ಹಾಸನದ ಸಕಲೇಶಪುರ ತಾಲೂಕಿನ ರಕ್ಷದಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಪ್ರಾಕೃತಿಕ ರಂಗ ಶಿಬಿರ ನಡೆಯುತ್ತಿದ್ದು, ಕರ್ನಾಟಕದ ಹಲವು ಜಿಲ್ಲೆಗಳ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಮೇ 15ರ ಸಂಜೆ 7ಕ್ಕೆ ನಾಟಕ ಪ್ರದರ್ಶನ ಮತ್ತು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.
ಶಿಬಿರಾರ್ಥಿಗಳು ಮಲೆನಾಡಿನ ಕಥೆಯನ್ನು ಆಧರಿಸಿ ʼಮಲೆಯಾದ್ರಿ ನಾಟಕʼ ಕಟ್ಟುತ್ತಿದ್ದಾರೆ. ಜತೆಗೆ ಶಿಬಿರಾರ್ಥಿಗಳ ಬದುಕಿನ ಕಥೆಗಳನ್ನು ನಾಟಕದಲ್ಲಿ ನೋಡಬಹುದಾಗಿದೆ. ಕಳೆದ ಹದಿನೈದು ದಿನಗಳಿಂದಲೂ ಈ ಶಿಬಿರ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಹಾಡು, ಕುಣಿತ, ಚಾರಣ, ಪರಿಸರ, ಫೋಟೋಗ್ರಾಫಿ, ರಂಗಭೂಮಿ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರಕೃತಿಯ ಮಧ್ಯೆ ಸುಂದರವಾದ ಶಿಬಿರ ಮೂಡಿ ಬರುತ್ತಲಿದೆ.
ಶಿಬಿರವನ್ನು ಜೈ ಕರ್ನಾಟಕ ಸಂಘ ಬೆಳ್ಳೆಕೆರೆ ತಂಡ ಆಯೋಜಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ನಡೆಸುತ್ತಿದೆ. ಪ್ರಸಾದ್ ರಕ್ಷಿದಿರವರು ಶಿಬಿರದ ಸಂಚಾಲಕರಾಗಿದ್ದು, ನವೀನ್ ಸಾಣೇಹಳ್ಳಿ ನಾಟಕದ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ನಾಟಕ ಕೊನೆಯ ಹಂತದಲ್ಲಿದ್ದು, ಬುದವಾರ ಸಂಜೆ ನಾಟಕ ಪ್ರದರ್ಶನ ಮತ್ತು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.
ಈ ಸುದ್ದಿ ಓದಿದ್ಧೀರಾ? ಶಿವಮೊಗ್ಗ | ದಲಿತರ ಭೂಮಿ ಒತ್ತುವರಿ; ಎಂಪಿಎಂ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ದಸಂಸ
ಸಮಾರೋಪದಲ್ಲಿ ಖ್ಯಾತ ನ್ಯಾಯವಾದಿ ಸುದೀರ್ ಕುಮಾರ್ ಮುರೋಳಿಯವರು ಭಾಗವಹಿಸುತ್ತಿದ್ದಾರೆ. ನಾಟಕ ಸಕಲೇಶಪುರದ ರಕ್ಷಿದಿ ಗ್ರಾಮ ಪೂರ್ಣಚಂದ್ರ ತೇಜಸ್ವಿ ರಂಗ ಮಂದಿರದಲ್ಲಿ ನಡೆಯುತ್ತಿದ್ದು, ಉಚಿತ ಪ್ರವೇಶವಿದೆ. ಹಾಗಾಗಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶ್ವಿಗೊಳಿಸುವಂತೆ ಜೈ ಕರ್ನಾಟಕ ಸಂಘ ಬೆಳ್ಳೆಕೆರೆ ತಂಡ ವಿನಂತಿಸಿದೆ.
ಹೆಚ್ಚಿನ ಮಾಹಿತಿಗಾಗಿ – 9448825701





