ಗುಬ್ಬಿ | ಎನ್ ಡಿಎ ಮುಖಂಡರ ಊರುಗಳಲ್ಲೇ ಹಾಲಿನ ಡೈರಿ ಇಲ್ಲ : ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್

Date:

ಕಳೆದ ಹದಿನೈದು ವರ್ಷಗಳಿಂದ ಹಾಲಿನ ಡೈರಿಗಳನ್ನೇ ಮಾಡದ ಸೋ ಕಾಲ್ಡ್ ಎನ್ ಡಿಎ ಮುಖಂಡರ ಊರುಗಳಲ್ಲೇ ಹಾಲಿನ ಡೈರಿ ತೆರೆದಿಲ್ಲ. ಇನ್ನೂ ಕೆಲ ಮುಖಂಡರು ಊರಲ್ಲಿ ಡೈರಿ ಅಭಿವೃದ್ಧಿಗೆ ಮಾರಕವಾಗಿದ್ದಾರೆ ಎಂದು ಗುಬ್ಬಿ ತಾಲ್ಲೂಕು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಆರೋಪ ಮಾಡಿದ್ದ ಮುಖಂಡರ ವಿರುದ್ಧ ಹರಿಹಾಯ್ದರು.

ಪಟ್ಟಣದ ಕೆಎಂಎಫ್ ಪಶು ಆಹಾರ ಘಟಕದ ಆವರಣದಲ್ಲಿನ ಕಚೇರಿಯಲ್ಲಿ ಮಾತನಾಡಿದ ಅವರು ಎ ಗ್ರೇಡ್ ಇದ್ದ ಡೈರಿಗಳನ್ನು ಸಿ ಗ್ರೇಡ್ ಗೆ ತಂದ ಈ ಮುಖಂಡರು ಕಂಪ್ಯೂಟರ್ ಸಹ ಡೈರಿಯಲ್ಲಿಲ್ಲ. ಬಿಜೆಪಿ ಮುಖಂಡರ ತಾಯಿ ಡೈರಿಯ ಅಧ್ಯಕ್ಷರಾಗಿ ಅಭಿವೃದ್ದಿ ಕಂಡಿಲ್ಲ ಎಂದು ನೇರ ಆರೋಪ ಮಾಡಿದರು.

ಜೆಡಿಎಸ್ ಮುಖಂಡ ನಾಗರಾಜು ಈ ಹಿಂದೆ ಜಿಲ್ಲಾ ಪಂಚಾಯಿತಿ ಆಯ್ಕೆಯಾಗಿದ್ದ ಹೇಗೆ ಎಂಬುದು ಮರೆಯಬಾರದು. ಅವರ ಗ್ರಾಮದ ರೈತರು ನಾಲ್ಕೈದು ಕಿಮೀ ಕ್ರಮಿಸಿ ಕಲ್ಲಹಳ್ಳಿ ಡೈರಿಗೆ ಹಾಲು ಹಾಕುತ್ತಾರೆ. ಲೀಡರ್ ಎಂದು ಬಿಂಬಿಸಿಕೊಳ್ಳುವ ಇವರಿಗೆ ನಮ್ಮೂರಿಗೆ ಡೈರಿ ತರುವ ಅಲೋಚನೆಯೇ ಇಲ್ಲ. ಚುನಾವಣೆ ಮಾಡಿಲ್ಲ. ಹಣ ಲೂಟಿ ಎಂದು ಆಧಾರವಿಲ್ಲದ ಆರೋಪ ಮಾಡಿದ ಮಾಜಿ ನಿರ್ದೇಶಕರು ಎಷ್ಟು ಡೈರಿ ಮುಚ್ಚಿದ್ದಾರೆ. ಎಷ್ಟು ರೈತರಿಗೆ ಶೇರ್ ನೀಡಿದ್ದಾರೆ. ತಮ್ಮ ನೆಂಟರಿಗೆ ಮಾತ್ರ ಡೈರಿ ಮಾಡಿದ್ದಾರೆ ಎಂಬುದು ಇಡೀ ತಾಲ್ಲೂಕಿಗೆ ತಿಳಿದಿದೆ. ಮಹಿಳೆಯೊಬ್ಬಳು ಆಡಳಿತ ಮಾಡುವುದು ಸಹಿಸದ ಈ ಮುಖಂಡರು ಎಸ್ಸಿ ಎಸ್ಟಿ ಒಬಿಸಿ ಜನಗಳಿಗೆ ಡೈರಿ ನೀಡಲು ಬಿಟ್ಟಿಲ್ಲ. ಹಣ ವಸೂಲಿ ಬಗ್ಗೆ ಆರೋಪ ಮಾಡುವವರು ಖುದ್ದು ಡೈರಿಗೆ ತೆರಳಿ ಪರಿಶೀಲಿಸಿ ಎಲ್ಲಾ ಆಡಿಟ್ ದಾಖಲೆ ಸಿಗುತ್ತದೆ ಎಂದು ಟಾಂಗ್ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಾಕತ್ತು ಇದ್ದರೆ ಎಂದು ಮತ್ತೇ ಮತ್ತೇ ಕೆಣಕಿ ಸೋಲುತ್ತಾರೆ. ಈಗಾಗಲೇ ಐದು ಬಾರಿ ಶಾಸಕರಾಗಿ ತಾಕತ್ತು ತೋರಿದ್ದೇವೆ. ಸುಖಾಸುಮ್ಮನೆ ಮಾಧ್ಯಮ ಮುಂದೆ ಸುಳ್ಳು ಆರೋಪ ಮಾಡುವುದು ಬಿಟ್ಟು ನಮ್ಮ ಕಾರ್ಯ ವೈಖರಿ ನೇರ ಡೈರಿಗೆ ತೆರಳಿ ತಿಳಿದುಕೊಳ್ಳಿ ಎಂದು ಪ್ರತ್ಯುತ್ತರ ನೀಡಿದ ಅವರು ಪಶು ಆಹಾರ ಕಚ್ಚಾ ವಸ್ತುಗಳ ಪರಿಶೀಲನೆ ಖುದ್ದು ಮಾಡಿದ್ದೇನೆ. ಇಲ್ಲಿ ನಡೆಯುವ ಕ್ವಾಲಿಟಿ ಚೆಕ್ ಹೇಗೆ ನಡೆಯುತ್ತದೆ. ಇದೆಲ್ಲಾ ಎನ್ ಡಿಎ ಸಹಕಾರ ಇಲ್ಲದೆ ನಡೆಯುತ್ತಾ ಎಂಬುದು ತಿಳಿದ ಕೂಡಲೇ ವಿಚಾರ. ಇದೆಲ್ಲದಕ್ಕೂ ಮಾಸ್ಟರ್ ಮೈಂಡ್ ಯಾರು ಎಂಬುದು ಜಿಲ್ಲೆಗೆ ತಿಳಿದಿದೆ ಎಂದು ಮಾರ್ಮಿಕ ಪ್ರತಿಕ್ರಿಯೆ ನೀಡಿದರು.

ಜಾತಿ ಪಕ್ಷ ಮಾಡುತ್ತೇನೆ ಎಂದು ಆರೋಪ ಮಾಡಿದ ಮಾಜಿ ನಿರ್ದೇಶಕರು ಸ್ವಜಾತಿಯ ಪೆದ್ದನಹಳ್ಳಿ ಗ್ರಾಮದಲ್ಲಿ ಅವರ ಸಂಬಂಧಿಕರಿಲ್ಲ ಎಂದು ಡೈರಿ ತೆರೆಯದೇ ಜಾತಿ ಬುದ್ಧಿ ತೋರಿದ್ದಾರೆ. ಹಣ ವಸೂಲಿ ಬಗ್ಗೆ ಆರೋಪ ಮಾಡುವ ಅವರು ಬಿಟ್ಟುಗೊಂಡನಹಳ್ಳಿ ಡೈರಿಯಿಂದ ಎಷ್ಟು ಲಕ್ಷ ಪಡೆದಿದ್ದರೂ ಈಗ ನಾನು ಏನು ಮಾಡಿದೆ ತಿಳಿದುಕೊಳ್ಳಲಿ ಎಂದು ಕಿಡಿಕಾರಿದ ಅವರು ಆಡಳಿತಾಧಿಕಾರಿಗಳ ನೇಮಕ ಪ್ರಕ್ರಿಯೆ ವಿಳಂಬ ಆದಲ್ಲಿ ಚುನಾವಣೆ ವಿಳಂಬ ಆಗಿದೆ. 25 ವರ್ಷ ಆಡಳಿತ ನಡೆಸಿದ ಅವರಿಗೆ ಕಾನೂನು ತಿಳಿಯಲಿಲ್ಲವೇ. ನನಗೆ ನಿರ್ದೇಶಕರ ಕೆಲಸ ಗೊತ್ತಿಲ್ಲ ಎನ್ನುವ ಇವರು ಎಷ್ಟು ಡೈರಿ ಮಂಜೂರು ಮಾಡಿದ್ದರು ಎಂಬುದು ರೈತರೇ ತಿಳಿಯಬೇಕಿದೆ. ನಾರನಹಳ್ಳಿ ಡೈರಿಯಲ್ಲಿ 23 ವರ್ಷದಿಂದ ಶೇರ್ ನೀಡಿಲ್ಲ ಎನ್ನುವ ರೈತರಿಗೆ ನ್ಯಾಯ ಕೊಡಬೇಕಿದ್ದ ಅವತ್ತಿನ ನಿರ್ದೇಶಕರು ಈಗ ಪತ್ರಿಕೆ ಮುಂದೆ ಹುರುಳಿಲ್ಲದ ಆರೋಪ ಮಾಡುತ್ತಾರೆ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹಯ್ಯ, ಲೋಕೇಶ್ವರ್, ಯೋಗೇಶ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...