ಹಾಸನ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ದಿ ಇಂಟೆಲೆಕ್ಚುವಲ್ ಶಾಲೆ ವತಿಯಿಂದ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಹಲವು ರೀತಿ ಮಾದರಿಯ ವಸ್ತುಪ್ರದರ್ಶನ ಮಾಡಲಾಯಿತು.
ವಸ್ತು ಪ್ರದರ್ಶನದಲ್ಲಿ ತ್ಯಾಜ್ಯ ನಿರ್ವಹಣೆ(Waste Management): ಪ್ಲಾಸ್ಟಿಕ್ ಮರುಬಳಕೆ ಅಥವಾ ಸಮರ್ಪಕ ತ್ಯಾಜ್ಯ ವಿಲೇವಾರಿ ವಿಧಾನಗಳನ್ನು ಪ್ರದರ್ಶಿಸುವ ಮಾದರಿ, ಸೌರಶಕ್ತಿ ಆಧಾರಿತ ನೀರಾವರಿ(Solar Irrigation): ಸೌರಶಕ್ತಿಯನ್ನು ಬಳಸಿ ನೀರನ್ನು ಪಂಪ್ ಮಾಡುವ ಅಥವಾ ಹನಿ ನೀರಾವರಿ ವ್ಯವಸ್ಥೆ ಮಾದರಿ, ವಾಯು ಮಾಲಿನ್ಯ ನಿಯಂತ್ರಣ(Air Pollution Control): ವಾಯು ಮಾಲಿನ್ಯದ ಪರಿಣಾಮಗಳು ಮತ್ತು ಅದನ್ನು ನಿಯಂತ್ರಿಸುವ ವಿಧಾನಗಳನ್ನು ತೋರಿಸುವ ಮಾದರಿ, ಜಲ ಶುದ್ಧೀಕರಣ ಮಾದರಿ(Water Purification Model): ಕಲುಷಿತ ನೀರನ್ನು ಶುದ್ಧೀಕರಿಸುವ ಹಂತಗಳನ್ನು ಪ್ರದರ್ಶಿಸುವುದು, ಅರಣ್ಯ ರಕ್ಷಣೆ(Forest Conservation): ಅರಣ್ಯ ಸಂರಕ್ಷಣೆಯ ಮಹತ್ವ ಅಥವಾ ಅರಣ್ಯನಾಶದ ಪರಿಣಾಮಗಳನ್ನು ವಿವರಿಸುವ ಮಾದರಿ, ಸೌರವ್ಯೂಹದ ಮಾದರಿ(Solar System Model): ಗ್ರಹಗಳ ಮತ್ತು ಸೂರ್ಯನ ಸ್ಥಾನವನ್ನು ತೋರಿಸುವ ಮಾದರಿ, ಹೃದಯ ಅಥವಾ ಮಾನವನ ಜೀರ್ಣಾಂಗ ವ್ಯವಸ್ಥೆ(Heart or Human Digestive System): ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಾನವ ಅಂಗಾಂಗಗಳ ಕಾರ್ಯವನ್ನು ತೋರಿಸುವ ಮಾದರಿ, ಪರಮಾಣು ವಿದ್ಯುತ್ ಸ್ಥಾವರ(Nuclear Power Plant): ಪರಮಾಣು ಶಕ್ತಿಯು ಹೇಗೆ ವಿದ್ಯುತ್ ಉತ್ಪಾದಿಸುತ್ತದೆ ಎಂಬುದನ್ನು ವಿವರಿಸುವ ಕಾರ್ಯ ಮಾದರಿ, ಹಗಲು ಮತ್ತು ರಾತ್ರಿ ಮಾದರಿ(Day and Night Working Model): ಭೂಮಿಯ ಅಕ್ಷದ ಸುತ್ತ ತಿರುಗುವಿಕೆಯಿಂದ ಹಗಲು ಮತ್ತು ರಾತ್ರಿ ಹೇಗೆ ಉಂಟಾಗುತ್ತದೆ ಎಂಬುದನ್ನು ತೋರಿಸುವುದು ಸೇರಿದಂತೆ ಹಲವು ಅತ್ಯಧ್ಬುತ ಮಾದರಿಗಳು ಇದ್ದವು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕೋಟೆ ಗ್ರಾಮದ ರೈತರಿಂದ ಲಕ್ಕೆ ಹಬ್ಬ ಆಚರಣೆ

ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನೂ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಶಮಾ, ಕಾರ್ಯದರ್ಶಿ ಝುಲ್ಫಿಕರ್ ಅಹಮದ್, ಇಮ್ತಿಯಾಜ್, ಅತಿಥಿಗಳಾದ ಶೃತಿ ಕತಿಜಾ, ರಮೇಶ್ ಹಾಸನ್ ಸೇರಿದಂತೆ ಇತರರು ಇದ್ದರು.





