ಚಿಕ್ಕಬಳ್ಳಾಪುರ | ಅತಿಥಿ ಉಪನ್ಯಾಸಕರಿಗೆ 15 ದಿನಗಳ ಗೌರವಧನ ಭಾಗ್ಯ; ಜಿಲ್ಲಾಧ್ಯಕ್ಷ ಅರಿಕೆರೆ ಮುನಿರಾಜು ಟೀಕೆ

Date:

ಗೌರವಧನವನ್ನೇ ನಂಬಿ ಜೀವನ ನಡೆಸುವ ಅತಿಥಿ ಉಪನ್ಯಾಸರಿಗೆ ಗೌರವಧನ ನೀಡುವಲ್ಲಿ ಎಸಗುತ್ತಿರುವ ತಾರತಮ್ಯ ಕೂಡಲೇ ನಿಲ್ಲಿಸಬೇಕು. ತಿಂಗಳಿಗೆ ಸರಿಯಾಗಿ ಗೌರವಧನ ನೀಡಲು ಮೀನಾಮೇಷ ಎಣಿಸುವ ಕಾಲೇಜು ಶಿಕ್ಷಣ ಇಲಾಖೆ, 15 ದಿನಗಳ ಗೌರವಧನ ಭಾಗ್ಯ ನೀಡಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಅರಿಕೆರೆ ಮುನಿರಾಜು ಟೀಕಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದಿಂದ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರ ಬಗ್ಗೆ ಮಾನವೀಯ ಅಂತಃಕರಣವುಳ್ಳ ಅಧಿಕಾರಿ ಮತ್ತು ಸಿಬ್ಬಂದಿಯ ಕೊರತೆಯಿದೆ ಎಂಬ ಅನುಮಾನವಿದೆ. ಏಕೆಂದರೆ ಪ್ರತಿವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆಯುವಾಗಲೆಲ್ಲಾ ಅನಗತ್ಯವಾಗಿ ಹೊಸ ಹೊಸ ನಿಯಮಾವಳಿ ತಂದು ನೊಂದಿರುವ ನಮಗೆ ಅನಗತ್ಯ ಆಘಾತವನ್ನುಂಟು ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಿ ಒಮ್ಮೆ ನೇಮಕಾತಿ ಹೊಂದಿದವರನ್ನು ನಿವೃತ್ತಿ ಆಗುವವರೆಗೆ ಮುಂದುವರೆಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

guest faculty

ನೇಮಕಾತಿಗೆ ಮಾತ್ರ ಯುಜಿಸಿ ನಿಯಮಾವಳಿ ಅನ್ವಯಿಸುವ ಸರ್ಕಾರ ಮತ್ತು ಇಲಾಖೆ, ಗೌರವ ಧನ ನೀಡುವಲ್ಲಿ ಕೂಡ ಯುಜಿಸಿ ನಿಯಮಾವಳಿಯಂತೆ ನಡೆದುಕೊಳ್ಳಬೇಕಲ್ಲ?. ಯುಜಿಸಿ ಪ್ರಾಧ್ಯಾಪಕರಿಗೆ ತಿಂಗಳ ಮೊದಲಲ್ಲೇ ವೇತನ ಬಿಡುಗಡೆ ಮಾಡಲು ಮಾತ್ರ ಇಲಾಖೆ ಬಳಿ ಅನುದಾನ ಇರುತ್ತದೆ. ಆದರೆ ಆತಿಥಿ ಉಪನ್ಯಾಸಕರಿಗೆ ಗೌರವ ಧನ ನೀಡುವಾಗ ಇರುವುದಿಲ್ಲವೆ? ಈ ರೀತಿಯ ವೇತನ ತಾರತಮ್ಯ ಮಾಡುತ್ತಿರುವುದೇಕೆ..? ಎಂದು ಗುಡುಗಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂಘದ ಗೌರವಾಧ್ಯಕ್ಷ ಸದಾಶಿವ ಮಾತನಾಡಿ, 2024ರ ಜನವರಿಯಲ್ಲಿ ನಡೆದ ಮುಷ್ಕರದ ಸಂದರ್ಭದಲ್ಲಿ ಸರ್ಕಾರ ವಾಗ್ದಾನ ನೀಡಿದಂತೆ ನಿವೃತ್ತಿ ಆಗುವ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟನ್ನು ಈವರೆಗೂ ಕೊಟ್ಟಿಲ್ಲ. ಈ ಕೂಡಲೇ ನಿವೃತ್ತರಾದವರ ಪಟ್ಟಿ ತಯಾರಿಸಿ ಇಡುಗಂಟನ್ನು ಕೂಡಲೇ ಬಿಡುಗಡೆ ಮಾಡಬೇಕು. ಅತಿಥಿ ಉಪನ್ಯಾಸಕರಿಗೆ ವಾರ್ಷಿಕ ಐದು ಲಕ್ಷ ಆರೋಗ್ಯ ವಿಮೆ ನೀಡುವುದಾಗಿ ಹೇಳಿತ್ತು. ಅದೂ ಕೂಡ ಒಂದು ವರ್ಷವಾದರೂ ಜಾರಿಯಾಗಿಲ್ಲ. ಮಹಿಳಾ ಅಥಿತಿ ಉಪನ್ಯಾಸರಿಗೆ ಹೆರಿಗೆ ಸಂದರ್ಭದಲ್ಲಿ ಮೂರು ತಿಂಗಳ ವೇತನ ಸಹಿತ ರಜೆ ನೀಡುವ ವಿಚಾರದಲ್ಲಿ ಕೂಡ ಇದುವರೆಗೂ ಸ್ಪಷ್ಟ ಅದೇಶ ಆಗಿಲ್ಲಾ. ಯುಜಿಸಿ ಉಪನ್ಯಾಸಕರಿಗೆ ಸಮಾನವಾಗಿ ಕೆಲಸ ಪಡೆಯುವ ಕಾಲೇಜು ಶಿಕ್ಷಣ ಇಲಾಖೆ, ಸಮಾಜ ಕೆಲಸಕ್ಕೆ ಸಮಾನ ವೇತನ ನೀಡುವುದನ್ನೇ ಮರೆತಿದೆ ಎಂದು ಕಿಡಿಕಾರಿದರು.

ಬದಲಿಗೆ ವೇತನ ಹೆಚ್ಚುವರಿ ಎಂಬ ತುಪ್ಪವನ್ನು ಮೂಗಿಗೆ ಸವರಿ ನಮ್ಮ ನಮ್ಮಲ್ಲೇ ಅರ್ಹರು, ಅನರ್ಹರು ಎಂಬ ಬೇಧಭಾವ ಮಾಡಿ ಅನಾರೋಗ್ಯಕರ ಸ್ಪರ್ಧೆಗೆ ಅವಕಾಶ ನೀಡಿ, ಪರಸ್ಪರ ಕಚ್ಚಾಡುವಂತೆ ಮಾಡಿದೆ. 20-25 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರಿಗೆ ಹೊಸದಾಗಿ ಯುಜಿಸಿ ನಿಯಮಾವಳಿ ಅನ್ವಯಿಸಲು ಹೊರಟಿರುವುದು ಸರ್ವಥಾ ಸರಿಯಲ್ಲಾ. ಈ ನಡೆಯನ್ನು ಕೂಡಲೇ ಕೈಬಿಟ್ಟು ಒಟ್ಟು ಅತಿಥಿ ಉಪನ್ಯಾಸಕರ ಹಿತಕಾಯಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ : ಚಿಕ್ಕಬಳ್ಳಾಪುರ | ಕನಿಷ್ಠ ಕೂಲಿಗಾಗಿ ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ

ಹಿರಿಯ ಅತಿಥಿ ಉಪನ್ಯಾಸಕ ಮಂಜುನಾಥ್ ಮಾತನಾಡಿ, 24 ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿಯೇ ದುಡಿದಿರುವ ನಾನು ಇಲಾಖೆಯ ಅವೈಜ್ಞಾನಿಕ ತೀರ್ಮಾನ, ಅಮಾನವೀಯ ನಡೆ, ಮತ್ತು ಅಭದ್ರತೆಯೆಂಬ ಬಳುವಳಿಯ ಕಾರಣ 52 ವರ್ಷ ವಯಸ್ಸಾದರೂ ಮಧುವೆ ಆಗಿಲ್ಲ. ನನಗೆ ಬರುವ ಅಲ್ಪ ಗೌರವಧನದಲ್ಲಿ ನನ್ನನ್ನು ಸಾಕಿಕೊಳ್ಳುವುದೇ ಕಷ್ಟವಾಗಿರುವಾಗ, ಬಾಳಸಂಗಾತಿಗೆ ಹೊಸಬಾಳ ಹೇಗೆ ಕೊಡಲಿ ಹೇಳಿ?. ನಾನು ಅಂಗವಿಕಲ ಆಗಿದ್ದರೂ ಪ್ರತಿ ಬಾರಿ ನೇಮಕಾತಿಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್‌ನಲ್ಲಿದ್ದೇನೆ. ಆದರೂ ನನಗೆ ಪೂರ್ಣ ಕಾರ್ಯಭಾರವಿಲ್ಲದೆ ಕೇವಲ 7 ಗಂಟೆಗೆ ದುಡಿಯುತ್ತಿದ್ದೇನೆ. 10-12 ಸಾವಿರ ಪಡೆದು ಬದುಕುವುದಾದರೂ ಹೇಗೆ? ಎಂಬುದನ್ನು ಇಲಾಖೆ ಅರ್ಥ ಮಾಡಿಕೊಳ್ಳಬೇಕು. ಭಾಗ್ಯಗಳ ಸರದಾರ ಸಿದ್ದರಾಮಣ್ಣ ಅತಿಥಿ ಉಪನ್ಯಾಸಕರಿಗೆ ಸೇವೆ ಖಾಯಂ ಭಾಗ್ಯ ನೀಡಲಿ, ತಿಂಗಳ ಮೊದಲಲ್ಲೇ ಗೌರವಧನ ಬಿಡುಗಡೆ ಮಾಡಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಮಣ, ಜಿಲ್ಲಾ ಪದಾಧಿಕಾರಿಗಳಾದ ರಾಘವೇಂದ್ರ, ಸತ್ಯನಾರಾಯಣ, ವೆಂಕಟೇಶ್, ಗಂಗಾಧರಪ್ಪ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...