ಹಾಸನ | ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಸಮನ್ವಯ ಸಮಿತಿ ರಚನೆ

Date:

ರಾಜ್ಯದಲ್ಲಿ ಪದೇಪದೇ ಕಾಡಾನೆ ಮತ್ತು ಮಾನವ ಸಂಘರ್ಷದಿಂದ ಸಂಭವಿಸುತ್ತಿರುವ ಪ್ರಾಣಹಾನಿ ಹಾಗೂ ಬೆಳೆ ಹಾನಿಯನ್ನು ತಪ್ಪಿಸಿ ನಿರ್ದಿಷ್ಟ ಪರಿಹಾರ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದಿಡಲು ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲು ಸೋಮವಾರ ಹಾಸನದ ರೆಡ್ ಕ್ರಾಸ್ ಭವನದಲ್ಲಿ ಆಯೋಜಿಸಲಾಗಿತ್ತು.

ಭಾರತದಲ್ಲಿ ಸುಮಾರು 22 ಸಾವಿರ ಆನೆಗಳಿವೆ. ಅತಿ ಹೆಚ್ಚು ಅಂದರೆ ಸುಮಾರು 6,400 ಆನೆಗಳು ಕರ್ನಾಟಕದಲ್ಲಿ ಇವೆ. 3000 ಆನೆಗಳಿರುವ ಕೇರಳ ಮೂರನೇ ಸ್ಥಾನದಲ್ಲಿದೆ. ನಂತರ ಸ್ಥಾನ ಅಸ್ಸಾಂ ರಾಜ್ಯದಾಗಿದೆ. ನಾಡಿಗೆ ಬಂದು ಸಂತತಿ ವೃದ್ಧಿಯಾಗಿರುವ ನಾಡಿನಲ್ಲಿರುವ ಆನೆಗಳನ್ನು ಶ್ರೀಲಂಕಾ ಮಾದರಿಯ ಶಿಬಿರಕ್ಕೆ ತಂದು ಸಾಕೋದು ಒಂದೇ ನಮಗಿರುವ ಏಕೈಕ ಪರಿಹಾರದ ದಾರಿಯಾಗಿದೆ ಎಂದು ಹೇಳಿದವರು ತಾವು ಎರಡು ಬಾರಿ ಶ್ರೀಲಂಕಾ ಹೋಗಿ ಅಲ್ಲಿನ ಆನೆ ಶಿಬಿರಗಳನ್ನು ನೋಡಿ ಬಂದಿರುವುದಾಗಿ ಮಾಜಿ ಶಾಸಕ ಎಚ್. ಎಂ. ವಿಶ್ವನಾಥ್ ತಿಳಿಸಿದರು.

ಮಾನವ ಕಾಡಾನೆ ಸಂಘರ್ಷ ತಪ್ಪಿಸಲು ರಾಜ್ಯ ಹೈಕೋರ್ಟ್ ನಲ್ಲಿ ಹೂಡಿರುವ ಮೊಕದ್ದಮೆ ನ್ಯಾಯಾಲಯದಲ್ಲಿ ನಡೆದಿರುವ ಪ್ರಕ್ರಿಯೆಗಳು ಹಾಗೂ ನೀಡಿರುವ ಮಧ್ಯಂತರ ತೀರ್ಪಿನ ಕುರಿತು ವಿವರಿಸಿದರು. ಕಾಡಾನೆ ಸಮಸ್ಯೆ ಪರಿಹಾರಕ್ಕೆ ಸರ್ಕಾರಗಳಲ್ಲಿ ಹಣದ ವಿಷಯಕ್ಕಿಂತ ಇಚ್ಛಾ ಶಕ್ತಿಯ ಕೊರತೆ ಇದೆ. ಕುದುರೆಮುಖ, ಭದ್ರ, ಹೊಂಗಡಹಳ್ಳಿ ಭಾಗದಲ್ಲಿ ಸುಮಾರು ಒಂದು ಲಕ್ಷ ಎಕರೆ ಪ್ರದೇಶದಲ್ಲಿ ನಾಡಿಗೆ ಬರುವ ಆನೆಗಳನ್ನು ಸ್ಥಳಾಂತರಿಸಿ ಕಾಡಿನ ಹಂಚಿನಲ್ಲಿ ಆನೆಗಳಿಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಬೆಳೆದು ಕೊಡಬಹುದು. ಆನೆಗಳು ಮಾತ್ರವಲ್ಲದೆ, ನವಿಲುಗಳು ಹಾಗೂ ಕೋತಿಗಳ ಸಮಸ್ಯೆ ಕೂಡ ವಿಪರೀತ ಹೆಚ್ಚಿ ರೈತರು ಬಹಳ ಸಮಸ್ಯೆ ಅನುಭವಿಸುತ್ತಿದ್ದಾರೆ. ಭೂಮಿಯ ಮೇಲೆ ಸಮತೋಲನ ಕಾಪಾಡಲು ಜನಸಂಖ್ಯೆ ನಿಯಂತ್ರಣ ವ್ಯವಸ್ಥೆ ಮಾಡಿಕೊಂಡಿರುವಂತೆ ಕಾಡುಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಇತ್ತೀಚೆಗೆ ನಮ್ಮನ್ನು ಅಗಲಿದ ದೇಶ ಕಂಡ ಶ್ರೇಷ್ಠ ಪರಿಸರ ತಜ್ಞ ಗಾಡ್ಗಿಳ್ ಅಂಥವರೇ ಹೇಳಿದ್ದಾರೆ. ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಆಗುವ ತನಕ ಸಂಘರ್ಷದಲ್ಲಿ ಸಾವನ್ನಪ್ಪುವ ಅರಣ್ಯ ಇಲಾಖೆ ಸಿಬ್ಬಂದಿಗೆ ನೀಡುವಂತೆ ರೈತರು ಹಾಗೂ ಕಾರ್ಮಿಕರ ಕುಟುಂಬಗಳಿಗೂ ಒಂದು ಕೋಟಿ ರೂ ಪರಿಹಾರ ನೀಡಬೇಕು. ಬೆಳೆ ಆನೆಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿಪಿ ಸುರೇಂದ್ರ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿದ್ದೀರಾ?ಹಾಸನ | ಆಳುವ ಸರ್ಕಾರಗಳ ಕೆಲ ನೀತಿಗಳಿಂದಾಗಿ ಸಂವಿಧಾನಾತ್ಮಕ ಹಕ್ಕುಗಳು ದುರ್ಬಲ: ಭೀಮ್ ರಾವ್ ಅಂಬೇಡ್ಕರ್ 

ಆನೆಗಳ ದಾಳಿಯಿಂದ ಮನುಷ್ಯ ಸತ್ತಾಗ ಸ್ಥಳಕ್ಕೆ ಧಾವಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಂದಷ್ಟು ಪರಿಹಾರದ ಹಣಕೊಟ್ಟು ಹೋಗುತ್ತಿದ್ದೇವೆ, ನಂತರ ಮರೆಯುತ್ತೇವೆ. ಈ ಸಮಸ್ಯೆಗೆ ಒಂದು ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುವ ಅಗತ್ಯ ಇದೆ. ಆನೆಧಾಮ ನಿರ್ಮಿಸಲು ಸ್ಥಳ, ಆಹಾರ ಮತ್ತು ನೀರಿನ ಕೊರತೆ ಇಲ್ಲ.  ನಮಗೆ ಇಚ್ಛಾ ಶಕ್ತಿಯ ಕೊರತೆ ಇದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಚ್ ಆರ್ ಲಕ್ಷ್ಮಿ ನಾರಾಯಣ ಅವರು ಮಾತನಾಡಿ, ಬಹಳ ಸಂಕೀರ್ಣವಾದ ಸಮಸ್ಯೆ. ಆದರೆ ಪರಿಹಾರ ಸಾಧ್ಯ ಇಲ್ಲವೆಂದಲ್ಲ ಕೇಂದ್ರ ಸರ್ಕಾರ ನಮಿಬಿಯಾದಿಂದ ಭಾರತಕ್ಕೆ ಚಿರತೆಗಳನ್ನು ತಂದು ಸಾಕಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಕೇಂದ್ರ ಸರ್ಕಾರದ 3600 ಕೋಟಿ ರೂ ಕ್ಯಾಂಪಾನಿಧಿ ಇದೆ. ಆನೆಗಳ ಪುನರ್ವಸತಿಗಾಗಿ ಒಂದು ಸ್ಪಷ್ಟ ಯೋಜನೆ ರೂಪಿಸಿ ಅದಕ್ಕಾಗಿ ಕ್ಯಾಂಪಾನಿಧಿ ಬಳಸಿಕೊಳ್ಳಬೇಕು. ಈ ಯೋಜನೆ ರೂಪಿಸಲು ಕೇಂದ್ರ ಸರ್ಕಾರವೇ ಮುಂದೆ ಬರಬೇಕೆಂದು ವಿವರಿಸಿದರು.

ಆರ್ ಪಿ ವೆಂಕಟೇಶಮೂರ್ತಿ ಅವರು ಕಾಡನೆಗಳಿಂದ ಸಮಸ್ಯೆ ಅನುಭವಿಸುತ್ತಿರುವವರು ಸ್ಥಳೀಯರು. ಆದರೆ, ಪರಿಹಾರ ರೂಪಿಸುವವರು ದೂರದ ಬೆಂಗಳೂರು ಹಾಗೂ ದೆಹಲಿಯಲ್ಲಿದ್ದಾರೆ. ಹಾಗಾಗಿಯೇ ದೀರ್ಘ ಕಾಲದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ ಆಗಿಲ್ಲ. ಆನೆಗಳ ಪುನರ್ವಸತಿಗಾಗಿಯೇ ಒಂದು ಪ್ರತ್ಯೇಕ ಮಂಡಳಿಯನ್ನು ರಚಿಸುವ ಅಗತ್ಯ ಇದೆ. ಈ ಮಂಡಳಿಯಲ್ಲಿ ಪೀಡಿತ ಪ್ರದೇಶಗಳ ಲೋಕಸಭಾ ಸದಸ್ಯರು ಶಾಸಕರು ಬೆಳೆಗಾರರು ಹಾಗೂ ಇತರ ಜನಪರ ಸಂಘಟನೆಗಳ ಪ್ರತಿನಿಧಿಗಳು ಇರಬೇಕು. ಸ್ಥಳೀಯರೇ ಸೇರಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರಬೇಕು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ಥಾನದ ಅಧಿಕಾರಿ ಕಾರ್ಯದರ್ಶಿ ಇರಬೇಕು ಎಂದು ತಿಳಿಸಿದರು.

ಈ ಕುರಿತು ಹಿರಿಯ ರೈತ ಮುಖಂಡ ಅರೇಹಳ್ಳಿ ರಾಜೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೆಮ್ಮಿಗೆ ಮೋಹನ್ ಹಾಗೂ ಆರ್.ಪಿ. ವೆಂಕಟೇಶಮೂರ್ತಿ ಅವರನ್ನು ಪ್ರಧಾನ ಸಂಚಾಲಕರನ್ನಾಗಿ ಹಾಗೂ ಹೆಚ್. ವಿಶ್ವನಾಥ್ ಟಿ.ಪಿ. ಸುರೇಂದ್ರ ಮತ್ತು ಬಿ.ಕೆ. ಚಂದ್ರಕಲಾ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ. ಕೋರ್ ಕಮಿಟಿ ಸದಸ್ಯರನ್ನಾಗಿ ಹಳಸೆ ಶಿವಣ್ಣ, ಹುರುಡಿ ಮೋಹನ್ ಕುಮಾರ್, ಕೆ.ಎಸ್. ಮಂಜೇಗೌಡ ತೊ.ಚ. ಅನಂತ ಸುಬ್ಬರಾವ್ ಅರೇಹಳ್ಳಿ ರಾಜೇಗೌಡ, ಕೆ.ಬಿ. ಕೃಷ್ಣಪ್ಪ, ಹೆಚ್. ಎಸ ಕಿಶೋರ್ ಕುಮಾರ್, ಕೊಡಗಿನ ಕೆ.ಕೆ. ವಿಶ್ವನಾಥ್ ಮತ್ತು ಉಮಾಶಂಕರ್ ಕೆ.ಬಿ. ಲೋಕೇಶ್, ಬಿ.ಎಂ. ನಾಗರಾಜ್, ಅದ್ದೂರಿ ಕುಮಾರ್, ಬಾಳುಗೋಪಾಲ್, ಯಡೇಹಳ್ಳಿ ಮಂಜುನಾಥ್, ಎಸ್.ಆರ್. ಲಕ್ಷ್ಮೀನಾರಾಯಣ್, (ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ) ಎಚ್. ಆರ್. ನವೀನ್ ಕುಮಾರ್, ಧರ್ಮೇಶ್, ಎಂ.ಸಿ.ಡೋಂಗ್ರೆ, ಮಲ್ನಾಡ್ ಮೆಹಬೂಬ್, ಎಸ್.ಎನ್. ಮಲ್ಲಪ್ಪ ಹಾಗೂ ಜೈ ಭೀಮ್ ಮಂಜು ಹಾಗೂ ಅಬ್ದುಲ್ ಸಮದ್ ಅವರನ್ನು ಆರಿಸಲಾಯಿತು. 

ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಅರಕಲಗೂಡು ಕ್ಷೇತ್ರದ ಶಾಸಕ ಎ ಮಂಜು, ಬೇಲೂರು ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್, ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕರಾದ ಎಚ್. ಕೆ. ಕುಮಾರಸ್ವಾಮಿ, ಬಿ. ಶಿವರಾಂ, ಜಿಲ್ಲಾ ಜನತಾದಳ (ಎಸ್) ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಎಸ್. ಲಿಂಗೇಶ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಲಕ್ಷ್ಮಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಇವರನ್ನು ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿದ್ದೀರಾ?ಹಾಸನ | ಬೌದ್ಧ ಧರ್ಮದ ಸಂಸ್ಕೃತಿಯನ್ನು ಅಂಬೇಡ್ಕರ್ ಎತ್ತಿ ಹಿಡಿದಿದ್ದಾರೆ; ಮಾ. ಡಿಸಿಪಿ ಸಿದ್ದರಾಜು

ಈ ಸಭೆಗೆ ಬೇಲೂರು, ಆಲೂರು ಸಕಲೇಶಪುರ ಹಾಗೂ ಅರಕಲಗೂಡು ತಾಲೂಕುಗಳ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಬೆಳೆಗಾರರ,ರೈತ, ದಲಿತ, ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...