ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವನಪ್ಪಿದ್ದಾರೆ.

ಮೃತ ಮಹಿಳೆ ಮೂಗಲಿ ಗ್ರಾಮದ ಶೋಭಾ (40), ಬೆಳಗ್ಗೆ ತೋಟಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿದ ಕಾಡಾನೆ. ಮೃತ ಮಹಿಳೆ ಶೋಭಾ ಅವರು ಒಂದೂವರೆ ಎಕರೆ ಕಾಫಿ ತೋಟವನ್ನು ಹೊಂದಿದ್ದು ಅವರ ತಾಯಿ ರಾಜಮ್ಮ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆನೆ ದಾಳಿ ಮಾಡಿದೆ.
ಇದನ್ನೂ ಓದಿದ್ದೀರಾ?ಹಾಸನ | ಶಿಕ್ಷಕರು ಶಾಲಾ ಶೌಚಾಲಯಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು; ಶಾಸಕ ಸಿಮೆಂಟ್ ಮಂಜು
ಇಬ್ಬರ ಮಹಿಳೆಯರಲ್ಲಿ ರಾಜಮ್ಮ ಅವರು ಓಡಿ ಬಚಾವಾಗಿದ್ದು, ಶೋಭಾ ಅವರು ಆನೆಯ ತುಳಿತಕ್ಕೆ ಒಳಗಾಗಿದ್ದಾರೆ. ರಾಜಮ್ಮ ಬೆಳಗೋಡು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದು, ಕೂದಲೆಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.





