ಗುಬ್ಬಿ | ಮಾಜಿ ಸೈನಿಕರಿಗೆ ಆರು ಎಕರೆ ಭೂಮಿ ಮೀಸಲು : ಶಾಸಕ ಎಸ್.ಆರ್.ಶ್ರೀನಿವಾಸ್

Date:

ಗುಬ್ಬಿ ತಾಲ್ಲೂಕು ಮಾಜಿ ಸೈನಿಕರ ಸಂಘ ನಿವೇಶನಕ್ಕಾಗಿ ಮನವಿ ಮಾಡಿದ್ದ ಹಿನ್ನಲೆ ಸರ್ಕಾರಕ್ಕೆ ಪತ್ರ ಬರೆದು ಎಚ್ ಎಎಲ್ ಘಟಕದ ಸಮೀಪದಲ್ಲಿ ಆರು ಎಕರೆ ಭೂಮಿಯನ್ನು ಮೀಸಲಿಟ್ಟು ಮಾಜಿ ಸೈನಿಕರಿಗೆ ನಿವೇಶನ ಹಂಚಿಕೆ ಮಾಡಲು ಸಂಘಕ್ಕೆ ಶೀಘ್ರದಲ್ಲಿ ಹಸ್ತಾಂತರ ಮಾಡುವುದಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಎಸ್ ಸಿ ಎಸ್ ಕಲ್ಯಾಣ ಮಂಟಪದಲ್ಲಿ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ ನಿವೃತ್ತ ಯೋಧ ಬಿ.ಟಿ.ದಿವಾಕರ್ ಅವರಿಗೆ ಅಭಿನಂದನಾ ಮತ್ತು ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಧ ಎಂಬ ಹೆಸರು ಮೈನವಿರೇಳಿಸುತ್ತದೆ. ದೇಶ ಪ್ರೇಮ, ಅಭಿಮಾನ ಸೈನಿಕರನ್ನು ನೋಡಿದ ತಕ್ಷಣ ಭಾವುಕತೆ ಬರುತ್ತದೆ ಎಂದರು.

ದೇಶ ಕಾಯುವ ಕಾಯಕ ಎಂದರೆ ಈ ಹಿಂದೆ ಬೇಡ ಎನ್ನುವ ಕಾಲವಿತ್ತು. ಆದರೆ ಈಗ ಶಿಕ್ಷಣ ಪಡೆದ ಮಕ್ಕಳು ಸೈನ್ಯಕ್ಕೆ ಸೇರುವ ಎಲ್ಲಾ ಆಸಕ್ತಿ ತೋರುತ್ತಾರೆ. ಹಗಲಿರುಳು ನಿದ್ರೆ ಆಹಾರ ಇಲ್ಲದೆ ಗಡಿ ಕಾದು ನಮ್ಮನ್ನು ರಕ್ಷಿಸುವ ಸೈನಿಕರಿಗೆ ನಮ್ಮ ಗೌರವ ಸಲ್ಲಬೇಕು. ಗುಬ್ಬಿಯ ದಿವಾಕರ್ 23 ವರ್ಷದ ಸೇವೆ ತಾಲ್ಲೂಕಿಗೆ ಕೀರ್ತಿ ತಂದಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಕೆ.ಶಿವಣ್ಣ ಮಾತನಾಡಿ ನಟನೆ ಮಾಡಿ ಮನರಂಜಿಸುವ ಕಲಾವಿದರಿಗೆ ಉತ್ತಮ ಪ್ರಶಸ್ತಿಗಳು ಲಭಿಸುತ್ತದೆ. ಆದರೆ ತಮ್ಮ ಜೀವದ ಹಂಗು ತೊರೆದು ತಮ್ಮ ಕುಟುಂಬ ಬಿಟ್ಟು ಗಡಿಯಲ್ಲಿ ದೇಶ ಕಾಯುವ ಯೋಧನಿಗೆ ಯಾವುದೇ ಪ್ರಶಸ್ತಿ ಸರ್ಕಾರ ನೀಡಲ್ಲ. ಇದು ವಿಪರ್ಯಾಸ. ಬಾರಿ ಚಳಿಯಲ್ಲಿ ದೇಹ ಮಡುಗಟ್ಟಿ ಗಡಿ ಕಾಯುವ ಸೈನಿಕರು ತಮ್ಮ ಜೀವನದ ಯೌವ್ವನವನ್ನು ತ್ಯಾಗ ಮಾಡುತ್ತಾರೆ. ಇವರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು.

ಚಿತ್ರದುರ್ಗ ಮಾಚಿದೇವ ಮಹಾಸಂಸ್ಥಾನ ಜಗದ್ಗುರು ಡಾ.ಶ್ರೀ ಬಸವಮಾಚಿದೇವ ಸ್ವಾಮೀಜಿ ಮಾತನಾಡಿ ಸ್ವಂತಕ್ಕೆ ಸರ್ವಸ್ವ ಸಮಾಜಕ್ಕೆ ಸ್ವಲ್ಪ ಎನ್ನುವ ಈ ಕಾಲದಲ್ಲಿ ಹೆತ್ತ ಮಕ್ಕಳನ್ನು ಸೇನೆಗೆ ಕಳುಹಿಸಿರುವ ಪೋಷಕರ ಭಾವನೆಗೆ ಅಭಿನಂದಿಸಬೇಕು. ಕುಲ ಕಸುಬು ನಂಬಿ ಬದುಕು ಕಟ್ಟಿಕೊಳ್ಳುವ ಜನ ಸೈನ್ಯದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವುದು ಸಾರ್ಥಕ. ರೈತ ಮತ್ತು ಯೋಧ ದೇಶದ ಎರಡು ಕಣ್ಣು. ಸೈನಿಕರಿಗೆ ಸಮಾಜ ಕೂಡಾ ಪ್ರೀತಿ ಪಾತ್ರವಾಗಿ ಕಾಣಬೇಕು ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಮಾತನಾಡಿ ಜಗತ್ತಿನಲ್ಲಿ ಬಲಿಷ್ಠ ಸೇನೆ ಹೊಂದಿರುವ ದೇಶದಲ್ಲಿ ನಾಲ್ಕನೇ ಸ್ಥಾನ ಗಳಿಸಿದರೂ ಸೇನೆ ಯೋಧ ಎಂದರೆ ಅಭಿನಾಭವ ಅಭಿಮಾನ ಹೊಂದಿರುವ ದೇಶದಲ್ಲಿ ಭಾರತವೇ ಮೊದಲ ಸ್ಥಾನ ಎಂದ ಅವರು ದೇಶದಲ್ಲಿ 25 ಲಕ್ಷ ಸೈನಿಕರು ದೇಶ ಕಾಯುತ್ತಾರೆ. ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ಸೇನೆಯ ಅಭಿವೃದ್ಧಿಗೆ ಬಳಸುತ್ತಿದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ನಿವೃತ್ತ ಯೋಧ ದಿವಾಕರ್ ಅವರನ್ನು ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು.

ಕಾರ್ಯಕ್ರಮದಲ್ಲಿ ತೊರೆಮಠದ ಶ್ರೀ ಅಟವಿ ಚನ್ನಬಸವ ಸ್ವಾಮೀಜಿ, ಮಾಜಿ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಬಿದರೆ, ಕರ್ನಲ್ ಅಭಿಲಾಶ್, ಪ್ರಾಂಶುಪಾಲ ಡಾ.ಪ್ರಸನ್ನ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಪಟೇಲ್ ಕೆಂಪೇಗೌಡ, ಮಡಿವಾಳ ಸಮಾಜದ ಅಧ್ಯಕ್ಷ ಜಿ.ಆರ್.ಪರಮೇಶ್ವರಪ್ಪ, ಪಪಂ ಮಾಜಿ ಸದಸ್ಯರಾದ ಜಿ.ಎಸ್.ರೇಣುಕಾ ಪ್ರಸಾದ್, ಮಹಮದ್ ಸಾದಿಕ್, ಸಿ.ಮೋಹನ್, ಕುಮಾರ್, ಮಂಗಳಮ್ಮ, ಶ್ವೇತಾ, ಮಮತಾ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...