ಹಾಸನ | 30 ತಿಂಗಳ ಹೋರಾಟಕ್ಕೆ ಸಂದ ಜಯ; ₹1.75 ಲಕ್ಷದಷ್ಟು ವಿದ್ಯುತ್‌ ಬಿಲ್ ಮನ್ನಾ

Date:

ಕಾಫಿ ಬೆಳೆಗಾರ ಪಿ. ವಿಶ್ವನಾಥ್ ಅವರಿಗೆ ಬಂದಿದ್ದ ₹1.75 ಲಕ್ಷ ಮೊತ್ತದ ವಿದ್ಯುತ್‌ ಬಾಕಿಯನ್ನು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮನ್ನಾ ಮಾಡಿದೆ. ಅಲ್ಲದೆ, ವಿಶ್ವನಾಥ್‌ ಅವರಿಗೆ ₹20 ಸಾವಿರ ಪರಿಹಾರ ನೀಡುವಂತೆ ಜುಲೈ 10ರಂದು ಸೆಸ್ಕಾಂಗೆ ಆದೇಶ ನೀಡಿತ್ತು.

ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಆನುಘಟ್ಟ ಗ್ರಾಮದ ಕಾಫಿ ಪಲ್ಪರ್ ಯಂತ್ರಕ್ಕಾಗಿ ಪಡೆದಿದ್ದ 3 ಫೇಸ್‌ ವಿದ್ಯುತ್‌ ಸಂಪರ್ಕಕ್ಕೆ ಪ್ರತಿ ತಿಂಗಳು ಅಂದಾಜು ₹1,500 ವಿದ್ಯುತ್ ಬಿಲ್ ಬರುತ್ತಿತ್ತು. 2020ರ ನವೆಂಬರ್‌ನಲ್ಲಿ ಬರೋಬ್ಬರಿ ₹1,75,858 ವಿದ್ಯುತ್ ಬಿಲ್ ಬಂದಿದ್ದು, ಇದರಿಂದ ಆಘಾತಗೊಂಡ ವಿಶ್ವನಾಥ್ ಅವರು ಬಿಲ್‌ ಹಾಗೂ ಮೀಟರ್‌ ಅನ್ನು ಪುನಃ ಪರಿಶೀಲಿಸಲು ತಿಳಿಸಿದ್ದರು. ಆದರೆ ಎಲ್ಲವೂ ಸರಿಯಾಗಿಯೇ ಇದೆ. ನೀವು ಬಿಲ್‌ನ ಮೊತ್ತ ಕಟ್ಟಲೇಬೇಕೆಂದು ಮೀಟರ್‌ ರೀಡರ್‌ ಹೇಳಿದ್ದರು.

ನಂತರ ತಾಲೂಕಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅಲ್ಲಿಯೂ ಎಲ್ಲವೂ ಸರಿಯಾಗಿಯೇ ಇದೆ. ನೀವು ಒಮ್ಮೆಲೆ ಅಥವಾ ಕಂತಿನ ಪ್ರಕಾರ ಕಟ್ಟಿ ಎಂದು ಹೇಳಿದ್ದರು.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕುಲಶಾಸ್ತ್ರ ಅಧ್ಯಯನ ವರದಿ; ಯಥಾವತ್ ಜಾರಿಗೆ ಕುಂಚಿಟಿಗರ ಆಗ್ರಹ

ಕೆಲವು ದಿನಗಳ ನಂತರ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದಾವೆ ಹೂಡಿದ ವಿಶ್ವನಾಥ್‌, ವಕೀಲರ ನೇಮಕ ಮಾಡದೇ ತಾವೇ ವಾದ ಮಂಡಿಸಿದರು. ಅಗತ್ಯ ದಾಖಲೆಗಳನ್ನು ಒದಗಿಸಿ, ಸತತ 30 ತಿಂಗಳು ಹೋರಾಟ ನಡೆಸಿದ್ದಾರೆ.

“ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಇದೀಗ ₹1,75,858ರಷ್ಟು ಬಿಲ್‌ನ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡಿದ್ದು, ವಿದ್ಯುತ್ ಇಲಾಖೆಯಿಂದ ಸೇವಾ ಲೋಪಕ್ಕಾಗಿ ₹ 10,000 ಮತ್ತು ದಾವೆ ಹೂಡಿದ ವೆಚ್ಚ ಹಾಗೂ ಆನುಭವಿಸಿದ ಮಾನಸಿಕ ವೇದನೆಗಾಗಿ ₹10,000 ಸೇರಿದಂತೆ ಒಟ್ಟಾರೆ ₹ 20,000 ಮೊತ್ತವನ್ನು ಮುಂದಿನ 45 ದಿನದೊಳಗೆ ನೀಡಲು ಆದೇಶ ಹೊರಡಿಸಿದೆ” ಎಂದು ಸಂತ್ರಸ್ತ ಗ್ರಾಹಕ ಪಿ ವಿಶ್ವನಾಥ್ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಮಣ್ಣಿನ ಹೆಣ್ಣು ದನಿಗಳು | ಕವಯಿತ್ರಿ, ಅನುವಾದಕಿ, ಕಲಾವಿದೆ- ಎಂ.ಆರ್. ಕಮಲ

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಹಾಸನ | ಫ್ಲಿಪ್‌ಕಾರ್ಟ್, ಅಮೇಜಾನ್ ಕಛೇರಿ ಎದುರು ಬೃಹತ್ ಪ್ರತಿಭಟನೆ ಎಚ್ಚರಿಕೆ; ಕೆಪಿಆರ್‌ಎಸ್

ಅಮೇಜಾನ್ ಸಹಭಾಗಿತ್ವದ ಪ್ಲಿಪ್‌ಕಾರ್ಟ್ ನಲ್ಲಿ ಒಂದು ಲೀಟರ್ ಹಾಲನ್ನು ಒಂದು ರೂ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಕಾನೂನು ಕ್ಷೇತ್ರದಲ್ಲಿ ಜಿಲ್ಲೆಯ ಮಹಿಳೆಯರು 

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಹಾಸನ ಮಣ್ಣಿನ ಹೆಣ್ಣು ದನಿಗಳು | ವೈದ್ಯಕೀಯ ಕ್ಷೇತ್ರಕ್ಕೆ ಜಿಲ್ಲೆಯ ಮಹಿಳೆಯರ ಕೊಡುಗೆ

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...