“ಮನರೇಗಾ ಯೋಜನೆಯನ್ನು ರದ್ದು ಮಾಡಿ ಸಂಪೂರ್ಣ ನಾಶ ಮಾಡುವ ಹುನ್ನಾರ ಕೇಂದ್ರ ವಿಕಸಿತ್ ಭಾರತ ಜಿ ರಾಮ್, ಜಿ ಬಿಲ್ಲ ಯೋಜನೆ ಮಾಡಿರುವುದನ್ನು ಖಂಡಿಸಿ ಕಾರ್ಮಿಕರು ಡಿ. 29ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ”
ಹಾವೇರಿ ಪಟ್ಟಣದ ಮುರುಘರಾಜೇಂದ್ರ ಮಠದಲ್ಲಿ ಕೇಂದ್ರ ಸರಕಾರ ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿದನ್ನು ಖಂಡಿಸಿ ಜೆಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳ ಸoಯುಕ್ತ ಹೋರಾಟ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು ಸಂಸುದ್ದಿನ ಬಳಿಗಾರ ಮಾತನಾಡಿ, “ಕೇಂದ್ರ ಸರಕಾರದ ಈ ಹುನ್ನಾರವನ್ನು ಜನ ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಬೇಕು. ಬಂಜಾಬಿನಲ್ಲಿ ರೈತರು ಹೋರಾಟ ಮಾಡಿದಂತೆ, ಮನರೇಗಾ ಉಳಿಸಲು ಹೋರಾಟ ಮಾಡಬೇಕಿದೆ” ಎಂದು ಅವರು ಕರೆ ನೀಡಿದರು.
ಮನರೇಗಾ ಯೋಜನೆಯಲ್ಲಿ ಇದ್ದ ಯೋಜನೆಗಳು ಬದಲಾದ ರಾಮ್ ಜಿ ಯೋಜನೆಯಲ್ಲಿ ಈಗ ಬದಲಾವಣೆ ಆಗಿವೆ. ಅವರು ಹೇಳಿದ ಹಾಗೆ ನಾವು ಕೆಲಸ ಮಾಡಬೇಕು. ಮೊದಲು ಈ ಮನರೇಗಾ ಯೋಜನೆಯನ್ನು ಶ್ರೀಮಂತರು ವಿರೋಧ ಮಾಡುತ್ತಿದ್ದರು. ಈಗ ಕೇಂದ್ರ ಸರಕಾರ ವಿರೋಧ ಮಾಡುತ್ತಿದೆ” ಎಂದು ಕಿಡಿಕಾರಿದರು.
“ಕ್ರಿಯಾ ಯೋಜನೆ ನಾವು ಮಾಡುತ್ತಿದ್ದೆವು. ಆದರೆ ಈಗ ನಮಗೆ ಮಾಡಲು ಬರುವುದಿಲ್ಲ. ಎಲ್ಲವೂ ಕೇಂದ್ರ ಯೋಜನೆ ಮಾಡಿದ ಹಾಗೆ ಮಾಡಬೇಕು. ಮಹಾತ್ಮಾ ಗಾಂಧಿ ಅವರು ಹೇಳುತ್ತಾರೆ ‘ಅಂತೋದಯ ದಿಂದ ಸರ್ವೋದಯ ಕಡೆಗೆ, ಗ್ರಾಮ ಸ್ವರಾಜದಿಂದ ಹಿಂದ್ ಸ್ವರಾಜ್ ಕಡೆಗೆ’ ಎಂದು ಹೇಳುತ್ತಾರೆ. ಈ ಆಶಯವನ್ನು ಕೇಂದ್ರ ಸರಕಾರ ನಾಶ ಮಾಡಲು ಹೊರಟಿದೆ” ಎಂದರು.
“ಮೊದಲು 90ರಷ್ಟು ಕೇಂದ್ರ ಕೊಡುತ್ತಿದ್ದರೆ, 10ರಷ್ಟು ರಾಜ್ಯ ಸರಕಾರ ಕೊಡುತ್ತಿತ್ತು. ಆದರೆ ಈಗ 60ರಷ್ಟು ಕೇಂದ್ರ ಕೊಡುತ್ತೀವೆ 40ರಷ್ಟು ರಾಜ್ಯ ಸರಕಾರ ಕೊಡಬೇಕೆಂದು ಕೇಂದ್ರ ಸರಕಾರ ಹೇಳುತ್ತಿದೆ. ಇದನ್ನು ನಾವೆಲ್ಲರೂ ಪ್ರಶ್ನೆ ಮಾಡಬೇಕು” ಎಂದರು.
ಹಳ್ಳಿ ಹಳ್ಳಿಗಳಲ್ಲಿ ನಮ್ಮ ಮನರೇಗಾ ಮೂಲಕ ಜನರ ಅಭಿವೃದ್ಧಿ ಆಗಿದೆ. ನಮ್ಮ ಜನಗಳಿಗೆ ಹಕ್ಕು ಸ್ವತಂತ್ರ ಇತ್ತು. ಇನ್ನುಮುಂದೆ ಆ ಹಕ್ಕು ಸ್ವತಂತ್ರ ಇರುವುದಿಲ್ಲ. ನಾವೆಲ್ಲರೂ ಈ ಹುನ್ನಾರವನ್ನು ಅರ್ಥ ಮಾಡಿಕೊಂಡು ಕರ ಪತ್ರ ಹಂಚಿ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು. ಒಗ್ಗಟ್ಟಿನ ಮೂಲಕ ಹೋರಾಟ ಮಾಡೋಣ. ನಮ್ಮ ಕಾರ್ಮಿಕರ ಕೂಗು ದೆಹಲಿ ವರೆಗೂ ಕೇಳುವ ಹಾಗೆ ನಾವು ಪ್ರತಿಭಟನೆ ಮಾಡಬೇಕು” ಎಂದು ಕರೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಡಿವೈಎಫ್ಐ ಬಸವರಾಜ ಪೂಜಾರ ಮಾತನಾಡಿ, “ಮನರೇಗಾ ರದ್ದು ಮಾಡಿ ಕೇಂದ್ರ ಸರಕಾರ ವಿಕೇಂದ್ರೀಕರಣವನ್ನು ಕೊನೆಗೂಲಿಸಿ ಕೇಂದ್ರೀಕರಣ ಮಾಡಲು ಹೊರಟಿದ್ದಾರೆ. ನಮ್ಮ ತಟ್ಟೆಯಲ್ಲಿ ಇರುವ ಅನ್ನವನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ಮನರೇಗಾ ಯೋಜನೆ ಉಳಿಯಲು ಒಂದು ದಿನದ ಹೋರಾಟ ಅಷ್ಟೇ ಸಾಲದು. ಇದಕ್ಕೆ ಮೋದಿ ಸರಕಾರ ಬಗ್ಗುವುದಿಲ್ಲ. ಈ ಹೋರಾಟ ನಿರಂತರ ನಡೆಯಬೇಕು. ಹಂತ ಹಂತವಾಗಿ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆಗಳನ್ನು ರೂಪಿಸಬೇಕು” ಎಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲೆಯ ಐದು ತಾಲೂಕಿನ ಕಾರ್ಮಿಕರ ಮುಖಂಡರು, ಡಿವೈಎಫ್ಐ ಸಂಘಟನೆ, ದಲಿತ ಸಂಘ, ಲೋಯಲಾ ವಿಕಾಸ ಕೇಂದ್ರ, ರೈತ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.





