ಹಾಸನ | ಬಾಹುಬಲಿ ಮೂರ್ತಿ ವಿಶ್ವಕ್ಕೇ ಶಾಂತಿ ಸಂದೇಶ ಸಾರುವ ಸಂಕೇತ: ಉಪರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್

Date:

ಜೈನ ಧರ್ಮ ಇಡಿ ವಿಶ್ವಕ್ಕೆ ಸತ್ಯ ಅಹಿಂಸೆಯ ಬೋಧನೆ ಮಾಡುತ್ತಿದೆ. ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಮೂರ್ತಿಯು ಜೈನ ಧರ್ಮದ ಪ್ರತೀಕ ಮಾತ್ರವಲ್ಲದೆ, ವಿಶ್ವಕ್ಕೆ ಶಾಂತಿ ಸಂದೇಶವನ್ನು ಸಾರುವ ಸಂಕೇತವಾಗಿದೆ ಎಂದು ಗೌರವಾನ್ವಿತ ಉಪ ರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಹೇಳಿದರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನದಿಂದ ಗೊಮ್ಮಟ ನಗರದ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 20ನೇ ಶತಮಾನದ ಪ್ರಥಮಾಚಾರ್ಯ ಚಾರಿತ್ರ್ಯ ಚಕ್ರವರ್ತಿ ಪ.ಪೂ ಆಚಾರ್ಯ ಶ್ರೀ 108ನೇ ಶಾಂತಿಸಾಗರ ಮಹಾರಾಜರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದರು.

“ವಿಶ್ವದೆಲ್ಲೆಡೆ ಸಂಘರ್ಷದ ಸನ್ನಿವೇಶಗಳು ಉಂಟಾಗಿದ್ದು, ಮನುಕುಲವೇ ಅಪಾಯಕ್ಕೆ ಸಿಲುಕಿದೆ. ಇಂತಹ ಸನ್ನಿವೇಶದಲ್ಲಿ ವಿಶ್ವಶಾಂತಿ ಸ್ಥಾಪಿಸಲು ಜೈನ ಮುನಿಗಳ ಮಾರ್ಗದರ್ಶನ ಅಗತ್ಯವಾಗಿದೆ. ಶ್ರವಣಬೆಳಗೊಳ ಹಾಗೂ ಇಡೀ ಕರ್ನಾಟಕ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ದೇಶದ ಕಲೆ ಸಂಸ್ಕೃತಿಯನ್ನು ಸಂರಕ್ಷಿಸಿ ಬೆಳೆಸುವಲ್ಲಿ ಕನ್ನಡಿಗರ ಪಾತ್ರ ಅತ್ಯಂತ ಮಹತ್ವದ್ದು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸರ್ಕಾರ ಜ್ಞಾನಭಾರತಿ ಮಿಷನ್ ಅಡಿಯಲ್ಲಿ ಪ್ರಾಚೀನ ಭಾಷೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಪ್ರಾಕೃತ ಮತ್ತು ಕನ್ನಡಕ್ಕೆ ಪಾರಂಪರಿಕ ಭಾಷೆಯ ಸ್ಥಾನಮಾನ ನೀಡಲಾಗಿದ್ದು, ಸಂಶೋಧನೆ ಹಾಗೂ ಭಾಷೆಯ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜೈನ ಧರ್ಮದ ಪ್ರಾಚೀನ ಸಾಹಿತ್ಯ ಹಸ್ತಪ್ರತಿಗಳ ಸಂಶೋಧನೆ ಮತ್ತು ಅಧ್ಯಯನಕ್ಕೆ ಇದರಿಂದ ಸಹಕಾರಿಯಾಗಿದೆ” ಎಂದು ತಿಳಿಸಿದರು.

ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತ ಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, “ದಿಗಂಬರ ಮುನಿ ಪರಂಪರೆಗೆ ಅಪಾರ ಕೊಡುಗೆ ನೀಡಿರುವ ಶಾಂತಿಸಾಗರ ಮಹಾರಾಜರು 1925ರಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿ ನೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ಶಾಂತಿಸಾಗರ ಮಹಾರಾಜರ ಜೀವನ ಸಂದೇಶ ಅಜರಾಮರವಾಗಿ ಉಳಿಯಬೇಕೆಂಬ ಉದ್ದೇಶದಿಂದ ಶಿಲಾಶಾಸನ ಪ್ರತಿಷ್ಠಾಪನೆ ಮಾಡುವುದರ ಜತೆಗೆ ನಾಲ್ಕನೇ ಬೆಟ್ಟಕ್ಕೆ ಶಾಂತಿಸಾಗರ ಮಹಾರಾಜರ ಹೆಸರಿಡಲಾಗುತ್ತಿದೆ” ಎಂದರು.

ಗೌರವಾನ್ವಿತ ರಾಜ್ಯಪಾಲರಾಗಿರುವ ಥಾವರಚಂದ್ ಗೆಹ್ಲೋಟ್ ಅವರು ಘನ ಉಪಸ್ಥಿತಿವಹಿಸಿ ಮಾತನಾಡಿ, “ಭಗವಾನ್ ಮಹಾವೀರರು ನಮಗೆ ʼಬದುಕು ಮತ್ತು ಬದುಕಲು ಬಿಡಿʼ ಎಂಬ ದೈವಿಕ ಸಂದೇಶವನ್ನು ನೀಡಿದರು. ನಾವು ಅವರ ದೈವಿಕ ಸಂದೇಶದಿಂದ ಸ್ಫೂರ್ತಿ ಪಡೆದು, ಅವರು ತೋರಿಸಿದ ಮಾರ್ಗವನ್ನು ಅನುಸರಿಸಿ ವಿಶ್ವಶಾಂತಿ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.

“ಮೋಕ್ಷವನ್ನು ಪಡೆದ ಭಗವಾನ್ ಬಾಹುಬಲಿ, ಮಾನವನ ಆಧ್ಯಾತ್ಮಿಕ ಉನ್ನತಿ ಮತ್ತು ಮಾನಸಿಕ ಶಾಂತಿಗಾಗಿ ನಾಲ್ಕು ತತ್ವಗಳನ್ನು ಪ್ರತಿಪಾದಿಸಿದರು: ಅಹಿಂಸೆಯ ಮೂಲಕ ಸಂತೋಷ, ತ್ಯಾಗದ ಮೂಲಕ ಶಾಂತಿ, ಸ್ನೇಹದ ಮೂಲಕ ಪ್ರಗತಿ ಮತ್ತು ಧ್ಯಾನದ ಮೂಲಕ ಸಾಧನೆ ಎಂಬ ಸಂದೇಶ ನೀಡಿದ್ದರು. ಈ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ವಿಶ್ವಶಾಂತಿ ಮತ್ತು ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತವೆ” ಎಂದು ರಾಜ್ಯಪಾಲರು ಹೇಳಿದರು.

“ಜೈನ ಧರ್ಮವು ಪ್ರಾಚೀನ ಶ್ರವಣ ಸಂಪ್ರದಾಯದಿಂದ ಪಡೆದ ಧರ್ಮವಾಗಿದ್ದು, ಇದನ್ನು ಭಗವಾನ್ ಋಷಭದೇವ ಮತ್ತು ನಂತರದ ತೀರ್ಥಂಕರರು ಉತ್ತೇಜಿಸಿದರು. 24ನೇ ತೀರ್ಥಂಕರರಾದ ಭಗವಾನ್ ಮಹಾವೀರ ಸ್ವಾಮಿಗಳು ಇದಕ್ಕೆ ವ್ಯವಸ್ಥಿತ ರೂಪ ನೀಡಿದರು. ಭಗವಾನ್ ಮಹಾವೀರ ಸ್ವಾಮಿಗಳು ಸತ್ಯ, ಅಹಿಂಸೆ, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ ಮತ್ತು ಸ್ವಾಧೀನ ಮಾಡದಿರುವುದು ಸೇರಿದಂತೆ ಹಲವು ತತ್ವಗಳ ಮೂಲಕ ಶಾಂತಿಯುತ ಸಹಬಾಳ್ವೆ ಮತ್ತು ಸಾರ್ವತ್ರಿಕ ಸಹೋದರತ್ವದ ಹಾದಿಯನ್ನು ಬೆಳಗಿಸಿದರು. ಅವರು ʼಅಹಿಂಸಾ ಪರಮೋ ಧರ್ಮಃʼ ಎಂದು ಹೇಳುತ್ತಿದ್ದರು. ಅಂದರೆ ಅಹಿಂಸೆಯೇ ಶ್ರೇಷ್ಠ ಧರ್ಮ. ದೈಹಿಕ ಹಿಂಸೆಯಲ್ಲಿ ಮಾತ್ರವಲ್ಲದೆ ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಲ್ಲಿಯೂ ಸಹಾನುಭೂತಿ ಇರಬೇಕು ಎಂಬುದನ್ನು ನಮಗೆ ಕಲಿಸಿದರು” ಎಂದರು.

“ಪ್ರಸ್ತುತ ಕಾಲದಲ್ಲಿ, ಸಮಾಜದಲ್ಲಿ ಉದ್ವಿಗ್ನತೆ, ಕೋಪ ಮತ್ತು ಹಿಂಸೆ ಹೆಚ್ಚುತ್ತಿರುವಾಗ, ಮಹಾವೀರ ಸ್ವಾಮಿಗಳ ಈ ಸಂದೇಶವು ನಮ್ಮನ್ನು ಶಾಂತಿ, ಸಹಬಾಳ್ವೆ ಮತ್ತು ಪ್ರೀತಿಯ ಕಡೆಗೆ ಕರೆದೊಯ್ಯುತ್ತದೆ. ಆಚಾರ್ಯ ಶ್ರೀ ಶಾಂತಿಸಾಗರ್ ಮಹಾರಾಜ್ ಸಂಯಮದ ಜೀವಂತ ಸಾಕಾರವಾಗಿದ್ದರು. ಆಧ್ಯಾತ್ಮಿಕ ಜೀವನವು ಧರ್ಮಗ್ರಂಥಗಳಲ್ಲಿ ಮಾತ್ರವಲ್ಲದೆ ನಡವಳಿಕೆಯಲ್ಲೂ ಇದೆ ಎಂಬುದನ್ನು ಅವರು ಪ್ರದರ್ಶಿಸಿದ್ದರು. ಜೈನ ಧರ್ಮದ ಅದ್ಭುತ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿರುವ ಅವರು ಸಂಯಮ ಮತ್ತು ಧ್ಯಾನದ ಆದರ್ಶಗಳಿಂದ ಸಮಾಜವನ್ನು ಬೆಳಗಿಸಿದ್ದಾರೆ” ಎಂದು ತಿಳಿಸಿದರು.

“ಒಬ್ಬ ಅನ್ವೇಷಕನು ದೃಢನಿಶ್ಚಯ, ಆತ್ಮವಿಶ್ವಾಸ ಮತ್ತು ಸತ್ಯದ ಹಾದಿಯಲ್ಲಿ ನಡೆದಾಗ, ಯುಗಗಳ ಹರಿವು ಕೂಡ ಅವನ ಭಕ್ತಿಯ ಮುಂದೆ ತಲೆಬಾಗುತ್ತದೆ ಎಂಬುದಕ್ಕೆ ಅವರ ಜೀವನ ಸಾಕ್ಷಿಯಾಗಿದೆ. ಅವರ ಹೆಸರಿನಲ್ಲಿರುವ ʼಶಾಂತಿʼ ಮತ್ತು ʼಸಾಗರʼ ಎಂಬ ಪದಗಳು ಅವರ ವ್ಯಕ್ತಿತ್ವದ ಸಾರವನ್ನು ಸಾಕಾರಗೊಳಿಸುತ್ತವೆ. ಶಾಂತಿಯು ಬಾಹ್ಯ ಸಂದರ್ಭಗಳಿಂದಲ್ಲ, ಆದರೆ ಸ್ವಯಂ ನಿಯಂತ್ರಣ ಮತ್ತು ವಿವೇಕಯುತ ನಡವಳಿಕೆಯಿಂದ ಉಂಟಾಗುತ್ತದೆ ಎಂಬುದನ್ನು ತೋರಿಸಿದರು” ಎಂದರು.

“ಅವರ ಹೃದಯವು ಸಾಗರದಂತೆ ವಿಶಾಲವಾಗಿತ್ತು- ತನ್ನೊಳಗಿನ ಪ್ರತಿಯೊಬ್ಬರನ್ನೂ ಒಳಗೊಳ್ಳುತ್ತಿತ್ತು, ಎಲ್ಲರಿಗೂ ಯೋಗಕ್ಷೇಮದ ಮನೋಭಾವದಿಂದ ತುಂಬಿತ್ತು” ಎಂದು ಶ್ಲಾಘಿಸಿದರು.

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಎಚ್ ಡಿ ಕುಮಾರಸ್ವಾಮಿಯವರು ಶ್ರೀಕ್ಷೇತ್ರ ಶ್ರವಣಬೆಳಗೊಳದ ನಾಲ್ಕನೇ ಬೆಟ್ಟಕ್ಕೆ ಪದನಾಮ ಅನಾವರಣ ಮಾಡಿ ಮಾತನಾಡಿ, “ಶ್ರವಣಬೆಳಗೊಳ ಭಾರತದ ಪ್ರಾಚೀನ ನಾಗರಿಕತೆಯ ಮುಕುಟಮಣಿಯಾಗಿದೆ. ಇಲ್ಲಿನ ಚಂದ್ರಗಿರಿಯಲ್ಲಿ 2000 ವರ್ಷಗಳ ಹಿಂದೆ ಮೌರ್ಯ ವಂಶದ ಸಂಸ್ಥಾಪಕ ಚಂದ್ರಗುಪ್ತ ಮೌರ್ಯ ಸಲ್ಲೇಖನ ವ್ರತದ ಮೂಲಕ ಜಿನಪಾದ ಸೇರಿದ ಇತಿಹಾಸವಿದೆ. ಇಂದು ಅನಾವರಣಗೊಂಡಿರುವ ಶಾಂತಿ ಸಾಗರ ಸ್ವಾಮೀಜಿಯವರ ಪ್ರತಿಮೆ ಮುಂದಿನ ಪೀಳಿಗೆಗೂ ಅವರು ಹಾಕಿ ಕೊಟ್ಟ ಸನ್ಮಾರ್ಗವನ್ನು ತೋರಿಸುವ ಸಂಕೇತವಾಗಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಶ್ರೀನಿವಾಸಪುರ | ಜಲಾವೃತಗೊಂಡ ಜಮೀನು ವೀಕ್ಷಿಸಿದ ಸಂಸದ, ಶಾಸಕ

ಪರಮಪೂಜ್ಯ ತಪಶ್ಚರ್ಯಾ ಚಕ್ರವರ್ತಿ ಆಚಾರ್ಯ ಶ್ರೀ 108 ಸುವಿಧಿಸಾಗರ ಮಹಾರಾಜರು, ಪರಮಪೂಜ್ಯ ಸಂಯಮ ಮೂರ್ತಿ ಆಚಾರ್ಯ ಶ್ರೀ 108 ವರ್ಧಮಾನಸಾಗರ ಮಹಾರಾಜರು(ದಕ್ಷಿಣ), ಪ.ಪೂ. ನಿರ್ಯಾಪಕ ಶ್ರಮಣ ಮುನಿಶ್ರೀ 108 ಧರ್ಮಸಾಗರ, ಪ.ಪೂ. ನಿರ್ಯಾಪಕ ಶ್ರಮಣ ಮಹಾರಾಜರು ಮುನಿಶ್ರೀ 108 ವಿದ್ಯಾಸಾಗರ ಮಹಾರಾಜರು, ಪ.ಪೂ. ನಿರ್ಯಾಪಕ ಶ್ರಮಣ ಮುನಿಶ್ರೀ 108 ಸಿದ್ಧಾಂತಸಾಗರ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿದ್ದರು.

ಕಂದಾಯ ಸಚಿವರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್, ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿ ಎನ್ ಬಾಲಕೃಷ್ಣ, ಬೆಳಗಾವಿ ದಕ್ಷಿಣದ ಶಾಸಕ ಅಭಯ್ ಪಾಟೀಲ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...