ಹಾಸನದ ಹಾಸನಾಂಬ ದೇವಿ ದರ್ಶನವನ್ನು ಇದೆ ಮೊದಲನೇ ಬಾರಿ ಪಡೆಯುತ್ತಿಲ್ಲ. ದೇವಾಲಯ ನಮ್ಮ ಮನೆ ಮುಂದಿನ ಬೀದಿಯಲ್ಲಿದೆ. ಚಿಕ್ಕಂದಿನಿಂದಲೂ ತಾಯಿಯ ಕೈ ಬೆರಳು ಹಿಡಿದುಕೊಂಡು ದೇವಿ ದರ್ಶನಕ್ಕೆ ಬರ್ತಿದ್ದೆ. ಈ ದೇವಾಲಯ ಸ್ನೆಹ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಬೆಸೆಯುವ ಸ್ಥಳ ಎಂದು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹೇಳಿದರು.
ದೇವಿ ದರ್ಶನ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಮುಂಚೆ ಹಾಸನಾಂಬ ದೇವಿಯ ಬಗ್ಗೆ ಯಾರಿಗೂ ಗೊತ್ತಾಗುತ್ತಿರಲಿಲ್ಲ, ಈಗ ಎಲ್ಲಾ ಕಡೆ ಗೊತ್ತಾಗುತ್ತಿದೆ. ಇದು ಭಾವೈಕ್ಯತೆಯ ಸಂಕೇತ. ಬಹಳ ಹಿಂದಿನಿಂದೂ ಮುಸ್ಲಿಮರು ಹಸನ್ ಬಿ ಹುಸೇನ್ ಬಿ ಎಂದು ನಂಬುವ ಕಾಲವಿತ್ತು. ನಮ್ಮ ಪೂರ್ವಿಕರು ಮುಸ್ಲಿಂ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದು ಹೇಳಿ ಕೊಡುತ್ತಿದ್ದರು. ಹಾಗಾಗಿ ಇದು ಭಾವೈಕ್ಯತೆಯ ಸ್ಥಳ” ಎಂದರು.
ಇದನ್ನೂ ಓದಿ: ಹಾಸನ | ಸಮೀಕ್ಷೆ ವೇಳೆ ಗಣತಿದಾರರಿಂದ ಲೋಪ; ಕ್ರಮಕ್ಕೆ ಮನವಿ
“ಹೆಚ್ಚಿನ ಭಕ್ತಿ, ಭಾವೈಕ್ಯತೆಯ ನೆಮ್ಮದಿಯ ತಾಣವಿದು. ಮುಸ್ಲಿಂ ಸಮುದಾಯದವರು ಹಿಂದೆ ಬಹಳಷ್ಟು ಮಂದಿ ಬರ್ತಿದ್ರು.
ಆಗ ಅವರ ಗ್ರಹಿಕೆ ಬೇರೆಯಾಗಿತ್ತು. ಸಕ್ಕರೆ ಊದುಕಡ್ಡಿ ತಂದು ಪೂಜಿಸುತ್ತಿದ್ದರು. ಮಧ್ಯೆ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಇತ್ತೀಚೆಗೆ ಮತ್ತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಇದು ಹೀಗೆ ಮುಂದುವರೆಯಬೇಕು. ಧಾರ್ಮಿಕ ಕಟ್ಟುಪಾಡುಗಳನ್ನು ಬದಿಗಿಟ್ಟು ಎಲ್ಲರೂ ಸಹಬಾಳ್ವೆ ನಡೆಸಬೇಕು” ಎಂದರು.





