ಬೀದರ್‌ | ಜೋಳಿಗೆ ಹಿಡಿದು ದುಶ್ಚಟ ಭಿಕ್ಷೆ ಬೇಡಿದ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು

Date:

  • ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದಲ್ಲಿ ಜೋಳಿಗೆ ಹಿಡಿದು ದುಶ್ಚಟ ಭಿಕ್ಷೆ ಬೇಡಿದ ಶ್ರೀಗಳು
  • ಶ್ರಾವಣ ಮಾಸದ ನಿಮಿತ್ಯ ʼದುರ್ಗುಣದ ಭಿಕ್ಷೆ ಸನ್ಮಾರ್ಗದ ದೀಕ್ಷೆʼ ಎಂಬ ವಿನೂತನ ಅಭಿಯಾನ

ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳನ್ನು ಭಿಕ್ಷೆ ಬೇಡಿದರು.

ಶ್ರಾವಣ ಮಾಸದ ಅಂಗವಾಗಿ ಕಳೆದ ನಾಲ್ಕೈದು ದಿನಗಳಿಂದ ಗ್ರಾಮದಲ್ಲಿ ಬಸವ ದರ್ಶನ ಪ್ರವಚನ ನಡೆಸಿ ಕೊಡುತ್ತಿರುವ ಶ್ರೀಗಳು ಶುಕ್ರವಾರ ಜೋಳಿಗೆ ಹಿಡಿದು ʼದುರ್ಗುಣದ ಭಿಕ್ಷೆ ಸನ್ಮಾರ್ಗದ ದೀಕ್ಷೆʼ ಅಭಿಯಾನ ಮುಂದುವರೆಸಿದರು. ಸೂರ್ಯ ಉದಯಕ್ಕೂ ಮುನ್ನವೇ ಗ್ರಾಮಕ್ಕೆ ಭೇಟಿ ನೀಡಿದ ಪೂಜ್ಯರು 200ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಯುವಕರು, ಮಹಿಳೆಯರು, ಹಿರಿಯರು, ವೃದ್ಧರಿಂದ ತಂಬಾಕು, ಗುಟ್ಕಾ, ಬೀಡಿ, ಸಿಗರೆಟ್ ಸೇರಿ ವಿವಿಧ ಚಟಗಳನ್ನು ಜೋಳಿಗೆಗೆ ಹಾಕಿಸಿಕೊಂಡು ಜೀವನುದ್ದಕ್ಕೂ ಚಟಗಳಿಗೆ ದಾಸರಗಾದಂತೆ ಇರುತ್ತೇವೆ ಎಂದು ಪ್ರತಿಜ್ಞೆ ಬೋಧಿಸಿದರು.

“ವಿಶ್ವಗುರು ಬಸವಣ್ಣನವರು ದೇಹವನ್ನು ದೇಗುಲ ಎಂದು ಕರೆದಿದ್ದಾರೆ. ಅಂತಹ ದೇಗುಲವನ್ನು ನಾವು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬಾರದು. ದೇವರು ಎಲ್ಲರಿಗೂ ಸುಂದರ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ್ದಾನೆ. ಆದರೂ ಕೂಡ ಬಹಳಷ್ಟು ಜನರು ವ್ಯಸನಗಳಿಗೆ ಬಲಿಯಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ” ಎಂದು ಪಟ್ಟದ್ದೇವರು ಕಳವಳ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ದೇಶದ ಭವಿಷ್ಯ ಆಗಿರುವ ಯುವಜನಾಂಗ ಹೆಚ್ಚಾಗಿ ಮದ್ಯ, ಗುಟ್ಕಾ, ಸಿಗರೆಟ್ ಸೇವಿಸಿ ದೇವರು ಕೊಟ್ಟ ಅದ್ಭುತ ಶರೀರವನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕ ತರಿಸಿದೆ. ದುಶ್ಚಟಗಳಿಂದ ಕುಟುಂಬದ ನೆಮ್ಮದಿ ನಾಶವಾಗುತ್ತದೆ. ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಇದನ್ನು ಎಲ್ಲರೂ ಅರಿತು ಇದನ್ನು ದುಶ್ಚಟ ತ್ಯಜಿಸಿ ಸುಂದರ ಬದುಕು ತಮ್ಮದಾಗಿಸಿಕೊಳ್ಳಬೇಕು” ಎಂದು ಪೂಜ್ಯರು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಕ.ಕ. ವಿಮೋಚನೆಗೆ ಹೋರಾಡಿದ ಸೇನಾನಿಗಳ ಸ್ಮಾರಕ ನಿರ್ಮಿಸಿ: ಗುರುನಾಥ ವಡ್ಡೆ

ಈ ಸಂದರ್ಭದಲ್ಲಿ ಪ್ರಮುಖರಾದ ಗುರಯ್ಯ ಸ್ವಾಮಿ, ಸಿದ್ರಾಮಪ್ಪ ಧೂಳೆ, ಬಸವರಾಜ ಪರಸಣ್ಣೆ, ಬಸವರಾಜ ಖೂಬಾ, ಚಂದ್ರಕಾಂತ ಕುಂಬಾರ್, ಸಂಗಮೇಶ ಪರಸಣ್ಣೆ, ಧನರಾಜ ಮಾಕಾ, ಧನರಾಜ ಪರಸಣ್ಣೆ, ಭೀಮಣ್ಣ ಮಾಶೆಟ್ಟೆ, ಮಲ್ಲಿಕಾರ್ಜುನ ಧೂಳೆ, ನಾಗಶೆಟ್ಟಿ ಚೋಳಾ, ಕಲ್ಯಾಣರಾವ ಭೌರಾ, ಭದ್ರೇಶ ಹಿರೇಮಠ, ವಿಲಾಸ ಧೂಳೆ, ಮಲ್ಲಮ್ಮ ಪರಸಣ್ಣೆ, ಗಂಗಮ್ಮ ಪರಸಣ್ಣೆ, ಪುತಳಾಬಾಯಿ ಕುಂಬಾರಗೆರೆ, ರಂಗಮ್ಮ ಮಾಕಾ, ಲಕ್ಷ್ಮಿ ಕುಂಬಾರಗೆರೆ, ಭಾಗಶ್ರೀ ಪರಸಣ್ಣೆ, ಅನುಸೂಯಾ ಮಾಶೆಟ್ಟೆ, ಸಂಗಮ್ಮ ಧೂಳೆ, ಲಕ್ಷ್ಮಿ ಪರಸಣ್ಣೆ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...