ಗುಬ್ಬಿ | ರಜೆಯಲ್ಲಿದ್ದ ಯೋಧ ವೇಣುಗೋಪಾಲ್ ಮರಳಿ ಗಡಿಯತ್ತ: ಆತ್ಮೀಯ ಬೀಳ್ಕೊಡುಗೆ ನೀಡಿದ ಗುಬ್ಬಿ ನಾಗರೀಕರು

Date:

ವರ್ಷಕೊಮ್ಮೆ ರಜೆ ಪಡೆದು ತಮ್ಮ ಮಕ್ಕಳ ಶಾಲಾಕಾಲೇಜು ದಾಖಲಾತಿ ಕೆಲಸ ಮಾಡುತ್ತಿದ್ದ ಬಿಎಸ್ಎಫ್ ಯೋಧ ವೇಣುಗೋಪಾಲ್ ಕರ್ತವ್ಯ ಕರೆಯನ್ನು ಆಲಿಸಿ ರಜೆಯನ್ನು ಮೊಟಕು ಗೊಳಿಸಿ ತಮ್ಮ ದೇಶ ಕಾಯುವ ಜವಾಬ್ದಾರಿಗೆ ಮರಳಿ ಗಡಿ ಭಾಗಕ್ಕೆ ಮರಳುವ ಸಮಯದಲ್ಲಿ ಗುಬ್ಬಿ ನಾಗರೀಕರು ಆತ್ಮೀಯ ಬೀಳ್ಕೊಡುಗೆ ನೀಡಿ ಯುದ್ಧ ಗೆದ್ದು ಬನ್ನಿ ಎಂದು ಆಶಿಸಿದರು.

ಗುಬ್ಬಿ ಪಟ್ಟಣದ 19 ನೇ ವಾರ್ಡ್ ಬಿಲ್ಲೇಪಾಳ್ಯ ಬಡಾವಣೆಯ ನಿವಾಸಿ ಯೋಧ ವೇಣುಗೋಪಾಲ್ ಪತ್ನಿ ಇಬ್ಬರು ಹೆಣ್ಣು ಮಕ್ಕಳ ಸುಂದರ ಸಂಸಾರ ಹೊಂದಿದ್ದಾರೆ. ದೇಶದ ಗಡಿ ಕಾಯುವ ಕಾಯಕ ನಿಷ್ಠೆಯಿಂದ ನಿರ್ವಹಿಸಿ ವರ್ಷಕೊಮ್ಮೆ ರಜೆ ಹಾಕಿ ತನ್ನ ಕುಟುಂಬದೊಂದಿಗೆ ಕಾಲ ಕಳೆಯುವ ಜೊತೆಗೆ ಮಕ್ಕಳ ಶಿಕ್ಷಣ ಪ್ರಗತಿಯ ಆಲೋಚನೆ ನಡೆಸಿ ಶಾಲಕಾಲೇಜು ದಾಖಲಾತಿ ನಡೆಸಿ ಕೆಲ ಕಾಲ ವಿಶ್ರಮಿಸುವ ಸಮಯದಲ್ಲೇ ಕರ್ತವ್ಯದ ಕರೆ ಬಂದಿದೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ವೇಣುಗೋಪಾಲ್ ಅವರು ಪಾಕಿಸ್ತಾನ ವಿರುದ್ಧ ಯುದ್ದಕ್ಕೆ ನಾವೆಲ್ಲಾ ಭಾಗವಹಿಸಿ ದೇಶ ಹಾಗೂ ನಾಗರೀಕರನ್ನು ಕಾಪಾಡುವ ಕರ್ತವ್ಯ ನಿಷ್ಠೆಯಿಂದ ಮಾಡಬೇಕಿದೆ ಎಂದು ಹೇಳಿ ಬೆಂಗಳೂರಿನ ವಿಮಾನ ನಿಲ್ದಾಣದತ್ತ ಸಾಗಿದರು.

ವಿಷಯ ತಿಳಿದ ತಕ್ಷಣ ಯೋಧರ ಮನೆಗೆ ಧಾವಿಸಿದ ಗುಬ್ಬಿ ನಾಗರೀಕರ ತಂಡವೊಂದು ವೇಣು ಗೋಪಾಲ್ ಅವರಿಗೆ ಸನ್ಮಾನಿಸಿ ಆತ್ಮೀಯ ಬೀಳ್ಕೊಡುಗೆ ನೀಡಿದರು. ಶತ್ರು ಪಾಕಿಸ್ತಾನದ ವಿರುದ್ಧ ಸೆಣಸಾಡಿ ವೀರ ಗೆಲುವು ನಮ್ಮದಾಗಿಸಿ ಕ್ಷೇಮವಾಗಿ ಮರಳಿ ಬರುವಂತೆ ಶುಭ ಕೋರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಂದರ್ಭದಲ್ಲಿ ಸಿ.ಆರ್.ಶಂಕರ್ ಕುಮಾರ್, ಕುಮಾರ್, ರಮೇಶಗೌಡ, ಲೋಕೇಶ್, ಚಿಕ್ಕೇಗೌಡ, ಬ್ಯಾಟರಾಯಪ್ಪ, ವಿನಯ್, ಮಧು, ಶ್ರೀರಾಮು, ಸತೀಶ್, ಧೀರಜ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...