ಹಾಸನ | zomato ಕಾರ್ಮಿಕರ ಮುಷ್ಕರ

Date:

ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೊಮ್ಯಾಟೊ(Zomato) ಕಂಪನಿಯ ರೈಡರ್‌ಗಳು ಹಾಸನದಲ್ಲಿ ಆರಂಭಿಸಿರುವ ಕೆಲಸ ಸ್ಥಗಿತಗೊಳಿಸುವ ಮುಷ್ಕರ ಎಂಟನೇ ದಿನ ಮುಂದುವರಿದಿದೆ.

ಕಳೆದ ಸೋಮವಾರದಿಂದ ಡೆಲಿವರಿ ಸೇವೆಗಳನ್ನು ಬಹುತೇಕ ಸ್ಥಗಿತಗೊಳಿಸಿರುವ ರೈಡರ್‌ಗಳು, ಕಂಪನಿ ಆಡಳಿತವು ತಮ್ಮ ಬೇಡಿಕೆಗಳಿಗೆ ಯಾವುದೇ ಮನ್ನಣೆ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಪ್ರತಿ ಕಿಲೋಮೀಟರ್‌ಗೆ ರೂ.15 ಆರ್ಡರ್ ಪೇ ನಿಗದಿ ಮಾಡಬೇಕು ಅಥವಾ ಫುಲ್ ಟೈಮ್ ರೈಡರ್‌ಗಳಿಗೆ ದಿನಕ್ಕೆ ರೂ.250 ಶಾಶ್ವತ ಪ್ರೋತ್ಸಾಹಧನ (ಇನ್ಸೆಂಟಿವ್‌) ಹಾಗೂ ಪಾರ್ಟ್ ಟೈಮ್ ರೈಡರ್‌ಗಳಿಗೆ ರೂ.100 ಶಾಶ್ವತ ಇನ್ಸೆಂಟಿವ್ ನೀಡಬೇಕು. ಪ್ರತಿ ವರ್ಷ ಜನವರಿ. 1ರಿಂದ ಆರ್ಡರ್ ಪೇಯಲ್ಲಿ ಕನಿಷ್ಠ 10 ಶೇಕಡಾ ಹೆಚ್ಚಳ ಹಾಗೂ ಶಾಶ್ವತ ಇನ್ಸೆಂಟಿವ್‌ನಲ್ಲಿ ರೂ.30 ಹೆಚ್ಚಳ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

 “ಪ್ರತಿ ವರ್ಷ ಮುಷ್ಕರ ನಡೆಸುವ ಪರಿಸ್ಥಿತಿ ಉಂಟಾಗಬಾರದು. ಸ್ಪಷ್ಟವಾದ ನೀತಿ ರೂಪಿಸಿದರೆ ಕಂಪನಿಗೂ ರೈಡರ್‌ಗಳಿಗೂ ಲಾಭಕರವಾಗುತ್ತದೆ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಆರ್ಡರ್ ಪಿಕಪ್ ಸ್ಥಳದ ದೂರ ಹಾಗೂ ಡೆಲಿವರಿ ನಂತರ ವರ್ಕ್ ಜೋನ್‌ಗೆ ಮರಳುವ ದೂರ ಸೇರಿ ಒಟ್ಟು ಪ್ರಯಾಣಿಸಿದ ಕಿಲೋಮೀಟರ್‌ಗೆ ಪಾವತಿ ನೀಡಬೇಕು ಎಂಬುದೂ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಮಳೆಯ ಸರ್ಜ್, ಹಬ್ಬದ ಸರ್ಜ್ ಸೇರಿದಂತೆ ಇತರೆ ಸರ್ಜ್‌ಗಳನ್ನು ಪ್ರತಿ ಆರ್ಡ‌ರ್ ಗೆ ಕನಿಷ್ಠ ರೂ.20 ನೀಡಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿದ್ದೀರಾ?ಹಾಸನ | ಸೈಟ್ ಹೋರಾಟ: ನ್ಯಾಯಾಲಯ ಮಹತ್ವದ ಆದೇಶ

ರೈಡರ್‌ಗಳ ಮುಷ್ಕರದಿಂದ ನಗರದಲ್ಲಿನ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ವ್ಯಾಪಾರದಲ್ಲಿ ಕುಸಿತ ಅನುಭವಿಸುತ್ತಿದ್ದು, ಗ್ರಾಹಕರು ಸಮಯಕ್ಕೆ ತಮಗೆ ಇಷ್ಟವಾದ ಆಹಾರ ಲಭ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತ ಕಂಪನಿ ವಲಯದಿಂದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಹೊರಬರಬೇಕಿದೆ. ಸಮಸ್ಯೆ ಶೀಘ್ರದಲ್ಲೇ ಬಗೆಹರಿಯುವ ನಿರೀಕ್ಷೆಯಲ್ಲಿರುವ ಹೋಟೆಲ್ ಮಾಲೀಕರು ಹಾಗೂ ಗ್ರಾಹಕರು, ಮಾತುಕತೆಯ ಮೂಲಕ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...