ಹಾಸನ | ಗಾಳಿ ಸಹಿತ ಮಳೆ; ಎಲ್ಲೆಲ್ಲಿ ಎಷ್ಟೆಷ್ಟು?

Date:

ರಾಜ್ಯದ ವಿವಿಧ ಭಾಗಗಳಲ್ಲಿ ನಿನ್ನೆ ಸಂಜೆ ಮಿಂಚು, ಗಾಳಿ ಸಹಿತ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ. ಅದರಂತೆ ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಹ ಹದಮಳೆ ಬಿದ್ದಿದೆ. ಕೆಲವೆಡೆ ಫ್ಲೆಕ್ಸ್‌ಗಳು, ಮರದ ಒಣಗಿದ ಕೊಂಬೆಗಳು ಮುರಿದುಬಿದ್ದಿವೆ. ದಿಢೀರನೆ ಸುರಿದ ಅನಿರೀಕ್ಷಿತ ಮಳೆಯಿಂದ ಸಾರ್ವಜನಿಕರು, ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿತ್ತು.

ಇನ್ನು ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂದು ನೋಡುವುದಾದರೆ.. ಸಕಲೇಶಪುರ ಪಟ್ಟಣ 45 ಮಿಮೀ, ಹಳ್ಳಿಮನೆ ಹಾರ್ಲ್ಲೆ ಕೂಡಿಗೆ ಬಳಿ 55 ಮಿಮೀ, ಸುಳ್ಳಕ್ಕಿ 75 ಮಿಮೀ, ಕಟ್ಟಳ್ಳಿ ಹಲಸುಲಿಗೆ 42 ಮಿಮೀ, ದೇವಿಹಳ್ಳಿ ಎಸ್ಟೇಟ್ 68 ಮಿಮೀ, ಹಳೆಬೇಲೂರು 75 ಮಿಮೀ, ಸೋಮವಾರಪೇಟೆ ಬಳಿಯ ಗೋಣಿಮಕೂರು 80 ಮಿಮೀ ಮಳೆಯಾಗಿದೆ.

ಬಂದಳ್ಳಿ ಎಸ್ಟೇಟ್, ಬಿಕ್ಕೋಡು 1.2 ಇಂಚು, ಹೊತ್ತೂರು ಹಾಡ್ಯದಲ್ಲಿ 60 ಮಿಮೀ, ಕ್ಯಾನಳ್ಳಿಯಲ್ಲಿ 1.5 ಇಂಚು, ಮಠಸಾಗರದಲ್ಲಿ 0.85 ಇಂಚು, ಲಕ್ಕುಂದದಲ್ಲಿ 1.35 ಇಂಚು, ಮುಗಳಿಯಲ್ಲಿ 0.35 ಮಿಮೀ , ಉದಯಾವರದಲ್ಲಿ 1.10 ಇಂಚು, ದೊಡ್ಡ ನಾಗರದಲ್ಲಿ 65 ಮಿಮೀ, ಆನೆಮಹಲ್ ನಲ್ಲಿ 10 ಮಿಮೀ, ಹೆಬ್ಬನಹಳ್ಳಿಯಲ್ಲಿ 78 ಮಿಮೀ, ಕಸ್ಕೆಬೈಲ್ ನಲ್ಲಿ 97 ಮಿಮೀ, ಮೂವಾಲ ಬಿಕೋಡು 1.5 ಇಂಚು, ಮೂಡಿಗೆರೆ ತಾಲೂಕಿನ ಬೆಟ್ಟಿಗೆರೆ 1.40 ಇಂಚು ಮಳೆಯಾಗಿದೆ.
ಒಟ್ಟಾರೆ ಬಿಸಿಲಿನ ವಿಪರೀತ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಸ್ವಲ್ಪ ಸಮಾಧಾನ ತಂದಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ: ಹಾಸನ | ಶಿರಾಡಿ ಘಾಟ್ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ; ಮಾ.15ರಿಂದ ಏಕಮುಖ ಸಂಚಾರ

ಹೀಗೇ ಒಂದೆರಡು ದಿನ ಮಳೆ ಮತ್ತೆ ಬಂದಲ್ಲಿ ಪರವಾಗಿಲ್ಲ. ಬಿಸಿಲಿನ ಝಳ ಹೆಚ್ಚಾದರೆ ಜನರ ಆರೋಗ್ಯ ಕೆಡುವ ಸಾಧ್ಯತೆ ಇರಬಹುದು. ಏನೇ ಆದರೂ ಈ ಅನಿರೀಕ್ಷಿತ ಮಳೆ ಜನರ ಮೊಗದಲ್ಲಿ ಮುಗುಳ್ನಗೆ ತಂದಿದೆ ಎಂಬುದಂತೂ ಸತ್ಯ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...