ನಮ್ಮ ಸಮುದಾಯದ ಮೂಲ ಕಸುಬು ತಮಟೆ, ಸೋಬಾನೆ ಇನ್ನಿತರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕಲ್ಪಿಸಿ ಪ್ರೇರೇಪಿಸುವ ಕೆಲಸ ಮಾಡಬೇಕೆಂದು ಬಾಬು ಜಗಜೀವನ ರಾಮ್ ಆದಿ ಜಾಂಬವ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಗುಬ್ಬಿ ಬಸವರಾಜು ಕರೆ ನೀಡಿದರು.
ಪಟ್ಟಣದ ಡಾ.ಬಾಬು ಜಗಜೀವನ್ ರಾಮ್ ಭವನದಲ್ಲಿ 70ನೇ ಕನ್ನಡದ ರಾಜ್ಯೋತ್ಸವದ ಅಂಗವಾಗಿ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಾದಿಗ ಸಮುದಾಯದ ಹಿರಿಯ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.
ಮುಖಂಡ ಹೊಸಕೆರೆ ಬಸವರಾಜ್ ಮಾತನಾಡಿ ಮಾದಿಗ ಸಮುದಾಯದ ಮೂಲದೇವತೆ ಮಾತಂಗೇಶ್ವರಿ ಹಾಗೂ ಕುರಂಗರಾಜರ ಆಳ್ವಿಕೆ ಮತ್ತು ಇತಿಹಾಸವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ತಿಪ್ಪೂರು ಮುದ್ದಯ್ಯ, ದಲಿತ್ ಗಂಗಣ್ಣ, ಇರಕಸಂದ್ರ ನರಸಿಂಹಮೂರ್ತಿ, ಹಂದನಹಳ್ಳಿ ಶಿವರಾಜು, ನಾಗರಾಜು, ಹನುಮಂತಯ್ಯ, ಮಹಿಳಾ ಘಟಕದ ರೇಖಾ, ತಾರಾ, ರೇಣುಕಾ, ಶಶಿಕಲಾ, ಲಕ್ಷ್ಮಮ್ಮ, ಸ್ವಸಹಾಯ ಸಂಘದ ಸದಸ್ಯರು, ಸಮುದಾಯದ ಮುಖಂಡರು ಹಾಜರಿದ್ದರು.





