ಐಕ್ಯತೆಗೆ ಸಾಕ್ಷಿಯಾದ ಗುರ್ಲಾಪೂರ: ಐತಿಹಾಸಿಕ ರೈತ ಹೋರಾಟಗಳ ಪಟ್ಟಿ ಸೇರಿದ ಕಬ್ಬು ಬೆಳೆಗಾರರ ಧರಣಿ

Date:

ಬೆಳಗಾವಿ ಜಿಲ್ಲೆಯ ಒಂದು ಸಣ್ಣ ಗುರ್ಲಾಪೂರ ಪಟ್ಟಣದ ಕ್ರಾಸ್‌ನಲ್ಲಿ ರೈತರ ಹಕ್ಕಿಗಾಗಿ ನಡೆದ ಕಬ್ಬು ಬೆಳೆಗಾರರ ಹೋರಾಟವು  ಶಾಂತಿಯುತ ಮತ್ತು ದೃಢವಾದ ಹೋರಾಟಕ್ಕೆ ನಿದರ್ಶನವಾಗಿತ್ತು. ಸರ್ಕಾರವನ್ನು ಮಣಿಸಿ ತೀರ್ಮಾನಕ್ಕೆ ಒಪ್ಪಿಸಿದ ಈ ಹೋರಾಟ, ಸಂಘಟಿತ ಶಕ್ತಿ ಮತ್ತು ರೈತರ ಏಕತೆಯ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಇಂತಹ ಐತಿಹಾಸಿಕ ರೈತ ಹೋರಾಟಗಳ ಪಟ್ಟಿಯಲ್ಲಿ ಸೇರುವಂತಾಯಿತು.

ರಾಜ್ಯದ ಅನೇಕ ಐತಿಹಾಸಿಕ ರೈತ ಹೋರಾಟಗಳ ಸಾಲಿಗೆ ಈಗ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್‌ನಲ್ಲಿ ನಡೆದ ಕಬ್ಬು ಬೆಳೆಗಾರರ ಹೋರಾಟವೂ ಸೇರಿದೆ. ಪ್ರತಿ ಟನ್ ಕಬ್ಬಿಗೆ ₹3,500 ನೀಡಬೇಕೆಂಬ ನ್ಯಾಯಯುತ ಬೇಡಿಕೆಯನ್ನು ಮುಂದಿಟ್ಟುಕೊಂಡು, ರೈತರು 9 ದಿನಗಳ ಕಾಲ ಅಹೋರಾತ್ರಿ ಹೋರಾಟ ನಡೆಸಿದರು.

1951ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡು ಗ್ರಾಮದಲ್ಲಿ ಭೂಮಾಲಿಕರ ಶೋಷಣೆಯ ವಿರುದ್ಧ ನಡೆದ ಗೇಣಿ ರೈತರ ಬಂಡಾಯ, 1980ರ ಜುಲೈ 21ರಂದು ನರಗುಂದದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಸಿಗದಿದ್ದರೂ ಸರ್ಕಾರ ವಿಧಿಸಿದ್ದ ಅಭಿವೃದ್ದಿ ಕರವನ್ನು ವಿರೋಧಿಸಿ ನಡೆದ ಹೋರಾಟಗಳಂತೆ ಗುರ್ಲಾಪೂರ ಹೋರಾಟವೂ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಮತ್ತೊಂದು ಅಧ್ಯಾಯವಾಗಿದೆ.

ಗುರ್ಲಾಪೂರ ಕಬ್ಬು ಬೆಳೆಗಾರರ ರೈತ ಹೋರಾಟದ ಹಾದಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1000916848 1

ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಬೆಳಗಾವಿಯಾಗಿದೆ. ರಾಜ್ಯದ ಒಟ್ಟು 81 ಸಕ್ಕರೆ ಕಾರ್ಖಾನೆಗಳಲ್ಲಿ 29 ಕಾರ್ಖಾನೆಗಳು ಬೆಳಗಾವಿ ಜಿಲ್ಲೆಯಲ್ಲಿವೆ. ಈ ಕಾರಣದಿಂದಲೇ ಜಿಲ್ಲೆಯ ಗುರ್ಲಾಪೂರ ಕ್ರಾಸ್‌ನಲ್ಲಿ ಪ್ರಾರಂಭವಾದ ಕಬ್ಬು ಬೆಳೆಗಾರರ ಹೋರಾಟವು ರಾಜ್ಯಾದ್ಯಂತ ಮಹತ್ವ ಪಡೆದುಕೊಂಡಿತು ಮತ್ತು ಇತರೆ ಜಿಲ್ಲೆಗಳಿಗೂ ಪಸರಿಸಿತು.

ಗುರ್ಲಾಪೂರ ಕ್ರಾಸ್‌ನಲ್ಲಿ ರೈತ ನಾಯಕರಾದ ಶಶಿಕಾಂತ ಗುರುಗಳು ಮತ್ತು ಚುನಪ್ಪ ಪೂಜಾರಿಯವರ ನೇತೃತ್ವದಲ್ಲಿ ಒಂಬತ್ತು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ರೈತ ನಾಯಕರು, ಸಂಘಟನೆಗಳು ಮತ್ತು ಸಾಮಾಜಿಕ ಹೋರಾಟಗಾರರು ಆಗಮಿಸಿ ಬೆಂಬಲ ನೀಡಿದರು.

ವಕೀಲರು, ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಕೂಲಿ ಕಾರ್ಮಿಕರು, ಆಟೋ ಚಾಲಕರು ಮುಂತಾದ ಎಲ್ಲ ವರ್ಗದ ಜನರು ಹೋರಾಟದಲ್ಲಿ ಭಾಗವಹಿಸಿದರು. ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ರೈತರು ಹಗಲು ರಾತ್ರಿ ಎನ್ನದೆ ಧರಣಿಯಲ್ಲಿ ಪಾಲ್ಗೊಂಡು ಹೋರಾಟ ನಡೆಸಿದರು.

1000916849 1

ಹೋರಾಟದ ಸಮಯದಲ್ಲಿ ರೈತರಿಗೆ ಸ್ಥಳದಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ರೈತ ಮಹಿಳೆಯರು ಮತ್ತು ಮಠಗಳಿಂದ ಹೋರಾಟಗಾರರಿಗೆ ರೊಟ್ಟಿಗಳನ್ನು ಕಳುಹಿಸಿಕೊಡಲಾಯಿತು. ರೈತರು ಹಣ ಸಂಗ್ರಹಿಸಿ ಹೋರಾಟದ ಖರ್ಚುಗಳನ್ನು ತಾವೇ ನಿರ್ವಹಿಸಿದರು.

ಹೋರಾಟ ತೀವ್ರಗೊಂಡಾಗ ಸರ್ಕಾರದ ಮಧ್ಯಪ್ರವೇಶ

ಹೋರಾಟವು ದೊಡ್ಡ ಮಟ್ಟದ ಸ್ವರೂಪ ಪಡೆಯುವ ಲಕ್ಷಣ ಕಂಡ ಕೂಡಲೇ ಸರ್ಕಾರವು ನಾಲ್ಕನೇ ದಿನ ಜಿಲ್ಲಾಧಿಕಾರಿಯನ್ನು ಹೋರಾಟದ ಸ್ಥಳಕ್ಕೆ ಕಳುಹಿಸಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ರೈತ ನಾಯಕರೊಂದಿಗೆ ಚರ್ಚೆ ನಡೆಸಿ, ಪ್ರತಿ ಟನ್ ಕಬ್ಬಿಗೆ ₹3200 ನೀಡುವ ಪ್ರಸ್ತಾವವನ್ನು ಮಂಡಿಸಿದರು. ಆದರೆ ರೈತರು ಈ ಪ್ರಸ್ತಾವಕ್ಕೆ ಒಪ್ಪಲಿಲ್ಲ.

ಪರಿಸ್ಥಿತಿ ತೀವ್ರವಾಗುತ್ತಿದ್ದಂತೆಯೇ ಸರ್ಕಾರದ ಪರವಾಗಿ ಸಚಿವ ಎಚ್ ಕೆ ಪಾಟೀಲ್ ಅವರು ಸ್ಥಳಕ್ಕಾಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿದರು. ಅವರು ರೈತರಿಗೆ ಬೇಡಿಕೆಗಳ ಕುರಿತು ಚರ್ಚೆ ಮಾಡಲು ಬೆಂಗಳೂರಿಗೆ ಬನ್ನಿ ಎಂದು ಮನವಿ ಮಾಡಿದರೂ ಕೂಡ ಪಟ್ಟು ಹಿಡಿದ ರೈತರು ಸರ್ಕಾರವೇ ಇಲ್ಲಿಗೆ ಬಂದು ಕಬ್ಬಿನ ಬೆಲೆ ಘೋಷಿಸಬೇಕು” ಎಂದು ಆಗ್ರಹಿಸಿದರು.

ಹೋರಾಟಕ್ಕೆ ಉತ್ಸಾಹ ತುಂಬಿದ ರೈತ ಮುಖಂಡರ ಭಾಷಣ

1000916847

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್‌ನಲ್ಲಿ ನಡೆದ ಕಬ್ಬು ಬೆಲೆ ಹೋರಾಟದಲ್ಲಿ ರೈತ ನಾಯಕರಾದ ಚೂನಪ್ಪ ಪೂಜಾರಿ ಮತ್ತು ಶಶಿಕಾಂತ ಗುರೂಜಿ ನೀಡಿದ ಪ್ರೇರಣಾದಾಯಕ ಭಾಷಣಗಳು ರೈತರಲ್ಲಿ ಹೊಸ ಉತ್ಸಾಹ ತುಂಬಿದವು. ʼನಮ್ಮ ಹಕ್ಕಿನ ಬೆಲೆ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆʼ ಎಂಬ ಅವರ ಮಾತುಗಳು ರೈತರ ಮನೋಬಲವನ್ನು ಹೆಚ್ಚಿಸಿತು.

ʼರಾಜಕೀಯ ನಾಯಕರೇ ಕಾರ್ಖಾನೆಗಳ ಮಾಲೀಕರಾಗಿರುವುದರಿಂದ ಸರ್ಕಾರವು ಸಕ್ಕರೆ ಲಾಬಿಗೆ ಹೆದರಿದೆʼ ಎಂಬ ಆರೋಪ ಹೋರಾಟಗಾರರಿಂದ ಕೇಳಿಬಂತು. ಯಾವ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ರೈತರು ಘೋಷಣೆ ಕೂಗಿದರು.

ಈ ಹೋರಾಟದಲ್ಲಿ ರೈತರ ಮಕ್ಕಳೂ ಕೂಡ ಭಾಗಿಯಾಗಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ನೀಡಿದ ಭಾಷಣಗಳು ವೇದಿಕೆಯಲ್ಲಿ ಚಪ್ಪಾಳೆ ಗದ್ದಲ ಮೂಡಿಸಿತು. ಅವರ ಮಾತುಗಳು ರೈತರಿಗೆ ಮತ್ತಷ್ಟು ಪ್ರೇರಣೆ ನೀಡಿದ್ದು, ಹೋರಾಟದ ಉತ್ಸಾಹವನ್ನು ಇನ್ನಷ್ಟು ಬಲಪಡಿಸಿತು.

ಮಾಧ್ಯಮಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ ಶಶಿಕಾಂತ ಗುರುಗಳ ತೀವ್ರ ಭಾಷಣ

ಗುರ್ಲಾಪೂರ ಕ್ರಾಸ್‌ನಲ್ಲಿ ಸಾವಿರಾರು ಕಬ್ಬು ಬೆಳೆಗಾರರು ಒಂಬತ್ತು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ, ಟಿವಿ ಮಾಧ್ಯಮಗಳು ಈ ಹೋರಾಟದ ಕುರಿತು ಆಸಕ್ತಿ ತೋರಿಸದಿರುವುದು ರೈತ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಯಿತು. ಹೋರಾಟದ ಸಮಯದಲ್ಲಿ ಯಾವುದೇ ಪ್ರಮುಖ ಟಿವಿ ಚಾನೆಲ್‌ಗಳು ಸ್ಥಳಕ್ಕೆ ಭೇಟಿ ನೀಡದೇ, ಒಂದು ಸಣ್ಣ ಸುದ್ದಿಯನ್ನೂ ಪ್ರಸಾರ ಮಾಡದಿರುವುದರಿಂದ ರೈತರ ಅಸಮಾಧಾನ ಹೆಚ್ಚಾಯಿತು.

ಈ ಸಂದರ್ಭದಲ್ಲಿ ರೈತ ನಾಯಕ ಶಶಿಕಾಂತ ಗುರುಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದು, “ಕಬ್ಬು ಬೆಳೆಗಾರರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿದ್ದರೂ, ಟಿವಿ ಮಾಧ್ಯಮಗಳು ಸುದ್ದಿ ಮಾಡುತ್ತಿಲ್ಲ. ಸುವರ್ಣ ಟಿವಿಯ ಅಜೀತ ಹನುಮಕ್ಕನವರು ರಾಜಕಾರಣಿಗಳ ಪರವಾಗಿ ಸುದ್ದಿ ಮಾಡುತ್ತಾರೆಯೇ ಹೊರತು ರೈತರ ಪರವಾಗಿ ಮಾತಾಡುವುದಿಲ್ಲ. ಪಾಕಿಸ್ತಾನದಲ್ಲಿ ಯುದ್ಧವಾದರೆ ಹೋಗಿ ವರದಿ ಮಾಡುವ ನಿನಗೆ ಇಲ್ಲಿ ಬಂದು ಸುದ್ದಿ ಮಾಡಲು ಆಗುತ್ತಿಲ್ಲವೇ? ಹೊಟ್ಟೆಗ ಅನ್ನ ತಿನ್ನುವವನೇ ಆಗಿದ್ದರೆ, ಮನುಷ್ಯತ್ವ ಇದ್ದರೆ ಇಲ್ಲಿ ಬಂದು ಸುದ್ದಿ ಮಾಡು. ಉತ್ತರ ಕರ್ನಾಟಕದವರು ನಿಮ್ಮ ಚಾನೆಲ್ ನೋಡದಿದ್ದರೆ ನೀವು ಧಾರವಾಡಕ್ಕೆ ಬಂದು ಕಸ ತೆಗೆಯಬೇಕಾಗುತ್ತದೆ” ಎಂದು ಶಶಿಕಾಂತ ಗುರುಗಳು ಆಕ್ರೋಶ ವ್ಯಕ್ತಪಡಿಸಿದರು.

“ಕಬ್ಬು ಬೆಳೆಗಾರರ ಹೋರಾಟದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಆಗಮನವು ಹೊಸ ವಿವಾದಕ್ಕೆ ಕಾರಣವಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಜಯೇಂದ್ರ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಸರಿಯಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸದೆ, ರೈತರೊಂದಿಗೆ ಹೋರಾಟ ಮಾಡುವ ನಾಟಕವಾಡುತ್ತಿದ್ದಾರೆ” ಎಂದು ರೈತ ಹೋರಾಟಗಾರ್ತಿ ಮಂಜುಳಾ ಪೂಜಾರಿ ಕಟುವಾಗಿ ಟೀಕಿಸಿದರು.

ಹೋರಾಟದ ಪ್ರಮುಖ ಹಂತಗಳು: ಐತಿಹಾಸಿಕ ಘಟನೆಗಳ ಪಟ್ಟಿ

ಈ ಧರಣಿಯು ಕರ್ನಾಟಕದ ರೈತ ಹೋರಾಟಗಳ ಐತಿಹಾಸಿಕ ಪಟ್ಟಿಯಲ್ಲಿ ಸೇರಿದಂತೆ, ಇದರ ಹಂತಗಳು ಇಲ್ಲಿವೆ

ದಿನಾಂಕಪ್ರಮುಖ ಘಟನೆಗಳುಪರಿಣಾಮ
ನವೆಂಬರ್ 1, 2025ಗುರ್ಲಾಪೂರ ಕ್ರಾಸ್‌ನಲ್ಲಿ ಅಹೋರಾತ್ರಿ ಧರಣಿ ಆರಂಭ. ರೈತರು ₹3,500 ಬೆಲೆ ಒತ್ತಾಯಿಸಿ ಹೆದ್ದಾರಿ ಬಂದ್.ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಭಟನೆ ಹರಡಿತು.
ನವೆಂಬರ್ 2-3ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ಬೆಂಬಲ ಸೂಚಿಸಿದರು. ಅಥಣಿ, ಚಿಕ್ಕೋಡಿ, ಗೋಕಕ್‌ಗಳಲ್ಲಿ ಬಂದ್.ರಾಜಕೀಯ ಗಮನ ಸೆಳೆಯಿತು; ವಿಜಯೇಂದ್ರ ರಾತ್ರಿ ಧರಣಿಯಲ್ಲಿ ಉಳಿದರು.
ನವೆಂಬರ್ 4-55ನೇ ದಿನಕ್ಕೆ ಕಾಲಿಟ್ಟ ಧರಣಿ. ರೈತ ಲಕ್ಕಪ್ಪ ಗುಣದಳ್ ಸತ್ಯಸಂಕಲ್ಪ ಮಾಡಿದರು. ಹುಕ್ಕೇರಿ, ಮೂಡಲಗಿಯಲ್ಲಿ ಬಂದ್ ಮಾಡಲಾಯಿತು.ಪೊಲೀಸ್ ಲಾಠಿ ಚಾರ್ಜ್; ರೈತರ ಆಕ್ರೋಶ ಹೆಚ್ಚಾಯಿತು.
ನವೆಂಬರ್ 67ನೇ ದಿನ: ಸಚಿವ ಎಚ್.ಕೆ. ಪಾಟೀಲ್ ಭೇಟಿ. ರೈತರು ಚರ್ಚೆಗೆ ಒಪ್ಪದೆ, ದೆಹಲಿಯಲ್ಲಿ ಸಭೆಯ ಆಗ್ರಹ.ಪ್ರತಿಭಟನೆ ತೀವ್ರಗೊಂಡಿತು; ರೈತರು ಸಚಿವರ ವಾಹನದ ಮೇಲೆ ಚಪ್ಪಲಿ ಎಸೆದ ಘಟನೆ.
ನವೆಂಬರ್ 78ನೇ ದಿನ: ಹೆದ್ದಾರಿ ಬಂದ್‌ಗೆ ರೈತರು ಮುಂದಾಗಿದ್ದರು. ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಕೇಂದ್ರಕ್ಕೆ ಪತ್ರ ಬರೆದರು.ಬಾಗಲಕೋಟೆ, ವಿಜಯಪುರದಲ್ಲಿ ಹಿಂಸೆ; ವಾಹನಗಳ ಮೇಲೆ ಕಲ್ಲುತೂರಾಟ.
ನವೆಂಬರ್ 89ನೇ ದಿನ: ಸರ್ಕಾರ ₹3,300 ಟನ್‌ಗೆ ನಿಗದಿ. ಸಚಿವ ಶಿವನಂದ ಪಾಟೀಲ್ ಆದೇಶ ಹಸ್ತಾಂತರಿಸಿದರು.₹200 ಹೆಚ್ಚಳದ ಸಾಧನೆ: ರೈತರು ಸಂಭ್ರಮಿಸಿ ಧರಣಿ ಹಿಂಪಡೆದರು.

ಗರ್ಲಾಪೂರ ರೈತ ಹೋರಾಟ ಅಂತ್ಯ ಸರ್ಕಾರದಿಂದ ₹3,300 ದರ ನಿಗದಿ

ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ರೈತ ಹೋರಾಟಗಾರರು ಸರ್ಕಾರಕ್ಕೆ ಎರಡು ದಿನಗಳ ಗಡುವು ನೀಡಿದರು. ಒಂದು ವೇಳೆ ಸರ್ಕಾರವು ಕಬ್ಬು ದರ ನಿಗದಿ ಮಾಡದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಬೆಳವಣಿಗೆಗೆ ಸ್ಪಂದಿಸಿದ ಸರ್ಕಾರವು ಸಕ್ಕರೆ ಸಚಿವ ಶಿವಾನಂದ ಪಾಟೀಲರನ್ನು ತಕ್ಷಣ ಹೋರಾಟದ ಸ್ಥಳಕ್ಕೆ ಕಳುಹಿಸಿತು. ಈ ಹಿನ್ನೆಲೆಯಲ್ಲಿ ಸಚಿವರು ಹೋರಾಟಗಾರರೊಂದಿಗೆ ಚರ್ಚೆ ನಡೆಸಿ, ಸರ್ಕಾರಕ್ಕೆ ಎರಡು ದಿನಗಳ ಸಮಯ ನೀಡುವಂತೆ ಮನವಿ ಮಾಡಿದರು. ಇದಕ್ಕೆ ರೈತರು ಒಪ್ಪಿಕೊಂಡ ರೈತರು ರಾಜ್ಯಾದ್ಯಂತ ನಡೆಸಬೇಕಿದ್ದ ಹೋರಾಟಕ್ಕೆ ತಡೆ ನೀಡದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಬ್ಬು ಕಾರ್ಖಾನೆ ಮಾಲಕರೊಂದಿಗೆ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,200 ಜತೆಗೆ ಕಾರ್ಖಾನೆಯಿಂದ ₹50 ಮತ್ತು ಸರ್ಕಾರದಿಂದ ₹50 ಸೇರಿಸಿ ಒಟ್ಟು ₹3,300ರಂತೆ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ನಿರ್ಧಾರ ಕೈಗೊಳ್ಳಲಾಯಿತು.

ನಂತರ ಸಕ್ಕರೆ ಸಚಿವ ಶಿವಾನಂದ ಪಾಟೀಲರು ಗುರ್ಲಾಪೂರ ಕ್ರಾಸ್ ಹೋರಾಟದ ಸ್ಥಳಕ್ಕೆ ಆಗಮಿಸಿ ಸರ್ಕಾರದ ಆದೇಶದ ಪ್ರತಿಯನ್ನು ರೈತ ನಾಯಕರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರೈತ ನಾಯಕರು ಮತ್ತು ಕಬ್ಬು ಬೆಳೆಗಾರರು ವಿಜಯೋತ್ಸವ ಆಚರಿಸಿದರು.

ಆದರೂ, ರಿಕವರಿ ದರದ ಸಮಸ್ಯೆಗಳು, ಚೆಕ್‌ಗಳನ್ನು ನೀಡುವುದನ್ನು ತಡೆಯುವುದು ಮುಂದುವರೆಯಬಹುದು. ಹಾಗಾಗಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಹೊಸ ಹೋರಾಟ ನಡೆಯಬಹುದು ಎಂಬ ಅಂಶಗಳು ಕೇಳಿಬರುತ್ತಿವೆ.

ಗುರ್ಲಾಪೂರ ಹೋರಾಟವು ಕರ್ನಾಟಕದ ಐತಿಹಾಸಿಕ ರೈತ ಆಂದೋಲನಗಳನ್ನು ನೆನಪಿಸುತ್ತದೆ. ಕರ್ನಾಟಕದ ರೈತ ಹೋರಾಟಗಳ ಕೆಲವು ಪ್ರಮುಖ ಐತಿಹಾಸಿಕ ಸಂದರ್ಭದಗಳು ಇಲ್ಲಿವೆ.

1970ರ ದಂಡೆ ನಾಯಕ್ ಹೋರಾಟ: ಜಮೀನು ಸುಧಾರಣೆಗಾಗಿ ರೈತರ ಐಕ್ಯತೆ: ಸರ್ಕಾರಿ ನೀತಿಗಳ ಬದಲಾವಣೆ.
1980ರ ರೈತ ಸಂಘದ ಧರಣಿಗಳು: ನ್ಯಾಯ ದರಕ್ಕಾಗಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ಕಬ್ಬು ಸೇರಿದಂತೆ ಇತರೆ ಬೆಳೆಗಳ ಬೆಲೆ ನಿಗದಿ.
2022ರ ಕಬ್ಬು ಬೆಳೆಗಾರರ ಧರಣಿ: ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ 11 ದಿನಗಳ ಹೋರಾಟ
2023ರ ಗುಜರಾತ್ ಮಾದರಿ ಒತ್ತಾಯ: ಬೆಳಗಾವಿಯಲ್ಲಿ ₹3,500 ದರಕ್ಕಾಗಿ ಪ್ರತಿಭಟನೆ: ಲಾಭಾಂಶ ವಿತರಣೆಗೆ ಒತ್ತಡ.

ಈ ಎಲ್ಲ ಹೋರಾಟಗಳಂತೆ, ಗುರ್ಲಾಪೂರ ಹೋರಾಟವೂ ರೈತರ ಐಕ್ಯದಿಂದ ಸರ್ಕಾರಗಳನ್ನು ಕುಗ್ಗಿಸಿದೆ. ಗುರ್ಲಾಪೂರ ಕಬ್ಬು ಬೆಳೆಗಾರರ ಹೋರಾಟವು ರಾಜ್ಯದ ರೈತ ಹೋರಾಟಗಳ ಇತಿಹಾಸದಲ್ಲಿ ದಾಖಲಾಗುವಂತಾಯಿತು. ಇದು ಭವಿಷ್ಯದ ರೈತ ಚಳವಳಿಗಳಿಗೆ ಮಾದರಿಯಾಗುತ್ತದೆ. ಈ ಜಯ ಕೇವಲ ಕಬ್ಬು ಬೆಳೆಗಾರರದ್ದಾಗಿರದೆ, ರಾಜ್ಯದ ಎಲ್ಲ ರೈತರ ಹೋರಾಟಕ್ಕೆ ದೊರೆತ ಗೌರವವಾಗಿದೆ.

ಇದನ್ನೂ ಓದಿದ್ದೀರಾ? ದಾವಣಗೆರೆ | ಕಬ್ಬು ಬೆಳೆಗಾರರ ಸಮಸ್ಯೆಗೆ ಅಧ್ಯಯನ ಸಮಿತಿ ರಚಸಿ: ರೈತ ಮುಖಂಡ ವಾಸುದೇವ ಮೇಟಿ

ಬೆಳಗಾವಿ ಜಿಲ್ಲೆಯ ಒಂದು ಸಣ್ಣ ಗುರ್ಲಾಪೂರ ಪಟ್ಟಣದ ಕ್ರಾಸ್‌ನಲ್ಲಿ ರೈತರ ಹಕ್ಕಿಗಾಗಿ ನಡೆದ ಕಬ್ಬು ಬೆಳೆಗಾರರ ಹೋರಾಟವು ಶಾಂತಿಯುತ ಮತ್ತು ದೃಢವಾದ ಹೋರಾಟಕ್ಕೆ ನಿದರ್ಶನವಾಗಿತ್ತು. ಸರ್ಕಾರವನ್ನು ಮಣಿಸಿ ತೀರ್ಮಾನಕ್ಕೆ ಒಪ್ಪಿಸಿದ ಈ ಹೋರಾಟ, ಸಂಘಟಿತ ಶಕ್ತಿ ಮತ್ತು ರೈತರ ಏಕತೆಯ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಇಂತಹ ಐತಿಹಾಸಿಕ ರೈತ ಹೋರಾಟಗಳ ಪಟ್ಟಿಯಲ್ಲಿ ಸೇರುವಂತಾಯಿತು.

₹3,300 ದರ ನಿಗದಿಯಾದರೂ, ಈ ಹೋರಾಟದ ಅರ್ಥ ಕೇವಲ ಆರ್ಥಿಕ ಲಾಭದಲ್ಲಿಲ್ಲ. ರೈತರ ಸ್ವಾಭಿಮಾನ, ಸಹನೆ ಮತ್ತು ಹೋರಾಟದ ಮನೋಭಾವದ ಜಯವಾಗಿದೆ. ಗುರ್ಲಾಪೂರ ಕ್ರಾಸ್‌ನಲ್ಲಿ ಪ್ರಾರಂಭವಾದ ರೈತರ ಹೋರಾಟದ ಧ್ವನಿ, ರಾಜ್ಯದ ಗ್ರಾಮಾಂತರ ಭಾಗಗಳಾದ್ಯಂತ ಪ್ರತಿಧ್ವನಿಸುತ್ತ, ಮುಂದಿನ ಹೋರಾಟಗಳಿಗೆ ದಾರಿ ತೋರಿಸುವ ಶಕ್ತಿಯಾಗಿ ಉಳಿದಿದೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...