ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪ್ರಜ್ವಲ್ ರೇವಣ್ಣ ಪ್ರಕರಣ; ನಮ್ಮ ಮುಂದಿನ ನಡೆ ಏನು?’ ಎನ್ನುವ ಕುರಿತು ಚರ್ಚಿಸಲು ಕಾನೂನು ಪರಿಣಿತರು ಮತ್ತು ಜನಪರ ಚಳುವಳಿಗಳ ಮುಖಂಡರು ಹಾಗೂ ಸಮಾನ ಮನಸ್ಕರ ರಾಜ್ಯ ಮಟ್ಟದ ಸಭೆ ನಡೆಸುವುದಾಗಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಕರೆ ನೀಡಿದೆ.
ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಪತ್ರಿಕಾ ಹೇಳಿಕೆ ನೀಡಿದ್ದು, ಹಾಸನ ಜಿಲ್ಲಾಧಿಕಾರಿ ಕಚೇರಿ ಹಿಂಬಾಗ ಇರುವ ಸ್ವಾಭಿಮಾನಿ ಭವನದಲ್ಲಿ ನಾಳೆ (ಜುಲೈ 6ರ ಶನಿವಾರ) ಬೆಳಿಗ್ಗೆ 11ಕ್ಕೆ ಸಭೆ ಆರಂಭವಾಗುವುದಾಗಿ ತಿಳಿಸಿದೆ.
“ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣದ ವಿರುದ್ಧ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆದು ಮತ್ತು ಪ್ರಜ್ವಲ್ ಬಂಧನವಾಗಿ ಒಂದು ತಿಂಗಳು ಕಳೆಯಿತು. ಈ ಪ್ರಕರಣದಲ್ಲಿ ಪ್ರಜ್ವಲ್ ಮತ್ತು ಲೈಂಗಿಕ ವಿಡಿಯೋ ಹಂಚಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಜತೆಗೆ ಸಂತ್ರಸ್ತೆಯರ ಗೌಪ್ಯತೆ ಕಾಪಾಡಿ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸಲು ಮುಂದೆ ಕಾನೂನಾತ್ಮಕ ಹೋರಾಟ ಹಾಗೂ ಸಾಮಾಜಿಕ ಹೋರಾಟಗಳನ್ನು ಸರಿಯಾದ ದಿಕ್ಕಿನಲ್ಲಿ ಸಂಘಟಿಸುವ ಅಗತ್ಯವಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಹಿಳೆಯರ ಉಡುಗೆ ಬಗ್ಗೆ ಬಿಜೆಪಿ ಮುಖಂಡನ ಅವಹೇಳನ; ಬಿಜೆಪಿಯ ಮಹಿಳಾ ವಿರೋಧಿ ಸಿದ್ಧಾಂತದ ಪ್ರತಿಬಿಂಬ
‘ಪ್ರಜ್ವಲ್ ರೇವಣ್ಣ ಪ್ರಕರಣ; ನಮ್ಮ ಮುಂದಿನ ನಡೆ ಏನು?’ ಸಭೆಗೆ ರಾಜ್ಯ ಮಟ್ಟದ ಕಾನೂನು ತಜ್ಞರು, ಜನಪರ ಚಳುವಳಿಗಳ ರಾಜ್ಯ ಮತ್ತು ಜಿಲ್ಲಾ ಮುಂಖಂಡರು ಹಾಗೂ ಸಮಾನ ಮನಸ್ಕರು ಭಾಗವಹಿಸಲಿದ್ದು ತಾವು ಈ ಸಭಗೆ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.





