ಹಾಸನ | ಬೌದ್ಧ ಧರ್ಮದ ಸಂಸ್ಕೃತಿಯನ್ನು ಅಂಬೇಡ್ಕರ್ ಎತ್ತಿ ಹಿಡಿದಿದ್ದಾರೆ; ಮಾ. ಡಿಸಿಪಿ ಸಿದ್ದರಾಜು

Date:

ಬೌದ್ಧ ಮಹಾಸಭಾ ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಟ್ಟಿದ ಸಂಘಟನೆಯಾಗಿದೆ, 1934 ರಲ್ಲಿ ನಾಸಿಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಟ್ಟು ಆಕಸ್ಮಿಕ ಸಾವು ಖಚಿತ ಆದರೆ ಸಾಯುವಾಗ ಹಿಂದುವಾಗಿ ಸಾಯಲಾರೆ ಎಂಬ ಮಾತನ್ನು ಹೇಳುವ ಮೂಲಕ ಬೌದ್ಧ ಧರ್ಮದ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಜಾತಿ ಹೆಸರಿನಲ್ಲಿ ಮನುಕುಲ ನಾಶ ಮಾಡಿದ ಪೇಶ್ವೆಯವರ ವಿರುದ್ಧ  500 ಮಹಾರ್ ಯೋಧರ ಸಾಧನೆಯ ಫಲವೇ ಈ ವಿಜಯೋತ್ಸವ ಎಂದು ನಿವೃತ್ತ ಡಿಸಿಪಿ ಹಾಗೂ ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಸಿದ್ದರಾಜು ಮಂಗಳವಾರ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಮಾತಾಡಿದರು. 

ಇದನ್ನೂ ಓದಿದ್ದೀರಾ?ಹಾಸನ | ಆಳುವ ಸರ್ಕಾರಗಳ ಕೆಲ ನೀತಿಗಳಿಂದಾಗಿ ಸಂವಿಧಾನಾತ್ಮಕ ಹಕ್ಕುಗಳು ದುರ್ಬಲ: ಭೀಮ್ ರಾವ್ ಅಂಬೇಡ್ಕರ್ 

1946 ರಲ್ಲಿ ಶುದ್ರರೆಂದರೆ ಯಾರು ಎಂಬ ಪುಸ್ತಕದಲ್ಲಿ ದಲಿತರ ಸಂಕಷ್ಟದ ಕರುಣಾಜನಕ ಕಥೆಯನ್ನು ಬರೆದಿದ್ದಾರೆ, ಶ್ರೇಣೀಕೃತ ಜಾತಿ ವ್ಯವಸ್ಥೆ ತೊಡೆದು ಹಾಕಲು ನಡೆದ ಹೋರಾಟ ಇತಿಹಾಸದ ಪುಟ ಸೇರಿದೆ, ಅಲ್ಲಿನಿಂದ ಈ ವರೆಗೆ ಎಲ್ಲದೆ ಈ ವಿಜಯೋತ್ಸವ ನಡೆಯುತ್ತಿದ್ದು ಹಾಸನದಲ್ಲಿ ಕೂಡ ಆಯೋಜನೆಗೊಂಡಿರುವುದ್ದು ಹೆಮ್ಮೆಯ ವಿಚಾರ. ಬಾಬಾಸಾಹೇಬರ ಆಲೋಚನೆಯಂತೆ ವಿಶ್ವಕ್ಕೆ ಶಾಂತಿ ಸಂದೇಶ ಸಾರುವ ಬೌದ್ಧ ಧರ್ಮದ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಬುದ್ಧ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಲು ವಿಳಂಬ ಮಾಡಿ ಕಳೆದ ವರ್ಷದಿಂದ ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಜಿ ಡಿಸಿಪಿ ಸಿದ್ದರಾಜು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...