ಚೀಟಿ ಹಣ ಕೊಡದೆ ಸತಾಯಿಸಿದ್ದಲ್ಲದೆ ವಾಪಾಸ್ ಹಣ ಕೊಡುವಂತೆ ಬೆದರಿಸಿ ನಿಂದಿಸಿದ್ದಕ್ಕೆ ಮನನೊಂದ ವ್ಯಕ್ತಿ ವಿಷ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.
ಮೃತ ವ್ಯಕ್ತಿ ರಾಮು (38), ಚನ್ನರಾಯಪಟ್ಟಣದಲ್ಲಿ ಹಲವು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದ ರಾಮು ಪರಿಚಯಸ್ಥರಾದ ಗಿರೀಶ್, ರಾಣಿ ಮತ್ತು ಪುಷ್ಪ ಎಂಬುವವರೊಟ್ಟಿಗೆ ಆರ್ಥಿಕ ವ್ಯವಹಾರ ಇಟ್ಟುಕೊಂಡಿ ದ್ದರು. 15 ಲಕ್ಷ ರೂ. ಮೊತ್ತದ ಚೀಟಿ ನಡೆಸುತ್ತಿದ್ದರು. ಎರಡೂವರೆ ವರ್ಷಗಳಿಂದ ಚೀಟಿ ಹಣವನ್ನು ರಾಮು ನಗದು ಹಾಗು ಯುಪಿಐ ಮೂಲಕ ನಿಯಮಿತವಾಗಿ ಪಾವತಿಸುತ್ತಿದ್ದರು. 2025ರ ನ. 25 ರಂದು 15 ಲಕ್ಷ ರೂ. ಚೀಟಿಯನ್ನು 2.70 ಲಕ್ಷ ರೂ.ಗೆ ಕೂಗಿದ್ದರು ಎನ್ನಲಾಗಿದೆ.
ಅದರಲ್ಲಿ 1 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ಖಾಲಿ ಚೆಕ್ ಹಾಗು ಬಾಂಡ್ ಪೇಪರ್‌ಗೆ ಸಹಿ ಹಾಕಿಸಿಕೊಂಡು ನ. 25ರಂದು ಕೊಟ್ಟಿದ್ದ ಗಿರೀಶ್, ಪುಷ್ಪ ಹಾಗು ರಾಣಿ ಅವರು ಉಳಿದ 1.70 ಲಕ್ಷ ರೂ. ಕೊಟ್ಟಿರಲಿಲ್ಲ. ಅದನ್ನು ಕೇಳಲು ಹೋದಾಗ ನೀವೇ 10 ಲಕ್ಷ ರೂ. ಕೊಡಬೇಕೆಂದು ಎಚ್ಚರಿಕೆ ನೀಡಿದ್ದರು. 20 ದಿನಗಳ ಹಿಂದೆ ರಾಮು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದ ಅವರು ಗಲಾಟೆ ಮಾಡಿ ಬ್ಯಾಂಕ್‌ನಲ್ಲಿ ಅಡವಿಟ್ಟಿರುವ ಒಡವೆ ಚೀಟಿಯನ್ನು ಕಿತ್ತುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣ ಕೊಡದಿದ್ದರೆ ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇದನ್ನೂ ಓದಿದ್ದೀರಾ?ಹಾಸನ | ಪೊಲೀಸ್ ಇಲಾಖೆಗೆ ಬೊಲೇರೊ ವಾಹನ ವಿತರಣೆ; ಹೆಚ್. ಎಸ್ ಸ್ವರೂಪ್ ಪ್ರಕಾಶ್
ಈ ಘಟನೆ ಕುರಿತು ಹೊಳೆನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





