ಪ್ರಕರಣ ಬಯಲಿಗೆ ಬಂದಾಗ ಒಂದೇ ರೀತಿಯ ಪ್ರತಿಕ್ರಿಯೆಗಳು ಬಂದವು. ಅಪರಾಧಿಗಳು ಮತ್ತವರ ಕುಟುಂಬಗಳು ಪೆನ್‌ಡ್ರೈವ್‌ನ ಹಂಚಿದ್ಯಾರು ಎಂಬುದರ ಬಗ್ಗೆ ಮಾತನಾಡುತ್ತಾ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸಿದರು. ಸಂತ್ರಸ್ತ ಮಹಿಳೆಯರನ್ನೇ ಅಪರಾಧಿಗಳನ್ನಾಗಿ ಮಾಡುವ ಯತ್ನಗಳು ನಡೆದವು. ಸರ್ಕಾರವೂ ಕೂಡ ಪ್ರಕರಣದಲ್ಲಿ ತಮ್ಮದು ಹೆಚ್ಚಿನ ಪಾತ್ರವಿಲ್ಲ ಎಂಬಂತೆ ನುಣುಚಿಕೊಳ್ಳಲು ಯತ್ನಿಸಿತು. ಈ ಎಲ್ಲ ನುಣುಚುಕೋರರ ಬಣ್ಣ ಬಯಲಾಗಿದೆ. ಇದು, ಇಡೀ ವ್ಯವಸ್ಥೆಯ ವೈಫಲ್ಯ ಎಂದು ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ ಹೇಳಿದರು.
“ಹೆಣ್ಣು ಮಕ್ಕಳು ತಮ್ಮ ಚಿಕ್ಕ ಕೆಲಸಕ್ಕಾಗಿ, ಪ್ರಮೋಷನ್‌ಗಾಗಿ, ಪಂಚಾಯತಿ ಮಟ್ಟದ ಟಿಕೆಟ್‌ಗಾಗಿ ಇಂತಹ ಕಾಮಕರ ದೌರ್ಜನ್ಯ ಬಲಿಯಾಗಬೇಕಿರುವ ಪರಿಸ್ಥಿತಿಯನ್ನು ಈ ವ್ಯವಸ್ಥೆ ಮಹಿಳೆಯರಿಗೆ ನೀಡಿದೆ. ಈ ವ್ಯವಸ್ಥೆಯನ್ನು ಬದಲಿಸಲು ಇಡೀ ದೇಶ ಒಗ್ಗೂಡಿ ಹೋರಾಟ ನಡೆಸಬೇಕು. ಇಂತಹ ದೌರ್ಜನ್ಯ ಪ್ರಕರಣಗಳನ್ನ ಸಮಗ್ರವಾಗಿ ಪರಿಶೀಲಿಸಲು ಉನ್ನತ ಸಮಿತಿಯನ್ನು ಸರ್ಕಾರ ರಚನೆ ಮಾಡಬೇಕು. ಗುಹೆಯಲ್ಲಿ ಅವಿತಿರುವ ಪ್ರಧಾನಿ ಮೋದಿ ಅವರು ಗುಹೆಯಿಂದ ಹೊರಬರಬೇಕು. ತಮ್ಮದೇ ಮಿತ್ರ ಪಕ್ಷದ ಸಂಸದ ಎಸಗಿರುವ ದೌರ್ಜನ್ಯದ ವಿರುದ್ಧ ಕ್ರಮಕ್ಕೆ ಮುಂದಾಗಬೇಕು” ಎಂದು ಆಗ್ರಹಿಸಿದರು.



