ಹಾಸನ | ಡಿ.6ರಂದು ನಡೆದ ಸರ್ಕಾರಿ ಸಮಾವೇಶಕ್ಕೆ 5 ಕೋಟಿ ರೂ. ವೆಚ್ಚ: ಸಿ ಪುಟ್ಟಯ್ಯ ಹಂದನಕೆರೆ ಖಂಡನೆ

Date:

ಹಾಸನದಲ್ಲಿ ಡಿಸೆಂಬರ್‌ 6ರಂದು ಸರ್ಕಾರವು ಸಮಾವೇಶವೊಂದನ್ನು ಆಯೋಜಿಸಿದ್ದು, ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆತರಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 1,154 ಬಸ್ಸುಗಳು ಮತ್ತು ಇತರೆ 250 ವಾಹನಗಳನ್ನು ನಿಯೋಜಿತ್ತು. ಇವೆಲ್ಲಕ್ಕೂ ಸರ್ಕಾರವೇ ಹಣವನ್ನು ಭರಿಸುವುದರಿಂದ ಸಾರಿಗೆ ವಾಹನಗಳಿಗೆ ಸುಮಾರು ಎರಡೂವರೆ ಕೋಟಿ ಮತ್ತು ಶಾಮಿಯಾನ, ಕುರ್ಚಿ, ಆಹಾರದಂತಹ ಇನ್ನಿತರೆ ಕೆಲಸಗಳಿಗೆ ಸುಮಾರು 2.5 ಕೋಟಿ ಸೇರಿ ಒಟ್ಟು 5 ಕೋಟಿ ವ್ಯಯಮಾಡಿದೆ ಎಂದು ತುಮಕೂರು ಜಿಲ್ಲೆಯ ಸಿ ಪುಟ್ಟಯ್ಯ ಹಂದನಕೆರೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕೆ ಪ್ರಕಟಣೆ ನೀಡಿರುವ ಅವರು, “ಸರ್ಕಾರಿ ಕಾರ್ಯಕ್ರಮಕ್ಕೆ 70,000 ಮಂದಿ ಸರ್ಕಾರಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ 12,000 ಮಂದಿಗೆ ಜಮೀನಿನ ಪಹಣಿ ಟಿಪ್ಪಣಿ ದಾಖಲೆಗಳು, 5,000 ನಿವಾಸಿಗಳಿಗೆ ಹಕ್ಕುಪತ್ರದ ದಾಖಲೆಗಳನ್ನು ನೀಡುವುದಾಗಿತ್ತು. ಈ ಕಾರ್ಯಕ್ರಮಕ್ಕೆ ಸರ್ಕಾರ ಲಕ್ಷಾನುಗಟ್ಟಲೆ ವ್ಯಯಮಾಡಲಾಗಿದೆ” ಎಂದು ಹೇಳಿದರು.

“ಫಲಾನುಭವಿಗಳಿಗೆ ಈ ದಾಖಲೆಗಳನ್ನು ಸಂಬಂಧಪಟ್ಟ ಹೋಬಳಿಗಳ ನಾಡಕಚೇರಿಗಳಲ್ಲಿ ಅಲ್ಲಿನ ಉಪ ತಹಶೀಲ್ದಾರ್ ಅವರು ನೀಡಿದ್ದರೆ, ಯಾವುದೇ ಖರ್ಚಿಲ್ಲದೆ ಫಲಾನುಭವಿಗಳಿಗೆ ದಾಖಲೆಗಳನ್ನು ಸುಲಭವಾಗಿ ಮತ್ತು ಸರಳವಾಗಿ ತಲುಪಿಸಬಹುದಿತ್ತು.  70,000 ಫಲಾನುಭವಿಗಳನ್ನು ಒಂದೆಡೆ ಸೇರಿಸಿದಾಗ ಅವರೆಲ್ಲರಿಗೂ ದಾಖಲೆಗಳನ್ನು ಅಲ್ಲಿಯೇ ನೀಡಲು ಸಾಧ್ಯವಾಗುವುದೂ ಇಲ್ಲ. ಕೆಲವರಿಗೆ ಮಾತ್ರ ಸಾಂಕೇತಿಕವಾಗಿ ನೀಡಿ, ಉಳಿದ ಫಲಾನುಭವಿಗಳು ತಮ್ಮ ತಾಲೂಕು ಕೇಂದ್ರಗಳಲ್ಲಿ ಪಡೆದುಕೊಳ್ಳಲು ತಿಳಿಸುತ್ತಾರೆ. ಇಂತಹ ಕಾರ್ಯಕ್ಕೆ ಸರ್ಕಾರದ ಹಣ ದುಂದು ವೆಚ್ಚವೇಕೆ” ಎಂದು ಪ್ರಶ್ನಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ಸಾಲ ಮಾಡುತ್ತಿದೆ. ಪ್ರತಿ ವರ್ಷ ಸಾಲ ಮಾಡುತ್ತಿರುವ ಸರ್ಕಾರಗಳು ಈ ರೀತಿ ಅನಗತ್ಯ ಆಡಂಬರದ ಸಮಾವೇಶಗಳನ್ನು ಏರ್ಪಡಿಸುವ ಯಾವುದೇ ಔಚಿತ್ಯವೂ ಇಲ್ಲ, ಯಾವುದೇ ಅನಿವಾರ್ಯತೆಯೂ ಇಲ್ಲ. ಯಾವುದೇ ಸರ್ಕಾರಗಳಾಗಲಿ ಖರ್ಚು ಮಾಡುವ ಪ್ರತಿಯೊಂದು ರೂಪಾಯಿ ಅಗತ್ಯವಿದ್ದರೆ ಮಾತ್ರ ಖರ್ಚು ಮಾಡಬೇಕು. ಅನಾವಶ್ಯಕವಾಗಿ ಸಾರ್ವಜನಿಕ ಹಣವನ್ನು ದುಂದುವೆಚ್ಚ ಮಾಡುವುದು ಆರ್ಥಿಕತೆಯ ಮೇಲೂ ಪರಿಣಾಮ ಉಂಟು ಮಾಡುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ತಾಯಿಯ ಮನಸ್ಸು ಎಷ್ಟೇ ಸುಟ್ಟರೂ ಮಕ್ಕಳ ಆನಂದದಲ್ಲಿರುತ್ತಾಳೆ: ಡಾ. ಸುಪ್ರೀಯಾ ಮಲಶೆಟ್ಟಿ

“ಯಾವುದೇ ಸರ್ಕಾರಗಳಾಗಿರಲಿ ಸಾರ್ವಜನಿಕರ ಹಣವನ್ನು ಖರ್ಚು ಮಾಡುವಾಗ ಯೋಚಿಸಿ ಅಗತ್ಯವಿದ್ದರಷ್ಟೇ ಖರ್ಚು ಮಾಡುವುದು ಒಳ್ಳೆಯದು. ಅನಾವಶ್ಯಕ ಮತ್ತು ಅನಗತ್ಯ ಖರ್ಚುಗಳನ್ನು ನಿಲ್ಲಿಸಿ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯನಿರ್ವಹಿಸಲಿ” ಎಂದು ಅಭಿಪ್ರಾಯಪಟ್ಟರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...