ಗುಬ್ಬಿ | ಸಾಹಿತ್ಯಾಭಿರುಚಿ ಯುವಕರು ಮೈಗೂಡಿಸಿಕೊಳ್ಳಬೇಕು : ಎಸ್.ಆರ್.ಶ್ರೀನಿವಾಸ್

Date:

 ಸಾಹಿತ್ಯ ಕ್ಷೇತ್ರದಲ್ಲಿ ಯುವಕರು ಹೆಚ್ಚಾಗಿ ತೊಡಗಿಕೊಂಡಾಗ ಸಾಹಿತ್ಯ ಲೋಕ ಮತ್ತಷ್ಟು ಉತ್ತೇಜನಗೊಳ್ಳುತ್ತದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯ ದಿಗ್ಗಜರ ನಡುವೆ ಪ್ರಶಸ್ತಿ ವಿತರಣೆ ನಮ್ಮ ತಾಲ್ಲೂಕು ಕೇಂದ್ರದಲ್ಲಿ ಆಯೋಜನೆಗೊಂಡು ನಾನು ಈ ಅವಿಸ್ಮರಣೀಯ ಅನುಭವ ಎಂದಿಗೂ ಮರೆಯಲಾರೆ ಎಂದು ಭಾವುಕರಾಗಿ ನುಡಿದರು.

ಸಾಹಿತ್ಯಾಸಕ್ತರು ತಮ್ಮದೇ ಲೋಕ ಸೃಷ್ಟಿಸಿಕೊಂಡಿರುತ್ತಾರೆ. ಓದುವ ಹಾಗೂ ಬರೆಯುವ ಹವ್ಯಾಸ ಅವರಲ್ಲಿ ವಿಶೇಷ ಲಕ್ಷಣ ಕಾಣುತ್ತದೆ. ಸದಾಕಾಲ ಹಸನ್ಮುಖಿಯಾಗಿ ಬರವಣಿಗೆಯಲ್ಲೇ ಸಮಾಜ ತಿದ್ದಿ ತೀಡುವ ಸಾಹಿತಿಗಳು ಸದಭಿರುಚಿಯ ಅಕ್ಷರ ಚಿತ್ರಣ ನೀಡುತ್ತಾರೆ. ಅಕಾಡೆಮಿಯ ರೀತಿ ಸಾಹಿತ್ಯ ಪರಿಷತ್ತು ಸಹ ಸಾಹಿತ್ಯ ಕೃಷಿ ನಡೆಸಿದೆ. ಇಲಾಖೆ ಪರಿಷತ್ತಿನ ಚಟುವಟಿಕೆಗೆ ಸಹಕಾರ ನೀಡಬೇಕಿದೆ. ಹೆಚ್ಚಿನ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಿ ತಾಲ್ಲೂಕು ಕೇಂದ್ರದಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜ್ಯಸಭಾ ಸದಸ್ಯೆ ಹಾಗೂ ಗುಬ್ಬಿ ವೀರಣ್ಣ ಟ್ರಸ್ಟ್ ಅಧ್ಯಕ್ಷೆ ಬಿ.ಜಯಶ್ರೀ ಮಾತನಾಡಿ ಗುಬ್ಬಿಯಲ್ಲಿ ಅತ್ಯಾಧುನಿಕ ರಂಗ ಮಂದಿರ ನಿರ್ಮಾಣ ಮಾಡಿ ನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರ ಕೊರತೆ ಕಂಡಿತು. ಬಹಳ ಬೇಸರ ನಡುವೆ ದಿನ ಕಳೆದಂತೆ ನಾಟಕಕ್ಕೆ ಜನ ಬರ ತೊಡಗಿದ್ದರು. ಆದರೆ ಇಂದಿನ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ರಂಗಮಂದಿರಕ್ಕೆ ಮೆರಗು ತಂದುಕೊಟ್ಟಿದೆ. ಉತ್ತಮ ಬರಹಗಾರರಿಗೆ ಮತ್ತಷ್ಟು ಚೈತನ್ಯ ತುಂಬಿದ ಪ್ರಶಸ್ತಿ ಪ್ರದಾನ ನಮ್ಮ ಸಾಹಿತ್ಯ ಕ್ಷೇತ್ರಕ್ಕೆ ಉತ್ಸಾಹ ತಂದಿದೆ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ ಬೆಂಗಳೂರು ನಗರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಮಾತ್ರ ನಡೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಗ್ರಾಮೀಣ ಭಾಗಕ್ಕೆ ವಿಸ್ತರಿಸಲು ಚಿಂತಿಸಿ ಗುಬ್ಬಿಯಲ್ಲಿ ಆಯೋಜಿಸಿ ಸಾಹಿತ್ಯಾಸಕ್ತರಿಗೆ ಕವಿ ವೃಂದವನ್ನು ಪರಿಚಯಿಸಿದ್ದೇವೆ. ಸಾಹಿತ್ಯ ಕೃಷಿ ನಡೆಸಿದ ಅನುಭವಿಗಳಿಗೆ ನೀಡುವ ಅಕಾಡೆಮಿ ಪ್ರಶಸ್ತಿ ಎಂದಿಗೂ ಶ್ರೇಷ್ಠತೆ ಉಳಿಸಿಕೊಂಡು ಬೆಳೆದಿದೆ ಎಂದರು.

ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರುಗು ತಂದಿತ್ತು. ವೇದಿಕೆಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಗಾಯತ್ರಿ, ಸಹಾಯಕ ನಿರ್ದೇಶಕ ಈಶ್ವರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯರಾದ ಲಕ್ಷ್ಮಣದಾಸ್, ರಾಜೇಶ್ ಗುಬ್ಬಿ ಇತರರು ಇದ್ದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಟ್ಟಿ.

2024 ರ ಗೌರವ ಪ್ರಶಸ್ತಿ ಪುರಸ್ಕೃತರು: ಡಾ.ಎಂ.ಬಸವಣ್ಣ, ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್, ಡಾ. ಡಿ.ಬಿ.ನಾಯಕ್, ಡಾ.ವಿಶ್ವನಾಥ್ ಕಾರ್ನಾಡ್.

ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕಾರ : ಡಾ.ಬಿ.ಎಂ.ಪುಟ್ಟಯ್ಯ, ಪದ್ಮಾಲಯ ನಾಗರಾಜ್, ಡಾ.ಕೆ.ವೈ.ನಾರಾಯಣಸ್ವಾಮಿ, ಡಾ.ಸಬಿತಾ ಬನ್ನಾಡಿ, ಡಾ.ಮಮತಾ ಜಿ.ಸಾಗರ, ಡಾ.ಗುರುಲಿಂಗಪ್ಪ ಧಾಬಲೇ, ಅಬ್ದುಲ್ ಹೈ ತೋರಣಗಲ್ಲು, ಡಾ.ಬಿ.ಯು.ಸುಮಾ, ಡಾ.ಎಚ್.ಎಸ್.ಅನುಪಮ, ಡಾ.ಅಮರೇಶ್ ಯತಗಲ್.

2023 ಪುಸ್ತಕ ಬಹುಮಾನ : ಡಾ.ಲಕ್ಷ್ಮಣ್ ವಿ.ಎ., ಡಾ.ಬಿ.ಎಂ.ಗುರುನಾಥ್, ಗಂಗಪ್ಪ ತಳವಾರ್, ಮಾಧವಿ ಭಂಡಾರಿ ಕೆರೆಕೋಣ, ಡಾ.ಸಾಸಿವೆಹಳ್ಳಿ ಸತೀಶ್, ಸರಸ್ವತಿ ಭೋಸಲೆ, ಡಾ.ಡಿ.ವಿ.ಗುರುಪ್ರಸಾದ್, ಡಾ.ಸಿ.ಚಂದ್ರಪ್ಪ, ರಂಗನಾಥ್ ಕಂಟನಕುಂಟೆ, ಮತ್ತೂರು ಸುಬ್ಬಣ್ಣ, ಡಾ.ಎಚ್.ಎಸ್.ಮೋಹನ್, ಡಾ.ಪ್ರಕಾಶ್ ಭಟ್, ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ.ಜೆ.ಪಿ.ದೊಡ್ಡಮನಿ, ದೇವು ಪತ್ತಾರ, ಸತೀಶ್ ತಿಪಟೂರು, ಗೋವಿಂದರಾಜು.ಎಂ. ಕಲ್ಲೂರು, 

2023 ನೇ ಸಾಲಿನ ದತ್ತಿ ಪ್ರಶಸ್ತಿ ಪುರಸ್ಕಾರ : ಡಾ.ಲತಾಗುತ್ತಿ, ಸುಮಾ ರಮೇಶ್, ರೂಪ ಹಾಸನ, ಡಾ.ಕಾತ್ಯಾಯನಿ ಕುಂಜಿಬೆಟ್ಟು, ಟಿ.ಜಿ.ಪುಷ್ಪಲತಾ, ರೋ.ಡಿ.ಸೋಜಾ, ಅಬ್ಬೂರು ಪ್ರಕಾಶ್, ಸುದೇಶ್ ದೊಡ್ಡಪಾಳ್ಯ, ಸುಕನ್ಯಾ ಕನಾರಳ್ಳಿ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...