ಹಾಸನ ನಗರದ ಚನ್ನಪಟ್ಟಣ ಕೆ.ಎಚ್.ಬಿ ಲೇಔಟ್ ನಲ್ಲಿ ನೂತನವಾಗಿ ಆರಂಭವಾಗಿರುವ ಮೈ ಎಸ್.ಎಂ ವೆಲ್ನೆಸ್ ಕೇರ್ ನ ನೂತನ ಕಚೇರಿ ಉದ್ಘಾಟನೆ ನೆರವೇರಿಸಿ ಆಯುರ್ವೇದಿಕ್ ಉತ್ಪನ್ನಗಳು ಮನುಷ್ಯನ ಆರೋಗ್ಯ ರಕ್ಷಣೆಗೆ ವರದಾನ ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು.
ಇತ್ತೀಚೆಗೆ ಬದಲಾದ ಆಹಾರ ಪದ್ಧತಿ ಹಾಗೂ ಬದಲಾದ ಜೀವನ ಶೈಲಿಯಿಂದ ಮನುಷ್ಯನ ಆರೋಗ್ಯ ದಿನೇ ದಿನೇ ಹಾಳಾಗುತ್ತಿದೆ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಆಯುರ್ವೇದ ಉತ್ಪನ್ನಗಳನ್ನು ಬಳಸುವುದು ಒಳಿತು. ರೋಗ ಮುಕ್ತ ಭಾರತ ನಿರ್ಮಾಣಕ್ಕೆ ಸಂಸ್ಥೆ ಕೆಲಸ ಮಾಡುತ್ತಿದ್ದು ಇದಕ್ಕೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ, ಆರೋಗ್ಯ ಸಮಸ್ಯೆ ಉಲ್ಬಣಗೊಳ್ಳುವ ಮೊದಲೇ ಎಚ್ಚೆತ್ತುಕೊಂಡು ಆಯುರ್ವೇದ ಉತ್ಪನ್ನಗಳ ಬಳಕೆ ಮಾಡುವುದು ಸೂಕ್ತ. ಇದರ ಜೊತೆ ಸಂಸ್ಥೆಯಲ್ಲಿರುವ ಆಯುರ್ವೇದ ಉತ್ಪನ್ನಗಳನ್ನು ಬಳಕೆಮಾಡಿದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಕಿಡ್ನಿ ವೈಪಲ್ಯ; ಆರ್ಥಿಕ ನೆರವಿಗೆ ಮನವಿ
ಬಿಪಿ, ಶುಗರ್, ಅಧಿಕ ಬೊಜ್ಜು, ಹೀಗೆ ನಾನಾ ರೀತಿಯ ಖಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಜನರಿಗೆ ಬಳುವಳಿಯಾಗಿ ಬಂದಿವೆ. ಇಂತಹ ಎಲ್ಲಾ ಸಮಸ್ಯೆಗಳಿಗೆ ಕಡಿವಾಣ ಹಾಕಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಿರುವ ಎಂ.ಎಸ್ ವೆಲ್ನೆಸ್ ಕೇರ್ ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ವೇಳೆ ಸಂಸ್ಥೆಯ ಸಂಸ್ಥಾಪಕ ಯೂಸೀಫ್, ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ರಫೀಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹ್ಯದ್ ಖಲಂದರ್, ನಿರ್ದೇಶಕ ಹಾಜಿ, ಇತರರು ಉಪಸ್ಥಿತರಿದ್ದರು.





