ಹಾಸನ | ವೆನುಜುವೆಲಾ ದೇಶ: ಸಾಮ್ರಾಜ್ಯಶಾಹಿ ಅಮೇರಿಕಾ ದಾಳಿ ಖಂಡಿಸಿ ಸಿಪಿಐಎಂ ಪ್ರತಿಭಟನೆ

Date:

ವೆನುಜುವೆಲಾ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾರಿಕಾ ದಾಳಿ ಅಂತರಾಷ್ಟ್ರೀಯ ನೀತಿಗಳಿಗೆ ವಿರುದ್ಧವಾದದ್ದು ಮಾತ್ರವಲ್ಲ ಇದು ಅತ್ಯಂತ ದುರಾಕ್ರಮಣ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಹಾಗೆಯೇ, ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಸಿಪಿಐಎಂ ಹಾಸನ ಜಿಲ್ಲಾ ಸಮಿತಿಯು ನಗರದ ಮಹಾವೀರ ವೃತ್ತದಲ್ಲಿ “ವೆನುಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾರಿಕಾ ದಾಳಿ ಖಂಡಿಸಿ, ವೆನುಜುವೆಲ್ಲಾದ ಅಧ್ಯಕ್ಷ ನಿಕೊಲೊಸ್ ಮಡುರೋ ಮತ್ತು ಆತನ ಹೆಂಡತಿ ಬಿಡುಗಡೆಗೆ ಆಗ್ರಹಿಸಿ, ಅಮೇರಿಕಾದ ಸುಂಕ ನೀತಿ ವಿರೋಧಿಸಿ” ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್.ನವೀನ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. 

ಅಮೇರಿಕಾ ಜಗತ್ತಿಗೆ ಪ್ರಜಾಪ್ರಭುತ್ವದ ಕುರಿತು ಪಾಠ ಮಾಡುತ್ತಾ ನಾನು ಪ್ರಜಾಪ್ರಭುತ್ವ ರಾಷ್ಟ ಎಂದು ಹೇಳುತ್ತಲೇ ಅತ್ಯಂತ ಪ್ರಜಾಪ್ರಭುತ್ವ ವಿರೋಧಿಯಾಗಿ ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿದೆ. ವೆನುಜುವೆಲಾದಂತಹ ಒಂದು ಸ್ವತಂತ್ರ ಸಾರ್ವಭೋಮ ರಾಷ್ಟçದ ಮೇಲೆ ಏಕಾಏಕಿ ನುಗ್ಗಿ ಬಾಂಬ್ ದಾಳಿ ನಡೆಸಿ ನೂರಕ್ಕೂ ಹೆಚ್ಚು ಜನರನ್ನು ಕೊಂದು ಅಲ್ಲಿ ಅಧ್ಯಕ್ಷರನ್ನು ಅಪಹರಿಸಿರುವುದು ಅತ್ಯಂತ ಖಂಡನೀಯ ಮತ್ತು ಇದರ ಹಿಂದಿನ ಅಮೇರಿಕಾದ ಉದ್ದೇಶ ಆತಂಕ ಮೂಡಿಸುವಂತಹದ್ದು. ವೆನುಜುವೆಲ್ಲಾದ ತೈಲ ಮತ್ತು ಖನಿಜ ಸಂಪತ್ತನ್ನ ತನ್ನದಾಗಿಸಿಕೊಳ್ಳಬೇಕು ಆ ಮೂಲಕ ತನ್ನ ದೇಶದ ಕಂಪನಿಗಳಿಗೆ ಲಾಭ ಮಾಡಿಕೊಡಬೇಕೆನ್ನುವ ಉದ್ದೇಶ ಇದರ ಹಿಂದಿರುವುದು ಸ್ಪಷ್ಟವಾಗುತ್ತಿದೆ.

ಅಮೇರಿಕಾದ ಬಂಡವಾಳಶಾಹಿ ವ್ಯವಸ್ಥೆ ಇಂದು ಬಿಕ್ಕಟ್ಟಿಗೆ ಸಿಲುಕಿದ್ದು ಅದರಿಂದ ಹೊರಬರಲು ಟ್ರಂಪ್ ನೇತೃತ್ವದಲ್ಲಿ ಬಂಡವಾಳಶಾಹಿ ಇಂತಹ ಕೃತ್ಯಗಳಿಗೆ ಇಳಿದಿದೆ. ಇದು ಜಾಗತಿಕವಾಗಿ ಎಲ್ಲಾ ಮಾನವ ಪರರನ್ನು ಮತ್ತು ಶಾಂತಿಪ್ರಿಯರನ್ನು ಒಂದುಗೂಡಿಸಿ ಮುಂದಾಗಬಹುದಾದ ಯುದ್ಧದಂತಹ ಅಪಾಯವನ್ನು ತಡೆಯಬೇಕಾದ ಸಂದರ್ಭ. ತನ್ನ ದೇಶದ ಎಲ್ಲಾ ಸಂಪತ್ತನ್ನು ಅಲ್ಲಿಯ ಜನರಿಗಾಗಿ ಬಳಕೆ ಮಾಡಲು ಮುಂದಾಗಿರುವ ಲ್ಯಾಟಿನ್ ಅಮೇರಿಕಾದ ವೆನುಜುವೆಲಾ, ಕ್ಯೂಬಾದಂತಹ ರಾಷ್ಟçಗಳ ಸಮಾಜವಾದಿ ನಿಲುವಿನಿಂದ ವಿಚಲಿತವಾಗಿರುವ ಅಮೇರಿಕಾ ಈ ರಾಷ್ಟçಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಆ ರಾಷ್ಟçಗಳ ಮೇಲೆ ಆರ್ಥಿಕ ದಿಗ್ಬಂದನವನ್ನು ವಿಧಿಸಿ, ಅವುಗಳನ್ನು ಸಂಕಷ್ಟಕ್ಕೆ ಈಡುಮಾಡಿ, ತನ್ನ ವಶಮಾಡಿಕೊಳ್ಳುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ನವೀನ್ ಕುಮಾರ್ ಆಕ್ರೋಶ ವ್ಯಕ್ತಪಡಿಸುತ್ತಾ ಕೂಡಲೇ ವೆನುಜುವೆಲ್ಲಾದ ಅಧ್ಯಕ್ಷ ನಿಕೊಲೊಸ್ ಮಡುರೋ ಮತ್ತು ಆತನ ಹೆಂಡತಿ ಬಿಡುಗಡೆಗೆ ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಮೇರಿಕಾ ಇಂದು ಜಗತ್ತಿನ ಸಂಪತ್ತಿನ ಮೇಲೆ ತನ್ನ ಹಿಡಿತ ಸಾಧಿಸಲು ಸುಂಕ ಸಮರಕ್ಕೆ ಅಣಿಯಾಗಿದ್ದು ಇದರಿಂದ ಭಾರತದ ಕೃಷಿಕರು ಮತ್ತು ಇಲ್ಲಿಯ ಉತ್ಪಾದನೆ ಸೇರಿದಂತೆ ಜಗತ್ತಿನ ಅನೇಕ ರಾಷ್ಟಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಭಾರತದ ಉತ್ಪನ್ನಗಳ ಮೇಲೆ ಅಮೇರಿಕಾ ಶೇ ೫೦೦ ರಷ್ಟು ಆಮದು ಸುಂಕ ವಿಧಿಸಿದರೆ ಭಾರತದ ಯಾವ ಉತ್ಪನ್ನಗಳನ್ನು ಅಮೇರಿಕಾದಂತಹ ದೇಶಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ನಮ್ಮಂತಹ ದೇಶದ ಆರ್ಥಿಕತೆಯ ಮೇಲೆ ತೀರ್ವವಾದ ಹೊಡೆತ ಬೀಡುತ್ತದೆ. ಅಮೇರಿಕಾದ ಇಂತಹ ನೀತಿಗಳನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ ಎಂದು ಸಿಪಿಐಎಂ ಮುಖಂಡರು ತಿಳಿಸಿದರು.

ಇದನ್ನೂ ಓದಿದ್ದೀರಾ?ಹಾಸನ | ಆನೆ ದಾಳಿ; ಕಾರ್ಮಿಕ ಮಹಿಳೆ ಸಾವು 

ಕೆಂಬಾವುಟಗಳು ಮತ್ತು ಹೇಳಿಕೆಗಳನ್ನು ಹಿಡಿದಿದ್ದ ಪಕ್ಷದ ಕಾರ್ಯಕರ್ತರು ಅಮೇರಿಕಾದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಜಿಲ್ಲಾ ಸಮಿತಿ ಸದಸ್ಯರುಗಳಾದ ಜಿ.ಪಿ.ಸತ್ಯನಾರಾಯಣ, ಅರವಿಂದ ಮತ್ತು ಜನಪರ ಸಂಘಟನೆಗಳ ಮುಖಂಡರಾದ ರಾಜಶೇಖರ್ ಹುಲಿಕಲ್, ರಾಜು ಗೊರೂರು, ಟಿ.ಆರ್.ವಿಜಯ್ ಕುಮಾರ್, ಪ್ರಕಾಶ್, ಮುಬಷಿರ್ ಅಹಮದ್, ಇರ್ಷಾದ್ ಅಹಮ್ ದೇಸಾಯಿ, ಸಿ ಸೌಭಾಗ್ಯ, ಮಮತಾಶಿವು, ಚಿನ್ನೇನಹಳ್ಳಿ ಸ್ವಾಮಿ, ಅನ್ಸರ್, ರಮೇಶ್ ಮುಂತಾದ ಪ್ರಮುಖರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...