್ ಪಡೆಯಲು ಸಾಧ್ಯವಿಲ್ಲ ಎಂದು ಗುತ್ತಿಗೆದಾರರ ಕಮಿಷನ್ ಆಸೆಗೆ ಬಲಿಯಾಗಿ ತಾಲೂಕಿನ ರೈತರನ್ನು ಬಲಿಕೊಟ್ಟು ಬದುಕುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಮಿಷನ್ ಪಡೆಯಲು ತಮ್ಮ ಮಡದಿ ಮುಂದೆ ಬಿಟ್ಟು ಕೆಲಸ ಮಾಡುತ್ತಿರುವ ಗುಬ್ಬಿ ಶಾಸಕರು ಇನ್ನು ಮುಂದಾದರೂ ಎಚ್ಚೆತ್ತು ಪಡೆದುಕೊಂಡಿರುವ ಕಮಿಷನ್ ಹಣ ವಾಪಸ್ ಕೊಟ್ಟು ನಮ್ಮ ಜೊತೆ ಹೋರಾಟಕ್ಕೆ ಇಳಿದರೆ ಒಳ್ಳೆಯದು. ಇಲ್ಲವಾದರೆ ತಾಲೂಕಿನ ರೈತರು ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳದಲ್ಲಿ ರೇಣುಕಾ ಪ್ರಸಾದ್, ಲೋಕೇಶ್, ಸತೀಶ್ ಸೇರಿದಂತೆ ಹಲವು ರೈತಪರ ಹೋರಾಟಗಾರರು ಮತ್ತು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...