70ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸರಳ, ಸಂಭ್ರಮದಿಂದ ಹಾವೇರಿ ಪಟ್ಟಣದ ಗುರು ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ಆಚರಿಸಿತು.
ಕರವೇ ಸ್ವಾಭಿಮಾನಿ ಬಳಗ ಜಿಲ್ಲಾ ಅಧ್ಯಕ್ಷರು ಯಲ್ಲಪ್ಪ ಮರಾಠೆ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ಯಾಲಕ್ಕಿ ಕಂಪಿನ ನಾಡು ಹೆಗ್ಗಳಿಕೆಗೆ ಪಾತ್ರವಾದ ಹಾವೇರಿಯಲ್ಲಿ ಇಂದು ಕನ್ನಡ ದ್ವಜ ಹಾರಾಡುತ್ತಿದೆ. ಕನ್ನಡ ಕಲರವ ಕನ್ನಡ ರಾಜ್ಯೋತ್ಸವಕ್ಕೆ ಹಬ್ಬದ ವಾತಾವರಣ, ಕನ್ನಡ ನಾಡು, ನುಡಿ, ನೆಲ, ಜಲ ಭಾಷೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ತನ್ನದೇ ಆದ ಶೈಲಿಯಲ್ಲಿ ಹೋರಾಟಗಳನ್ನು ಮಾಡುತ್ತಾ ಬಂದಿದೆ” ಎಂದು ಹೇಳಿದರು.
“ನೊಂದವರ ಧ್ವನಿಯಾಗಿ ಸಂಘಟನೆ ಜಿಲ್ಲೆಯಲ್ಲಿ ತನ್ನದೇ ಆದ ಚಾಪು ಮೂಡಿಸಿದೆ” ಎಂದು ಹೇಳಿದರು.
ನವಂಬರ್ 28ಕ್ಕೆ ಕೆಚ್ಚೆದೆ ಕನ್ನಡಿಗರು ಕಾರ್ಯಕ್ರಮ
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ವತಿಯಿಂದ ಇದೇ ತಿಂಗಳು ನವಂಬರ್ 28ಕ್ಕೆ ಹಾವೇರಿ ಪಟ್ಟಣದ ಗುರುಭವದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಕೆಚ್ಚದೆ ಕನ್ನಡಿಗರು’ ಕಾರ್ಯಕ್ರಮವು ಸಂಜೆ ಮೂರಕ್ಕೆ ನಡೆಯಲಿದೆ.
ಈ ಕಾರ್ಯಕ್ರಮದ ವಿಶೇಷತೆವಾಗಿ ಸಾಹಿತಿಗಳಿಗೆ, ಕಲಾವಿದರಿಗೆ, ಮಾಜಿ ಸೈನಿಕರಿಗೆ, ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಗುವುದು.
“ನಂತರ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷರು ಯೂಸುಫ್ ಸೈಕಲಗಾರ, ಜಿಲ್ಲಾ ಮಹಿಳಾ ಅಧ್ಯಕ್ಷರು ಗೀತಾಬಾಯಿ ಲಮಾಣಿ, ತಾಲೂಕ ಅಧ್ಯಕ್ಷರು ರಾಜಾಭಕ್ಷ ಮಾನೇಗಾರ, ಜಿಲ್ಲಾ ಉಪಾಧ್ಯಕ್ಷರು ಪ್ರದೀಪ್ ಗೌಡರ್, ರೇಷ್ಮಾ ಬಿರಬ್ಬಿ, ಸಂಘಟನೆ ಪದಯಾಧಿಕಾರಿಗಳು ಸೇರಿದಂತೆ ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.





