ಡಾ. ನಾ.ಸು ಹರ್ಡೀಕರ್ ರವರ ಪುಣ್ಯಸ್ಮರಣೆಯ ಅಂಗವಾಗಿ ಭಾರತೀಯ ಸೇವಾದಳ ಮತ್ತು ಪುರಸಭೆಯ ಪೌರಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಬೇಲೂರಿನ ಐತಿಹಾಸಿಕ ಅಮೃತೇಶ್ವರ ದೇವಾಲಯದ ಆವರಣ ಮತ್ತು ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ್ದಾರೆ.
ಸ್ವಚ್ಚಾತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಮೃತೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಅಶೋಕ್, “ಐತಿಹಾಸಿಕ ದೇವಾಲಯಗಳಲ್ಲಿ ಅಮೃತೇಶ್ವರಿ ದೇವಾಲಯ ಒಂದಾಗಿದೆ. ಈ ದಾವಾಲಯ ಪಾಳು ಬಿದ್ದು ಗಿಡ ಗಂಟಿಗಳು ಬೆಳೆದಿದ್ದು, ವಿಷಜಂತು ಪ್ರಾಣಿಗಳು ಜೀವಿಸುತ್ತಿದ್ದವು. ಇದನ್ನು ಮನಗಂಡು ನಮ್ಮ ಸಮಿತಿಯು ಸಮಾರು 50 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿ ದೇವಾಲಯ ಜೀರ್ಣೋದ್ದಾರಕ್ಕೆ ಮುಂದಾಗಿದೆ. ಈ ಕಾರ್ಯಕ್ಕೆ ವಿವಿಧ ಸಂಘ-ಸಂಸ್ಥೆಗಳು ಮತ್ತು ಸರ್ಕಾರದಿಂದ ಅನುದಾನ ದೊರೆತಿದೆ” ಎಂದು ಹೇಳಿದ್ದಾರೆ.
ಪುರಸಭೆ ಅಧ್ಯಕ್ಷೆ ತೀರ್ಥ ಕುಮಾರಿ ಮಾತನಾಡಿ, “ನಮ್ಮ ಪುರಸಭೆ ವತಿಯಿಂದ ಅಮೃತೃಶ್ವರ ದೇವಾಲಯ ಆವರಣ ಸ್ವಚ್ಛತೆ ನಡೆಸುತ್ತಿದ್ದೇವೆ. ಅದರಂತೆ ಈ ಹಿಂದೆಯು ಸಹ ಪುರಸಭೆ ಮತ್ತು ಹಸಿರು ಭೂಮಿ ಪ್ರತಿಷ್ಟಾನ ವತಿಯಿಂದ ಬಿಷ್ಟಮ್ಮನ ಕೆರೆ ಪಕ್ಕದಲ್ಲಿರುವ ಕಲ್ಯಾಣಿ ಮತ್ತು ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆ ಮಾಡಿಸಿದ್ದೆವು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
“ದೇವಾಲಯಕ್ಕೆ ಬರುವ ಪ್ರವಾಸಿಗರು ಮತ್ತು ಭಾಕ್ತಾದಿಗಳು ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗುತ್ತಿದೆ. ಭಕ್ತಾದಿಗಳು ಸ್ನಾನ ಮಾಡಿದ ಬಟ್ಟೆಬರೆಗಳನ್ನು ಕಲ್ಯಾಣಿಯಲ್ಲೆ ಬಿಡಬಾರದು” ಎಂದು ಅವರು ಹೇಳಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾರತೀಯ ಸೇವ ದಳದ ಜಿಲ್ಲಾ ಸಂಚಾಲಕಿ ರಾಣಿ, ಉಪಾಧ್ಯಕ್ಷ ಮಂಜಣ್ಣ, ಸೋಮಶೇಖರ್, ಗಿರೀಶ್, ಕೇಶವೇಗೌಡ, ಬಾಳೆಹಣ್ಣು ಮಂಜಣ್ಣ, ಜ್ಯೋತಿ, ಲೋಹಿತ್, ಮೇಸ್ತ್ರಿ ಹರೀಶ್, ನಾಗರಾಜು, ನೂರ್ ಅಹಮದ್ ಇದ್ದರು.




